Ad Widget .

ಕಳಸ: ಆಪರೇಷನ್ ಮಾಡ್ಬೇಕಾದ ಡಾಕ್ಟ್ರು ಫುಲ್ ಟೈಟು| ಅಮಾನತಿಗೆ ಆದೇಶಿಸಿದ ಸಚಿವ ದಿನೇಶ್ ಗುಂಡೂರಾವ್

ಸಮಗ್ರ ನ್ಯೂಸ್: ಆಪರೇಷನ್‌ ಥಿಯೇಟರ್‌ನಲ್ಲಿ ವೈದ್ಯನೊಬ್ಬ ಕುಡಿದು ಮಲಗಿದ ಘಟನೆ ಕಳಸದಲ್ಲಿ ನಡೆದಿದೆ. ವೈದ್ಯೋ ನಾರಾಯಣ ಎಂಬ ಮಾತಿಗೆ ಈ ಮೂಲಕ ವೈದ್ಯ ಮಸಿ ಬಳಿದಿದ್ದಾನೆ. ಸಂತಾನಹರಣ ಆಪರೇಷನ್‌ ಕ್ಯಾಂಪ್‌ನಲ್ಲಿ ವೈದ್ಯ ಈ ರೀತಿ ಮಾಡಿದ್ದಾನೆ.

Ad Widget . Ad Widget .

ವೈದ್ಯನ ಈ ರೀತಿಯ ವರ್ತನೆಯಿಂದ ಕಳಸ ಸರ್ಕಾರಿ ಆಸ್ಪತ್ರೆಗೆ ಬಂದ ಮಹಿಳೆಯರು ಪರದಾಡುವಂತೆ ಆಯಿತು. ಅಲ್ಲದೇ ವೈದ್ಯನ ಈ ಕೃತ್ಯಕ್ಕೆ ಸಿಬ್ಬಂದಿ ಸಹ ಸಾಥ್‌ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Ad Widget . Ad Widget .

ಪ್ರಕರಣದ ಕುರಿತಂತೆ ಮಾಹಿತಿ ಪಡೆದುಕೊಂಡ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ವೈದ್ಯನ ಅಮಾನತಿಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಚಿಕ್ಕಮಗಳೂರು ಡಿಹೆಚ್‌ಓಗೆ ಸಚಿವರು ಸೂಚನೆ ನೀಡಿದ್ದಾರೆ.

Leave a Comment

Your email address will not be published. Required fields are marked *