Ad Widget .

ಕಾಂಡೋಮ್ ಅನ್ನು ಹೀಗೂ ಬಳಸ್ತಾರಾ? ಆತಂಕ ತರಿಸಿದ ಅಧ್ಯಯನ ವರದಿ…

ಸಮಗ್ರ ನ್ಯೂಸ್: ಯುವಕರು ಕಾಂಡೋಮ್‌ಗಳನ್ನು ಸುರಕ್ಷಿತ ಲೈಂಗಿಕತೆಯ ಬದಲು ಮಾದಕ ವ್ಯಸನಕ್ಕಾಗಿ ಯುವಕರು ಬಳಸುತ್ತಿರುವ ಬಗ್ಗೆ ಅಪಾಯಕಾರಿ ಸಂಗತಿಯೊಂದು ಪಶ್ಚಿಮ ಬಂಗಾಳದ ದುರ್ಗಾಪುರ ಪ್ರದೇಶದಿಂದ ಅಧ್ಯಯನ ವೇಳೆ ಬಯಲಾಗಿದೆ.

Ad Widget . Ad Widget .

ಕಳೆದ ವರ್ಷ ಈ ಪ್ರದೇಶದಲ್ಲಿ ಸುವಾಸನೆಯ ಕಾಂಡೋಮ್‌ಗಳ ಮಾರಾಟವು ಗಗನಕ್ಕೇರಿತ್ತು. ಆದರೆ ಈ ಕಾಂಡೋಮ್‌ಗಳನ್ನು ಸುರಕ್ಷಿತ ಲೈಂಗಿಕತೆಗೆ ಬಳಸಲಾಗುತ್ತಿರಲ್ಲಿಲ್ಲ. ಬದಲಿಗೆ ಮಾದಕ ವ್ಯಸನಕ್ಕಾಗಿ ಬಳಸಲಾಗುತ್ತಿರುವ ವಿಚಾರ ವೈರಲ್ ಆಗಿತ್ತು. ಈ ಸುದ್ದಿ ಭಾರೀ ಚರ್ಚೆಯ ಜೊತೆಗೆ ಆತಂಕವನ್ನು ಹುಟ್ಟುಹಾಕಿತ್ತು. ಇದೀಗ ಕಾಂಡೋಮ್​ ಕೆಮಿಕಲ್ಸ್​ನಿಂದ ದೇಹಕ್ಕೆ ತುಂಬಾ ಅಪಾಯಕಾರಿ ಎಂಬ ಸಂಗತಿ ಅಧ್ಯಯನದಿಂದ ಬಯಲಾಗಿದೆ. ಆಪಲ್, ಸ್ಟ್ರಾಬೆರಿ ಮತ್ತು ಚಾಕೊಲೇಟ್‌ಗಳಂತಹ ಸುವಾಸನೆಯ ಮತ್ತು ಲೂಬ್ರಿಕೇಟೆಡ್ ಕಾಂಡೋಮ್‌ಗಳ ಮಾರಾಟವು ಸಾಕಷ್ಟು ಹೆಚ್ಚಾಗಿದೆ. ಯುವಕರು ಈ ಕಾಂಡೋಮ್‌ಗಳನ್ನು ಹೆಚ್ಚು ತೆಗೆದುಕೊಂಡು ಹೋಗುತ್ತಿದ್ದಾರೆ. ಅದರಲ್ಲಿಯೂ ಕೆಮಿಕಲ್​ನಿಂದ ಅಮಲೇರಿಸಿಕೊಳ್ಳಲು ಯುವಕರು ಹೆಚ್ಚಾಗಿ ಇದನ್ನು ಖರೀದಿ ಮಾಡುತ್ತಿದ್ದಾರೆ ಎಂದು ಮೆಡಿಕಲ್ ಸ್ಟೋರ್‌ನ ಅಂಗಡಿಯವರೊಬ್ಬರು ಬಹಿರಂಗಪಡಿಸಿದ್ದರು.

Ad Widget . Ad Widget .

ಕಾಂಡೋಮ್‌ ಮಾದಕ ವ್ಯಸನಕ್ಕೆ ಹೇಗೆ ಕಾರಣವಾಗಬಹುದು?
ರಸಾಯನಶಾಸ್ತ್ರದ ಶಿಕ್ಷಕರ ಪ್ರಕಾರ, ಸುವಾಸನೆಯ ಕಾಂಡೋಮ್‌ನ್ನು ದೀರ್ಘಕಾಲದವರೆಗೆ ಬಿಸಿನೀರಿನಲ್ಲಿ ನೆನೆಸಿದರೆ, ಸುವಾಸನೆಯಲ್ಲಿರುವ ದೊಡ್ಡ ರಾಸಾಯನಿಕ ಅಣುಗಳು ಒಡೆದು ಆಲ್ಕೊಹಾಲ್ಯುಕ್ತ ಸಂಯುಕ್ತಗಳನ್ನು ರೂಪಿಸುತ್ತವೆ. ಈ ಸಂಯುಕ್ತವು ಒಡೆದ ನಂತರ, ಸುಗಂಧ ಮತ್ತು ಹೊಗೆಯನ್ನು ಉಂಟುಮಾಡುತ್ತದೆ, ಇದು ಮಾದಕತೆಯನ್ನು ಉಂಟು ಮಾಡುತ್ತದೆ. ಕೆಮ್ಮಿನ ಸಿರಪ್, ಸ್ನಿಫಿಂಗ್ ಅಂಟು ಮತ್ತು ಕೈಗಾರಿಕಾ ಅಂಟುಗಳು ಸಹ ಇದೇ ರೀತಿಯ ಮಾದಕತೆಯನ್ನು ಉಂಟು ಮಾಡುತ್ತವೆ. ಆದರೆ, ಇವುಗಳು ಪ್ರಮುಖ ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆ. ಅದರಲ್ಲೂ ಬೆಳವಣಿಗೆಯ ಹಂತದಲ್ಲಿದ್ದರೆ ಅಪಾಯ ಹೆಚ್ಚು ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.

ಕುದಿಸಿದಾಗ ಸುವಾಸನೆಯ ಕಾಂಡೋಮ್‌ಗಳಿಂದ ಉಂಟಾದ ಈ ಹೊಗೆಯು ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಮತ್ತು ಶಾಶ್ವತವಾಗಿ ಮೆದುಳಿನ ಹಾನಿ ಮತ್ತು ನಡವಳಿಕೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಮಾತ್ರವಲ್ಲ ಜೊತೆಗೆ ಭಾವನಾತ್ಮಕ ಪ್ರಕ್ಷುಬ್ಧತೆ ಮತ್ತು ಕಲಿಕೆಯಲ್ಲಿ ಅಸಮರ್ಥತೆಯನ್ನು ಉಂಟುಮಾಡುತ್ತದೆ ಎಂದು ತಿಳಿದುಬಂದಿದೆ. ದುರ್ಗಾಪುರ ವಿಭಾಗೀಯ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಧೀಮನ್ ಮಂಡಲ್ ಎಂಬುವರು ಮಾತನಾಡಿ, ಕಾಂಡೋಮ್​ನಲ್ಲಿ ಆರೊಮ್ಯಾಟಿಕ್ ಸಂಯುಕ್ತಗಳು ಇರುತ್ತವೆ. ಇದು ತಂಬಾ ವ್ಯಸನಕಾರಿಯಾಗಿದೆ. ಅದನ್ನು ಮದ್ಯವನ್ನು ತಯಾರಿಸಲು ಬಳಸಲಾಗುತ್ತದೆ. ಈ ಆರೊಮ್ಯಾಟಿಕ್ ಸಂಯುಕ್ತವು ಡೆಂಡ್ರೈಟ್ ಅಂಟುಗಳಲ್ಲಿಯೂ ಕಂಡುಬರುತ್ತದೆ. ಅನೇಕ ಜನರು ವ್ಯಸನಕ್ಕಾಗಿ ಡೆಂಡ್ರೈಟ್ ಅನ್ನು ಸಹ ಬಳಸುತ್ತಾರೆ ಎಂದು ತಿಳಿಸಿದ್ದರು.

Leave a Comment

Your email address will not be published. Required fields are marked *