360° ಕೋನದಲ್ಲಿ ನಿಮ್ಮ ಏರಿಯಾನ ವೀಕ್ಷಿಸಬಹುದು| ಗೂಗಲ್ ಮ್ಯಾಪ್ ನ ಹೊಸ ಪೀಚರ್ ‘ಸ್ಟ್ರೀಟ್ ವ್ಯೂ’ನಲ್ಲಿ

ಸಮಗ್ರ ನ್ಯೂಸ್: ಗೂಗಲ್ ಮ್ಯಾಪ್ ನ ಅತ್ಯಂತ ಉಪಯುಕ್ತವಾಗಿರೋ ಸ್ಟ್ರೀಟ್ ವ್ಯೂ ಫೀಚರ್ ಇದೀಗ ಇಡೀ ಭಾರತದಲ್ಲಿ ಲಭ್ಯವಾಗಿದೆ. ಈ ಫೀಚರ್ ಬಳಸಿ ಬಳಕೆದಾರರು ಕುಳಿತಲ್ಲೇ ತಮ್ಮ ನಗರ, ಹಳ್ಳಿ, ಶಾಲೆ, ಪಟ್ಟಣದ ಚಿತ್ರವನ್ನು 360 ಡಿಗ್ರಿ ಆ್ಯಂಗಲ್ನಲ್ಲಿ ವೀಕ್ಷಿಸಬಹುದು.

Ad Widget ... ..

2016ರಲ್ಲಿ ಭಾರತದಲ್ಲಿ ಪ್ರಾರಂಭವಾಗಬೇಕಿದ್ದ ಈ ಫೀಚರ್ ಭದ್ರತಾ ಕಾರಣಗಳಿಂದಾಗಿ ತಡವಾಗಿ ಕಳೆದ ವರ್ಷ ದೇಶಕ್ಕೆ ಲಗ್ಗೆಯಿಟ್ಟಿತು. ಆದರೆ ಆರಂಭದಲ್ಲಿ ಬೆಂಗಳೂರು ಸೇರಿದಂತೆ ಭಾರತದ 10 ನಗರಗಳಲ್ಲಿ ಮಾತ್ರವೇ ಈ ಫೀಚರ್ ಲಭ್ಯವಾಗಿತ್ತು. ಇದೀಗ ಗೂಗಲ್ ಸ್ಟ್ರೀಟ್ ವ್ಯೂ ದೇಶದ ಬಹುತೇಕ ಮೂಲೆಗಳನ್ನು ಆವರಿಸಿಕೊಂಡಿದ್ದು, ಬಳಕೆದಾರರು ಪ್ರವಾಸವನ್ನು ಕೈಗೊಳ್ಳದೇ ತಾವು ಇಷ್ಟಪಡುವ ಪ್ರದೇಶವನ್ನು ಕುಳಿತಲ್ಲಿಯೇ 360 ಡಿಗ್ರಿ ಕೋನದಲ್ಲಿ ವೀಕ್ಷಿಸಲು ಅನುವು ಮಾಡಿಕೊಡುತ್ತಿದೆ.

Ad Widget

ಏನಿದರ ಉಪಯೋಗ?
ನೀವು ಯಾವುದೇ ಒಂದು ಪ್ರದೇಶಕ್ಕೆ ಹೋಗಬಯಸಿದರೆ ಆ ಸ್ಥಳದ ಸ್ಥಿತಿಯ ಬಗ್ಗೆ ಮೊದಲೇ ತಿಳಿದುಕೊಳ್ಳಲು ಗೂಗಲ್ ಸ್ಟ್ರೀಟ್ ವ್ಯೂ ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಆ ಪ್ರದೇಶಕ್ಕೆ ತೆರಳಿ ಪರಿಶೀಲಿಸಬೇಕಾಗಿಲ್ಲ. ಬದಲಿಗೆ ಕುಳಿತಲ್ಲಿಯೇ ನೀವು ನೋಡ ಬಯಸುವ ಪ್ರದೇಶದ ಚಿತ್ರವನ್ನು ಅದು ತೋರಿಸುತ್ತದೆ. ಈ ರೀತಿ ನೀವು ಮೊದಲೇ ಸ್ಥಳ ಪರಿಶೀಲನೆ ಮಾಡಿ ಬಳಿಕ ಆ ಪ್ರದೇಶಕ್ಕೆ ಸುರಕ್ಷಿತವಾಗಿ ಪ್ರಯಾಣ ಬೆಳೆಸಬಹುದು.

ಬಳಸೋದು ಹೇಗೆ?

  • ಗೂಗಲ್ ಸ್ಟ್ರೀಟ್ ವ್ಯೂ ಅನ್ನು ಬಳಸಲು ನೀವು ಮೊದಲು ನಿಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಸಾಧನಗಳಲ್ಲಿ ಗೂಗಲ್ ಮ್ಯಾಪ್ ಅನ್ನು ತೆರೆಯಬೇಕು.
  • ಸರ್ಚ್ ಪಟ್ಟಿಯ ಅಡಿಯಲ್ಲಿ ಬಲ ಭಾಗದಲ್ಲಿ ಕಾಣಿಸುವ ಲೇಯರ್ ಬಾಕ್ಸ್ ಅನ್ನು ಆಯ್ಕೆ ಮಾಡಬೇಕು. ಅದರಲ್ಲಿ ಗೋಚರಿಸುವ ಸ್ಟ್ರೀಟ್ ವ್ಯೂ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
  • ಈಗ ನಿಮ್ಮ ಗೂಗಲ್ ಮ್ಯಾಪ್ನಲ್ಲಿ ನೀಲಿ ಬಣ್ಣದ ಗೆರೆಗಳನ್ನು ಗಮನಿಸಬಹುದು. ಈ ಗೆರೆಗಳು ಇರುವ ಪ್ರದೇಶಗಳನ್ನು ನೀವು ಕುಳಿತಲ್ಲಿಯೇ ಮೊಬೈಲಿನಲ್ಲಿ ವೀಕ್ಷಿಸಬಹುದು.
  • ಈಗ ನೀವು ಅನ್ವೇಷಿಸಲು ಬಯಸುವ ಪ್ರದೇಶವನ್ನು ಸರ್ಚ್ ಮಾಡಿ, ಮ್ಯಾಪ್ನಲ್ಲಿ ಕಾಣಿಸುವ ಚಿಕ್ಕ ಚಿಕ್ಕ ವೃತ್ತಗಳನ್ನು ಕ್ಲಿಕ್ ಮಾಡಿದರೆ ಆ ಪ್ರದೇಶವನ್ನು ನೀವು 360 ಡಿಗ್ರಿ ಕೋನದಲ್ಲಿ ವೀಕ್ಷಿಸಬಹುದು.
  • ನೀವು ಆ ಪ್ರದೇಶವನ್ನು ಇನ್ನಷ್ಟು ನಿಖರವಾಗಿ ಹಾಗೂ ಮುಂದಕ್ಕೆ, ಹಿಂದಕ್ಕೆ ಚಲಿಸಿ ವೀಕ್ಷಿಸಲು ಬಯಸಿದರೆ ಸ್ಕ್ರೀನ್ನಲ್ಲಿ ಕಾಣಿಸುವ ಬಾಣದ ಗುರುತುಗಳನ್ನು ಬಳಸಬಹುದು.
  • ನೀವು ಆ ಚಿತ್ರವನ್ನು ಝೂಮ್ ಮಾಡಿಯೂ ನೋಡಬಹುದು. ಪರದೆಯ ಕೆಳ ಭಾಗದಲ್ಲಿ ಆ ಚಿತ್ರವನ್ನು ಯಾವಾಗ ಸೆರೆಹಿಡಿಯಲಾಗಿದೆ ಎಂಬುದನ್ನು ನೀವು ನೋಡಬಹುದು.
  • ನೀವು ಬ್ರೌಸರ್ನಲ್ಲಿ ಸ್ಟ್ರೀಟ್ ವ್ಯೂ ಬಳಸಲು ಬಯಸಿದರೆ, ಮೊದಲು ಗೂಗಲ್ ಕ್ರೋಮ್ ಅನ್ನು ತೆರೆಯಿರಿ. ಬಲ ಭಾಗದಲ್ಲಿ ಕಾಣಿಸುವ ಆಯಪ್ಸ್ ಆಯ್ಕೆಯಲ್ಲಿ ಗೂಗಲ್ ಮ್ಯಾಪ್ ವೆಬ್ಸೈಟ್ ಅನ್ನು ಓಪನ್ ಮಾಡಿಕೊಳ್ಳಿ.
  • ಈಗ ಕಾಣಿಸುವ ಮ್ಯಾಪ್ನ ಬಲ ಭಾಗದಲ್ಲಿ ಲೇಯರ್ನ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಸ್ಟ್ರೀಟ್ ವ್ಯೂ ಆಯ್ಕೆ ಕಾಣಿಸುತ್ತದೆ.
  • ನೀವು ಅನ್ವೇಷಿಸಲು ಬಯಸುವ ಪ್ರದೇಶವನ್ನು ಸರ್ಚ್ ಮಾಡಿ, ಅಪ್ಲಿಕೇಶನ್ ಬಳಸಿದಂತೆಯೇ ಅನುಸರಿಸಿ.

Leave a Comment

Your email address will not be published. Required fields are marked *