May 2023

ಜೂ.4ರಿಂದ ಮತ್ತೆ ಮುಂಗಾರಿನ ಸಿಂಚನ|ಗರಿಗೆದರಿದ ಕೃಷಿ ಚಟುವಟಿಕೆಗಳು

ಸಮಗ್ರ ನ್ಯೂಸ್: ಜೂನ್ 4 ರಂದು ಮಾನ್ಸೂನ್ ಕೇರಳವನ್ನು ಪ್ರವೇಶಿಸಲಿದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆಯ ಹಂಚಿಕೆಯು ಎಲ್ಲೆಡೆ ಬಹುತೇಕ ಒಂದೇ ಆಗಿದ್ದರೆ, ಅದು ಸರ್ವೇ ಸಾಮಾನ್ಯ ಪರಿಸ್ಥಿತಿಯಾಗಿದೆ. ಕೃಷಿಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ವಾಯುವ್ಯ ಭಾರತದಲ್ಲಿ, ಈಗಿನಂತೆ, ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ. ಐಎಂಡಿ ಮೇ 26 ಮತ್ತು 27 ರಂದು ಪಥನಂತಿಟ್ಟ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ನೀಡಿದೆ. ಏತನ್ಮಧ್ಯೆ, ಮೇ 29 ರವರೆಗೆ ಕೇರಳದ ಅನೇಕ ಸ್ಥಳಗಳಲ್ಲಿ […]

ಜೂ.4ರಿಂದ ಮತ್ತೆ ಮುಂಗಾರಿನ ಸಿಂಚನ|ಗರಿಗೆದರಿದ ಕೃಷಿ ಚಟುವಟಿಕೆಗಳು Read More »

“ನಿಮ್ಮ ಮನವಿಯನ್ನು ಆಲಿಸಲಾಗದು”| ಸಂಸತ್ ಉದ್ಘಾಟನೆ ಕುರಿತ ಪಿಐಎಲ್ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ಸಮಗ್ರ ನ್ಯೂಸ್: ಭಾರತದ ಪ್ರಥಮ ಪ್ರಜೆ ಆಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಸಂಸತ್ ಭವನದ ಉದ್ಘಾಟನೆಗೆ ಲೋಕಸಭೆಯ ಸೆಕ್ರೆಟರಿಯೇಟ್‌ಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. “ನೀವು ಅಂತಹ ಅರ್ಜಿಗಳನ್ನು ಏಕೆ ಸಲ್ಲಿಸುತ್ತೀರಿ ಎಂಬುದು ನಮಗೆ ತಿಳಿದಿದೆ, ಇದನ್ನು ಪರಿಗಣಿಸಲು ನಾವು ಒಲವು ತೋರುತ್ತಿಲ್ಲ” ಎಂದು ಸುಪ್ರೀಂ ಕೋರ್ಟ್ ಪೀಠವು ಹೇಳಿದೆ. “ನಾವು ನಿಮ್ಮ ಮೇಲೆ ವೆಚ್ಚವನ್ನು ಹೇರುತ್ತಿಲ್ಲ ಎಂಬುದಕ್ಕೆ ಕೃತಜ್ಞರಾಗಿರಿ” ಎಂದು ಪೀಠವು ಹೇಳಿದೆ. ನ್ಯಾಯವಾದಿ

“ನಿಮ್ಮ ಮನವಿಯನ್ನು ಆಲಿಸಲಾಗದು”| ಸಂಸತ್ ಉದ್ಘಾಟನೆ ಕುರಿತ ಪಿಐಎಲ್ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್ Read More »

ಸುಳ್ಯ: ಅರಳು ಮಲ್ಲಿಗೆ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ

ಸಮಗ್ರ ನ್ಯೂಸ್: ರಾಜ್ಯ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕು ಬಾಲಭವನ ಸಮಿತಿ ಸುಳ್ಯ, ಸಮಗ್ರ ಶಿಶು ಅಭಿವೃದ್ಧಿ ಸೇವಾ ಯೋಜನೆ ಸುಳ್ಯ ದ.ಕ. ಸ್ವರ ಮಾಧುರ್ಯ ಬಳಗ ಪುತ್ತೂರು ದ.ಕ. ವತಿಯಿಂದ ಸುಳ್ಯ ತಾಲೂಕು ಸ್ತ್ರೀಶಕ್ತಿ ಭವನದಲ್ಲಿ ಒಂದು ವಾರ ನಡೆದ ಅರಳು ಮಲ್ಲಿಗೆ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಶುಕ್ರವಾರ ನಡೆಯಿತು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಕ್ಕಳಿಗೆ ಬಾಲ್ಯದಲ್ಲಿ ನೀಡುವ ಉತ್ತಮವಾದ

ಸುಳ್ಯ: ಅರಳು ಮಲ್ಲಿಗೆ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ Read More »

ಮೇ.29ರಿಂದ ರಾಜ್ಯದಲ್ಲಿ ಶಾಲಾರಂಭ| ಸಿಹಿಯೊಂದಿಗೆ ಬರಮಾಡಿಕೊಳ್ಳಲು ರೆಡಿಯಾದ ಶಿಕ್ಷಕರು

ಸಮಗ್ರ ನ್ಯೂಸ್: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಇದೇ ಮೇ 29 ರಿಂದ ಆರಂಭವಾಗುತ್ತಿದ್ದು, ಶಾಲೆಯ ಕೋಣೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಶಾಲೆ ಆರಂಭದ ಮೊದಲ ದಿನವೇ ಎಲ್ಲ ಶೀರ್ಷಿಕೆಗಳ ಪಠ್ಯಪುಸ್ತಕ ಮತ್ತು ಒಂದು ಜೊತೆ ಸಮವಸ್ತ್ರ ವಿತರಿಸಲಾಗುತ್ತದೆ. ಈಗಾಗಲೇ ಪಠ್ಯಪುಸ್ತಕಗಳು ಪೂರೈಕೆಯಾಗಿದ್ದು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಾಲೆಗಳಿಗೆ ಅವುಗಳನ್ನು ಕಳುಹಿಸಲಾಗುತ್ತಿದೆ. ಕೆಲವೆಡೆ ಶಾಲೆ ಆರಂಭದ ಮೊದಲ ದಿನ ತಳಿರು ತೋರಣ ಮತ್ತು ರಂಗೋಲಿಗಳಿಂದ ಅಲಂಕರಿಸಿ ಮಕ್ಕಳಿಗೆ ಅದ್ದೂರಿ ಸ್ವಾಗತ ನೀಡಲು ತಯಾರಿ ನಡೆದಿದೆ. ಇನ್ನು ಶಾಲೆ ಆರಂಭೋತ್ಸವದ

ಮೇ.29ರಿಂದ ರಾಜ್ಯದಲ್ಲಿ ಶಾಲಾರಂಭ| ಸಿಹಿಯೊಂದಿಗೆ ಬರಮಾಡಿಕೊಳ್ಳಲು ರೆಡಿಯಾದ ಶಿಕ್ಷಕರು Read More »

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೆರಡು ಚೀತಾ ಮರಿಗಳು ಸಾವು| ಎರಡೇ ತಿಂಗಳಲ್ಲಿ ಐದು ಚೀತಾಗಳ ಮರಣ!!

ಸಮಗ್ರ ನ್ಯೂಸ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಜ್ವಾಲಾದ ಮೊದಲ ಮರಿ ಸತ್ತ ಕೆಲವು ದಿನಗಳ ನಂತರ ಗುರುವಾರ ಮತ್ತೆರಡು ಮರಿಗಳು ಸಾವನ್ನಪ್ಪಿವೆ. ಜ್ವಾಲಾ ಈ ವರ್ಷ ಮಾರ್ಚ್ 24 ರಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಉದ್ಯಾನವನದಲ್ಲಿ ಹುಟ್ಟಿದ ಮೂರು ಮರಿಗಳು ಸಾವನ್ನಪ್ಪಿದ್ದರೆ, ನಾಲ್ಕನೆಯ ಮರಿಯ ಆರೋಗ್ಯವು ಗಂಭೀರವಾಗಿರುವುದರಿಂದ ನಿಗಾದಲ್ಲಿ ಇರಿಸಲಾಗಿದೆ ಎಂದು ಕುನೋ ರಾಷ್ಟ್ರೀಯ ಉದ್ಯಾನವನ ತಿಳಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ ಮೊದಲ ಮರಿ ದೌರ್ಬಲ್ಯದಿಂದ ಸಾವನ್ನಪ್ಪಿದೆ. ಇತ್ತೀಚಿನ ಸಾವಿನಿಂದಾಗಿ ಕುನೋದಲ್ಲಿ

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೆರಡು ಚೀತಾ ಮರಿಗಳು ಸಾವು| ಎರಡೇ ತಿಂಗಳಲ್ಲಿ ಐದು ಚೀತಾಗಳ ಮರಣ!! Read More »

ಕಾಂತಾರದ ಸುಂದರ (ದೀಪಕ್ ರೈ ಪಾಣಾಜೆ) ಇದೀಗ ಬೇರ ಚಿತ್ರದಲ್ಲಿ

ಸಮಗ್ರ ನ್ಯೂಸ್ : “ಕೂದಲು ತುಂಬಾ ಹೋಗಿದೆ ಕಾಡಲ್ಲಿ ಒಂದು ಸೊಪ್ಪು ಸಿಕ್ತದೆ.” ಈ ಡೈಲಾಗ್ ಕೇಳಿದರೆ ನಮಗೆ ನೆನಪಾಗುವುದು ಕಾಂತಾರ ಸಿನಿಮಾದಲ್ಲಿ ಅಭಿನಯಿಸಿದ ದೀಪಕ್ ರೈ ಪಣಜಿ ಅವರು. ವೀಕ್ಷಕರನ್ನು ನಕ್ಕು ನಗಿಸಿದ ದೀಪಕ್ ರೈ ಪಣಾಜೆ ಯವರು ಜನಿಸಿದ್ದು ಪುತ್ತೂರು ತಾಲೂಕಿನ ಪಣಾಜೆ ಗ್ರಾಮದಗುವಲ್ ಗದ್ದೆ ಯಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಣಜೆಯಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು ಸುಭೋದ ಪ್ರೌಢಶಾಲೆ, ಪಣಜೆಯಲ್ಲಿ ಮುಗಿಸಿದರು. ವಿವೇಕಾನಂದ ಕಾಲೇಜಿನಲ್ಲಿ ತಮ್ಮ ಪಿಯು ಪದವಿಯನ್ನು

ಕಾಂತಾರದ ಸುಂದರ (ದೀಪಕ್ ರೈ ಪಾಣಾಜೆ) ಇದೀಗ ಬೇರ ಚಿತ್ರದಲ್ಲಿ Read More »

Weather alert| ರಾಜ್ಯದ ಹಲವೆಡೆ ಮುಂದಿನ 24 ಗಂಟೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವು ಕಡೆ ಮುಂದಿನ 24 ಗಂಟೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಮಂಡ್ಯ, ತುಮಕೂರು, ರಾಮನಗರ ಕೋಲಾರ, ಕೊಡಗು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಮಲೆನಾಡು ಪ್ರದೇಶದ ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಒಂದೆರಡು

Weather alert| ರಾಜ್ಯದ ಹಲವೆಡೆ ಮುಂದಿನ 24 ಗಂಟೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ Read More »

ಕಡಬ: ಕುದ್ಮಾರು ಸೇತುವೆಯಿಂದ ಕುಮಾರಧಾರ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಕಡಬ ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮೊಗರು ಸೇತುವೆಯ ಮೇಲಿಂದ ವ್ಯಕ್ತಿಯೋರ್ವರು ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಆಲಂಕಾರು ಮೂರ್ತೆದಾರರ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ್ ಪೂಜಾರಿ ಆಲಂಕಾರು ಎಂಬವರೇ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಇವರು ಶಾಂತಿಮೊಗರು ಸೇತುವೆಯ ಮೇಲೆ ಕಾರು ನಿಲ್ಲಿಸಿ ಬಲೂನ್ ಕಟ್ಟಿ ನೀರಿಗೆ ಹಾರಿದ್ದಾರೆ ಎನ್ನಲಾಗಿದೆ. ಸದ್ಯ ಸ್ಥಳದಲ್ಲಿ ನೂರಾರು ಜನರು ಸೇರಿದ್ದು,ಮೃತ ಶರೀರವನ್ನು ನದಿಯಿಂದ ಮೇಲಕ್ಕೆತ್ತಲಾಗಿದೆ. ಚಂದ್ರಶೇಖರ ಅವರು ಇಂದು ಮುಂಜಾನೆ ಶಾಂತಿಮೊಗರು ಸೇತುವೆಯ ಮೇಲೆ

ಕಡಬ: ಕುದ್ಮಾರು ಸೇತುವೆಯಿಂದ ಕುಮಾರಧಾರ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ Read More »

ನೂತನ ಸಂಸತ್ ಭವನವನ್ನು ರಾಷ್ಟ್ರಪತಿ ಯಾಕೆ‌ ಉದ್ಘಾಟಿಸಬಾರದು? ಕೇಂದ್ರದ ವಿರುದ್ಧ ಸುಪ್ರೀಂ ನಲ್ಲಿ ಪಿಐಎಲ್ ಸಲ್ಲಿಕೆ

ಸಮಗ್ರ ನ್ಯೂಸ್: ಮೇ 28ರಂದು ಹೊಸ ಸಂಸತ್ ಭವನ ಲೋಕಾರ್ಪಣೆಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಎರಡು ದಿನಕ್ಕೂ ಮುನ್ನ (ಗುರುವಾರ) ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ. ಭಾರತದ ರಾಷ್ಟ್ರಪತಿಗಳಿಂದಲೇ ನೂತನ ಸಂಸತ್ ಭವನ ಉದ್ಘಾಟಿಸುವಂತೆ ಲೋಕಸಭೆ ಸಚಿವಾಲಯ ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಕೆಯಾಗಿದೆ. ರಾಷ್ಟ್ರಪತಿ ಅವರಿಂದ ಉದ್ಘಾಟನೆ ಮಾಡಿಸದೆ, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುತ್ತಿರುವುದು ಸಂವಿಧಾನಕ್ಕೆ

ನೂತನ ಸಂಸತ್ ಭವನವನ್ನು ರಾಷ್ಟ್ರಪತಿ ಯಾಕೆ‌ ಉದ್ಘಾಟಿಸಬಾರದು? ಕೇಂದ್ರದ ವಿರುದ್ಧ ಸುಪ್ರೀಂ ನಲ್ಲಿ ಪಿಐಎಲ್ ಸಲ್ಲಿಕೆ Read More »

ಸಾರ್ವಜನಿಕರೇ ಗಮನಿಸಿ‌‌‌…ಉಚಿತ ಆಧಾರ್ ಅಪ್ಡೇಟ್ ಗೆ ಜೂ.14ರವರೆಗೆ ಅವಕಾಶ

ಸಮಗ್ರ ನ್ಯೂಸ್: ಜೂನ್ 14 ರವರೆಗೆ ಉಚಿತ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಲು ಅವಕಾಶ ನೀಡಲಾಗಿದೆ. ಆಧಾರ್ ನಲ್ಲಿನ ಹೆಸರು, , ಫೋಟೋ, ಮೊಬೈಲ್ ಸಂಖ್ಯೆಯಂತಹ ಯಾವುದೇ ಮಾಹಿತಿಯನ್ನು ಅಪ್ಡೇಟ್ ಮಾಡಲು 50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ, ಪ್ರಸ್ತುತ UIDAI ಈ ಎಲ್ಲ ತಿದ್ದುಪಡಿ ಸೇವೆಗಳನ್ನು ಜೂನ್ 14ರವರೆಗೆ ಉಚಿತವಾಗಿ ನೀಡಲಿದೆ. myAadhaar ಪೋರ್ಟಲ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅಪ್ಡೇಟ್ ಮಾಡಿದರೆ ಯಾವುದೇ ಶುಲ್ಕ ಇರುವುದಿಲ್ಲ. https://myaadhaar.uidai.gov.in/ ಗೆ ಭೇಟಿ ನೀಡಿ ವಿಳಾಸ

ಸಾರ್ವಜನಿಕರೇ ಗಮನಿಸಿ‌‌‌…ಉಚಿತ ಆಧಾರ್ ಅಪ್ಡೇಟ್ ಗೆ ಜೂ.14ರವರೆಗೆ ಅವಕಾಶ Read More »