May 2023

ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್ ಜೆಡಿ| ಬಿಜೆಪಿಯ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ಸಮಗ್ರ ನ್ಯೂಸ್: ಹೊಸ ಸಂಸತ್‌ ಭವನವನ್ನು ಶವಪೆಟ್ಟಿಗೆಗೆ ಹೋಲಿಸುವ ಮೂಲಕ ವಿಪಕ್ಷಗಳು ವಿರೋಧವನ್ನು ಹೀನ ಮಟ್ಟಕ್ಕೆ ಎಳೆದೊಯ್ದಿವೆ. ಪ್ರಧಾನಿ ಸಂಸತ್‌ ಉದ್ಘಾಟಿಸುವುದನ್ನು ವಿರೋಧಿಸುತ್ತಿರುವ ವಿಪಕ್ಷದ ಪಾಳಯದಲ್ಲಿರುವ ಲಾಲೂ ಪ್ರಸಾದ್‌ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಹೊಸ ಸಂಸತ್‌ ಭವನದ ವಿನ್ಯಾಸ ಶವಪೆಟ್ಟಿಗೆಯಂತಿದೆ ಎಂದು ಲೇವಡಿ ಮಾಡಿದೆ. ಆರ್‌ಜೆಡಿ ಇಂದು ಶವಪಟ್ಟಿಗೆ ಮತ್ತು ಸಂಸತ್‌ ಭವನದ ಚಿತ್ರಗಳನ್ನು ಅಕ್ಕಪಕ್ಕದಲ್ಲಿಟ್ಟು ಟ್ವೀಟ್‌ ಮಾಡಿ ಹೊಸ ಸಂಸತ್‌ ಭವನ ಯಾವ ರೀತಿ ಇದೆ ನೋಡಿ ಎಂದು ಲೇವಡಿ ಮಾಡಿದೆ. ದೇಶ […]

ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್ ಜೆಡಿ| ಬಿಜೆಪಿಯ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? Read More »

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಪ್ರವಾಸಕ್ಕೆ ಹೋಗುವವರೇ ಎಚ್ಚರ!!

ಸಮಗ್ರ ನ್ಯೂಸ್: ಕೆಲಸ ಮುಗಿಸಿಕೊಂಡು ಮನೆಯತ್ತ ಹೊರಟ ಉದ್ಯೋಗಿಯ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಗ್ರಾಮದಲ್ಲಿ ಮತ್ತೆ ಕಾಡಾನೆ ದಾಳಿ ನಡೆದಿದೆ. ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯಕ್ಕೆ ಹೋಗುವ ಪ್ರವಾಸಿಗರಿಗೂ ಎಚ್ಚರದಿಂದ ಹೋಗುವಂತೆ ಗಾಯಾಳು ಮನವಿ ಮಾಡಿದ್ದಾರೆ. ಕಾಡಾನೆಗಳ ದಾಳಿಯಿಂದ ಗಂಭೀರ ಗಾಯಗೊಂಡ ವ್ಯಕ್ತಿಯನ್ನು ವಿಜುಕುಮಾರ್ ಎಂದು ಗುರುತಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಇಚ್ಲಂಪಾಡಿಯ ನಡುಮನೆ ಕ್ರಾಸ್ ಬಳಿ ಘಟನೆ ನಡೆದಿದೆ. ಪ್ರತಿನಿತ್ಯದಂತೆ ಭಾನುವಾರ

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಪ್ರವಾಸಕ್ಕೆ ಹೋಗುವವರೇ ಎಚ್ಚರ!! Read More »

ಬಿಜೆಪಿ ಶಾಸಕರ ಕಚೇರಿ ಉದ್ಘಾಟನೆ ಬ್ಯಾನರ್ ನಲ್ಲಿ ಸಿಎಂ ಸಿದ್ದರಾಮಯ್ಯ ಫೋಟೋ!

ಸಮಗ್ರ ನ್ಯೂಸ್: ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎನ್. ಚನ್ನಬಸಪ್ಪ ಅವರ ಕಚೇರಿ ಉದ್ಘಾಟನೆ ಬ್ಯಾನರ್ ನಲ್ಲಿ ಸಿದ್ದರಾಮಯ್ಯ ಅವರ ಫೋಟೋ ಹಾಕಲಾಗಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ. ಶಿವಮೊಗ್ಗದ ಶಿವಪ್ಪ ನಾಯಕ ಸಿಟಿ ಸೆಂಟರ್ ಮಾಲ್ ಪಕ್ಕದ ಕಟ್ಟಡದಲ್ಲಿ ನಗರ ಕ್ಷೇತ್ರದ ಶಾಸಕರ ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮ ಭಾನುವಾರ ನಡೆಯಿತು.‌‌ ಬಿಜೆಪಿಯ ಬಲಪಂಥಿಯ ಸಿದ್ದಾಂತವನ್ನು ವಿರೋಧಿಸುತ್ತಾ ಬಂದಿರುವ ಸಿದ್ದರಾಮಯ್ಯನವರು ಬಿಜೆಪಿಯ ಶಾಸಕರ ಕಚೇರಿ ಉದ್ಘಾಟನೆಯ ವೇದಿಕೆ ಕಾರ್ಯಕ್ರಮದಲ್ಲಿ ರಾರಾಜಿಸಿದ್ದು ವಿಶೇಷ ಜೊತೆಗೆ ಕುತೂಹಲಕ್ಕೂ ಕಾರಣವಾಗಿದೆ.

ಬಿಜೆಪಿ ಶಾಸಕರ ಕಚೇರಿ ಉದ್ಘಾಟನೆ ಬ್ಯಾನರ್ ನಲ್ಲಿ ಸಿಎಂ ಸಿದ್ದರಾಮಯ್ಯ ಫೋಟೋ! Read More »

ರಾಜ್ಯ ಸಚಿವ ಸಂಪುಟ ಖಾತೆ ಹಂಚಿಕೆ| ಇಲ್ಲಿದೆ ಅಧಿಕೃತ ಪಟ್ಟಿ

ಸಮಗ್ರ ನ್ಯೂಸ್: ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಚಿವ ಸಂಪುಟದ ಖಾತೆ ಹಂಚಿಕೆಯ ಅಧಿಕೃತ ಪಟ್ಟಿ ಪ್ರಕಟವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಒಳಗೊಂಡು 34 ಮಂದಿಗೆ ವಿವಿಧ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ರಾಜ್ಯಪಾಲರ ಅಂಕಿತದ ಬಳಿಕ ಅಧಿಕೃತ ಪಟ್ಟಿ ಪ್ರಕಟವಾಗಿದೆ. ಹಾಗಾದರೆ, ಯಾರಿಗೆ ಯಾವ ಖಾತೆ ನೀಡಲಾಗಿದೆ? . ಸಚಿವರ ಖಾತೆ ಹಂಚಿಕೆ ಅಧಿಕೃತ ಪಟ್ಟಿ ಇಲ್ಲಿದೆ…ಸಿಎಂ ಸಿದ್ದರಾಮಯ್ಯ- ಹಣಕಾಸು, ಐಟಿ-ಬಿಟಿ, ಗುಪ್ತಚರ, ವಾರ್ತಾ, ಐಟಿ-ಬಿಟಿ, ಮೂಲಸೌಕರ್ಯ ಅಭಿವೃದ್ಧಿ ಖಾತೆ,ಡಿಸಿಎಂ ಡಿಕೆ ಶಿವಕುಮಾರ್- ಜಲಸಂಪನ್ಮೂಲ,

ರಾಜ್ಯ ಸಚಿವ ಸಂಪುಟ ಖಾತೆ ಹಂಚಿಕೆ| ಇಲ್ಲಿದೆ ಅಧಿಕೃತ ಪಟ್ಟಿ Read More »

ಮಳೆ‌ ನಿಂತರೆ ಇಂದು (ಮೇ.30) ಐಪಿಎಲ್ ಫೈನಲ್|

ಸಮಗ್ರ ನ್ಯೂಸ್: 2023ರ ಐಪಿಎಲ್‌ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ ಪಂದ್ಯ ಭಾನುವಾರ ನಡೆಯಬೇಕಿದ್ದು ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯವನ್ನು ಇಂದು (ಮೇ.30) ನಡೆಯಲಿದೆ. ಸೋಮವಾರ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಹಣಾಹಣಿ ನಡೆಯಲಿದ್ದು, ಈ ಬಾರಿಯ ಟ್ರೋಫಿ ಯಾರ ಮುಡಿಗೇರಲಿದೆ ಎನ್ನುವುದು ಗೊತ್ತಾಗಲಿದೆ. ಆದರೆ ಸೋಮವಾರವೂ ಮಳೆ‌ ಸುರಿಯುವ ಮುನ್ಸೂಚನೆ ಸಿಕ್ಕಿದ್ದು, ಪಂದ್ಯ ನಡೆಯುವ ಅನುಮಾನವೂ ಒಂದೆಡೆ ಕಾಡುತ್ತಿದೆ.

ಮಳೆ‌ ನಿಂತರೆ ಇಂದು (ಮೇ.30) ಐಪಿಎಲ್ ಫೈನಲ್| Read More »

‘ತಾತನಿಗೆ ಮಿನಿಸ್ಟರ್ ಪೋಸ್ಟ್ ಕೊಡಿ’ | ಟಿ.ಬಿ ಜಯಚಂದ್ರ ಮೊಮ್ಮಗಳಿಂದ ರಾಹುಲ್ ಗಾಂಧಿಗೆ ಪತ್ರ

ಸಮಗ್ರ ನ್ಯೂಸ್: ಶಿರಾ ಶಾಸಕ ಟಿ.ಬಿ. ಜಯಚಂದ್ರಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಬೇಸರಗೊಂಡ ಮೊಮ್ಮಗಳು ರಾಹುಲ್‌ ಗಾಂಧಿಗೆ ಪತ್ರ ಬರೆದಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಆರನಾ, ನನ್ನ ತಾತ ಮಿನಿಸ್ಟರ್ ಆಗದಿದ್ದಕ್ಕೆ ನನಗೆ ಬೇಜಾರಾಗಿದೆ. ಅವರು ಹಾರ್ಡ್ ವರ್ಕ್ ಮಾಡುತ್ತಾರೆ. ಅವರಿಗೆ ಸಚಿವ ಸ್ಥಾನ ನೀಡಿ. ಜನರಿಗೆ ತುಂಬಾ ಪ್ರೀತಿ‌ ಕೊಟ್ಟು,ಸಹಾಯ ಮಾಡ್ತಾರೆ ಎಂದು ಟಿ.ಬಿ. ಜಯಚಂದ್ರ ಮೊಮ್ಮಗಳಾದ ಆರನಾಳಿಂದ ಭಾವನಾತ್ಮಕ ವಿಡಿಯೋ ರವಾನೆ ಮಾಡಲಾಗಿದೆ. ರಾಹುಲ್ ಗಾಂಧಿಗೆ ವಿಡಿಯೋ ಹಾಗೂ ಪತ್ರದ ಮುಖೇನ ಭಾವನಾತ್ಮಕ ಮನವಿ

‘ತಾತನಿಗೆ ಮಿನಿಸ್ಟರ್ ಪೋಸ್ಟ್ ಕೊಡಿ’ | ಟಿ.ಬಿ ಜಯಚಂದ್ರ ಮೊಮ್ಮಗಳಿಂದ ರಾಹುಲ್ ಗಾಂಧಿಗೆ ಪತ್ರ Read More »

ಲಾರಿಗೆ ಡಿಕ್ಕಿ ಹೊಡೆದ ಕಾರು| 6 ಜನ ಸ್ಥಳದಲ್ಲೇ ದುರ್ಮರಣ

ಸಮಗ್ರ ನ್ಯೂಸ್: ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 6 ಜನ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕಲಕೇರಿ ಬಳಿ ಇಂದು(ಮೇ.28) ನಡೆದಿದೆ. ಇಂಡಿಕಾ ಕಾರಿನಲ್ಲಿದ್ದ 6 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ರಾಜಪ್ಪ, ರಾಘವೇಂದ್ರ, ಅಕ್ಷಯ ಶಿವಶರಣ, ಜಯಶ್ರೀ, ರಾಖಿ ಹಾಗೂ ರಶ್ಮಿಕಾ ಅಂತ ಗುರುತಿಸಲಾಗಿದೆ. ವಿಜಯಪುರಿಂದ ಬೆಂಗಳೂರಿಗೆ ಇಂಡಿಕಾ ಕಾರಿನಲ್ಲಿ ಹೋಗುವಾಗ ಕುಷ್ಟಗಿ ಹೆದ್ದಾರಿಯಲ್ಲಿ ಕಾರಿನ ಟೈರ್‌ ಸ್ಪೋಟಗೊಂಡಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಮುಂದೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

ಲಾರಿಗೆ ಡಿಕ್ಕಿ ಹೊಡೆದ ಕಾರು| 6 ಜನ ಸ್ಥಳದಲ್ಲೇ ದುರ್ಮರಣ Read More »

ಮಂಗಳೂರು: ಪತ್ರಕರ್ತರ ರಾಷ್ಟ್ರೀಯ ಸಮ್ಮೇಳನದಲ್ಲಿ ಕರ್ನಾಟಕ ಪ್ರತಿನಿಧಿಯಾಗಿ ಪಿ.ಬಿ.ಹರೀಶ್ ರೈ

ಸಮಗ್ರನ್ಯೂಸ್: ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘ, ಆಲ್ ಇಂಡಿಯಾ ನ್ಯೂಸ್ ಪೇಪರ್ ಎಂಪ್ಲಾಯಿಸ್ ಫೆಡರೇಶನ್, ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ಸಹಿತ ರಾಷ್ಟ್ರ ಮಟ್ಟದ 8 ಪತ್ರಕರ್ತರ ಸಂಘಟನೆಗಳ ವತಿಯಿಂದ ನವದೆಹಲಿಯ ಹೋಟೆಲ್ ಸಾಮ್ರಾಟ್ ನಲ್ಲಿ ಮೇ.28ರಂದು ನಡೆದ ಪತ್ರಕರ್ತರ ಮಹಾ ಸಮ್ಮೇಳನದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ನಿವಾಸಿ ಪಿ.ಬಿ.ಹರೀಶ್ ರೈ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ವಿಜಯವಾಣಿಯ ಹಿರಿಯ ವರದಿಗಾರರಾದ ಇವರು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿದ್ದು, ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿದ್ದಾರೆ.

ಮಂಗಳೂರು: ಪತ್ರಕರ್ತರ ರಾಷ್ಟ್ರೀಯ ಸಮ್ಮೇಳನದಲ್ಲಿ ಕರ್ನಾಟಕ ಪ್ರತಿನಿಧಿಯಾಗಿ ಪಿ.ಬಿ.ಹರೀಶ್ ರೈ Read More »

ಪ್ರತಿಭಟನಾ ನಿರತ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರಿಂದ ದೌರ್ಜನ್ಯ| ಹಾಡುಹಗಲೇ ನಡೆಯಿತು ‘ಪ್ರಜಾಪ್ರಭುತ್ವದ ಕಗ್ಗೊಲೆ!’

ಸಮಗ್ರ ನ್ಯೂಸ್: ರಾಷ್ಟ್ರರಾಜಧಾನಿಯಲ್ಲಿ ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನವನ್ನು ಉದ್ಘಾಟನಿಸಿದರೆ, ಮತ್ತೊಂದೆಡೆ ಜಂತರ್‌-ಮಂತರ್‌ನಲ್ಲಿ ಒಂದು ರೀತಿಯಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ದೇಶಕ್ಕೆ ಪದಕ ಜಯಿಸಿದ ಭಜರಂಗ್ ಫೂನಿಯಾ, ವಿನೇಶ್ ಫೋಗಾಟ್, ಸಾಕ್ಷಿ ಮಲಿಕ್ ಸೇರಿದಂತೆ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಾರತೀಯ ಜನತಾ ಪಕ್ಷ(ಬಿಜೆಪಿ) ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರ ಮೇಲೆ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ಕೂಡಲೇ

ಪ್ರತಿಭಟನಾ ನಿರತ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರಿಂದ ದೌರ್ಜನ್ಯ| ಹಾಡುಹಗಲೇ ನಡೆಯಿತು ‘ಪ್ರಜಾಪ್ರಭುತ್ವದ ಕಗ್ಗೊಲೆ!’ Read More »

ನರನನ್ನೇ ಕೊಂದು ನರಭಕ್ಷಕನಾದ ಯುವಕ

ಸಮಗ್ರ ನ್ಯೂಸ್: ಯುವಕನೋರ್ವ ವೃದ್ಧೆಯನ್ನು ಕೊಂದು ಮಾಂಸವನ್ನಾಗಿ ತಿಂದಿರುವ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯ ಸೆಂದ್ರಾ ಅರಣ್ಯದಲ್ಲಿ ನಡೆದಿದೆ. ಈತ ವೃದ್ಧೆಯನ್ನು ಕೊಂದು ಮುಖವನ್ನು ಪರಚಿದ್ದ, ಬಳಿಕ ತೋಳ, ನಾಯಿಯಂತೆ ಮುಖವನ್ನು ಮೇಲಕ್ಕೆ ಮಾಡಿ ಪ್ರಾಣಿಗಳಂತೆ ಕೂಗಾಡುತ್ತಿದ್ದ. ಆರೋಪಿ ಯುವಕನನ್ನು ಪಾಲಿಯ ಬಂಗಾರ್ ಆಸ್ಪತ್ರೆಯಿಂದ ಜೋಧಪುರದ ಎಂಡಿಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರೇಬಿಸ್ ಮತ್ತು ಹೈಡ್ರೋಫೋಬಿಯಾಕ್ಕೆ ಸುರೇಂದ್ರ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆತನಿಗೆ ಆಗಾಗ ವಿಪರೀತ ಕೋಪ ಬರುವುದರಿಂದ ಅದು ಆತನನ್ನು ಹಿಂಸಾತ್ಮಕವಾಗಿ ವರ್ತಿಸುವಂತೆ ಮಾಡುತ್ತಿದೆ. ತಮಗೂ ಏನಾದರು

ನರನನ್ನೇ ಕೊಂದು ನರಭಕ್ಷಕನಾದ ಯುವಕ Read More »