Ad Widget .

ನೌಕಾದಳಕ್ಕೆ ಆಯ್ಕೆಯಾದ ರಾಜ್ಯದ ಏಕೈಕ ಪ್ರತಿಭೆ| ಕಿತ್ತು ತಿನ್ನುವ ಬಡತನದ ಮಧ್ಯೆ ಸಾಧನೆ ಮೆರೆದ ಕನ್ನಡತಿ

ಸಮಗ್ರ ನ್ಯೂಸ್: ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಮನೆಗೆ ಆಧಾರಸ್ತಂಭವಾಗಿದ್ದ ತಂದೆ ಮೃತಪಟ್ಟಿದ್ದರು. ಹೀಗಿದ್ದರೂ ಕಷ್ಟದಲ್ಲೇ ಬೆಳೆದು ಕಠಿಣ ಪರಿಶ್ರಮದಿಂದ ಯುವತಿಯೊಬ್ಬರು ಇದೀಗ ಭಾರತೀಯ ನೌಕಾದಳಕ್ಕೆ ಆಯ್ಕೆಯಾಗಿದ್ದಾರೆ.

Ad Widget . Ad Widget .

ತಾಯಿ ಅಂಗನವಾಡಿಯಲ್ಲಿ ಆಯಾ ಕೆಲಸ ಮಾಡಿ ದುಡಿದು ಶಿಕ್ಷಣ ನೀಡಿದ್ದೇ ದಾವಣಗೆರೆ ಜಿಲ್ಲೆಯ ಹರಿಹರದ ಯುವತಿಯ ಈ ಸಾಧನೆಗೆ ಸಹಕಾರಿಯಾಗಿದೆ.

Ad Widget . Ad Widget .

ಹರಿಹರ ನಗರದಲ್ಲಿರುವ ಸಿಬಾರ ವೃತ್ತದ ನಿವಾಸಿ ಲತಾ ಎಂಬವರ ಪುತ್ರಿ ಭೂಮಿಕ ತಾಯಿಯ ಆಸರೆಯಲ್ಲೇ ಬೆಳೆದವರು. ಇದೀಗ ನೌಕಾದಳಕ್ಕೆ ರಾಜ್ಯದಿಂದ ಆಯ್ಕೆಯಾದ ಏಕೈಕ ಯುವತಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ತಂದೆಯನ್ನು ಕಳೆದುಕೊಂಡ ಭೂಮಿಕಾರಿಗೆ ಆ ಕೊರಗು ನೀಗಿಸಿದವರು ತಾಯಿ ಲತಾ. ಅಂಗನವಾಡಿ ಕೇಂದ್ರದಲ್ಲಿ ಆಯಾ ಕೆಲಸ ಮಾಡುತ್ತಾ, ಎರಡು ಹಸುಗಳನ್ನು ಸಾಕುತ್ತಿದ್ದಾರೆ. ಇದರಿಂದ ಕೈ ಸೇರಿದ ಹಣದಿಂದ ತನ್ನ ಮೂರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದಾರೆ. ಹೊರತುಪಡಿಸಿ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಲತಾ ಸಾಕಷ್ಟು ಸಾಲ ಕೂಡಾ ಮಾಡಿದ್ದರು.

ಫಾರ್ಮಸಿ ವ್ಯಾಸಂಗ ಮಾಡಿರುವ ಭೂಮಿಕ ಸಾಕಷ್ಟು ಅರ್ಜಿ ಹಾಕಿ ಕೆಲಸಕ್ಕಾಗಿ ಅಲೆದಿದ್ದರು. ಭೂಮಿಕ ನಿಷ್ಠೆಯಿಂದ ಓದಿ ಬೆಂಗಳೂರಿನಲ್ಲಿ ಪರೀಕ್ಷೆ ಬರೆದು ಕೇರಳದಲ್ಲಿ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ನೌಕಾದಳ ಮೊದಲನೇ ಪಟ್ಟಿಯಲ್ಲೇ ಇವರ ಹೆಸರು ಬಂದಿದ್ದು, ಕುಟುಂಬ ಖುಷಿ ಹೆಚ್ಚಿಸಿದೆ. ಏಳು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡ ಲತಾ ಅವರ ಮೇಲೆ ಮೂರು ಮಕ್ಕಳ ಪಾಲನೆ ಪೋಷಣೆಯ ಹೊರೆ ಬಿದ್ದಿತ್ತು. ಪತಿ ಭೀಕರ ಅಪಘಾತದಲ್ಲಿ ಸಾವಿಗೀಡಾಗಿದ್ದರು.‌ ಈ ಸಂದರ್ಭದಲ್ಲಿ ಕಂಗೆಟ್ಟು ಕೂರದ ಲತಾ ಮಕ್ಕಳನ್ನು ಸಾಕಿ ಸಲುಹಿ ಉತ್ತಮ ಶಿಕ್ಷಣ ಕೊಡಿಸಿದ್ದಾರೆ.

ಲತಾ ಮಾತನಾಡಿ, “ಅಂಗನವಾಡಿ ಹಾಗು ಹಸುಗಳಿಂದ ಬರುತ್ತಿದ್ದ ಆದಾಯ ಕಡಿಮೆ ಇದ್ರೂ ಕೂಡ ಮಕ್ಕಳನ್ನು ಸಾಕಿ ಶಿಕ್ಷಣ ಕೊಡಿಸಿದ್ದೇನೆ. ಅದರಲ್ಲೂ ಮಗಳು ಭೂಮಿಕ ಭಾರತೀಯ ನೌಕಾದಳಕ್ಕೆ ಆಯ್ಕೆ ಆಗಿರುವುದು ನನಗೆ ಎಲ್ಲಿಲ್ಲದ ಸಂತಸ ನೀಡಿದೆ. ಬಡತನ ಇದ್ರೂ ಕಂಗೆಡಲಿಲ್ಲ. ಭೂಮಿಕ ಒಡಿಶಾಕ್ಕೆ ಕೆಲಸಕ್ಕೆ ತೆರಳಲಿದ್ದಾಳೆ. ಪರೀಕ್ಷೆಯಲ್ಲಿ ರಾಜ್ಯದಿಂದ ನೌಕಾದಳಕ್ಕೆ ಆಯ್ಕೆಯಾದ ಏಕೈಕ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ನಮಗೆ ಹೆಮ್ಮೆ” ಎಂದರು.‌

Leave a Comment

Your email address will not be published. Required fields are marked *