May 2023

ಕಡಬ: ಶಾಲೆಗಳಿಂದ ಬ್ಯಾಟರಿ, ಇಲೆಕ್ಟ್ರಾನಿಕ್ ವಸ್ತುಗಳ ಕದಿಯುತ್ತಿದ್ದ ಗ್ಯಾಂಗ್ ನ ಹೆಡೆಮುರಿ ಕಟ್ಟಿದ ಪೊಲೀಸರು| ಲಕ್ಷಾಂತರ ಮೌಲ್ಯದ ಸೊತ್ತು‌ ವಶ

ಸಮಗ್ರ ನ್ಯೂಸ್: ಬರೋಬ್ಬರಿ ಒಂಭತ್ತು ಸರ್ಕಾರಿ ಶಾಲೆಯಿಂದ ಕಳ್ಳತನ ಮಾಡಿದ ಖತರ್ ನಾಕ್ ಕಳ್ಳರ ಗ್ಯಾಂಗನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿ ನಾಲ್ವರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ದೋಲ ಮನೆ ಹೊನ್ನಪ್ಪ ಗೌಡರ ರಕ್ಷಿತ್ ಡಿ (24 ವರ್ಷ) ,ಮೀನಾಡಿಯ ಧರ್ಣಪ್ಪ ಗೌಡರ ಪುತ್ರ ತೀರ್ಥೇಶ್ಎಂ.( 29 ವರ್ಷ) ಉರುಂಬಿ ಮನೆಯ ಕುಶಾಲಪ್ಪ ಗೌಡರ ಪುತ್ರ ಯಜ್ಞೇಶ್‌ ಯು.ಕೆ (30 ವರ್ಷ) ,ಹಳ್ಳಿಮನೆಯ ವಿಶ್ವನಾಥ ಶೆಟ್ಟಿ ಎಂಬವರ ಮಗ ರೋಹಿತ್‌ ಹೆಚ್.‌ ಶೆಟ್ಟಿ,( […]

ಕಡಬ: ಶಾಲೆಗಳಿಂದ ಬ್ಯಾಟರಿ, ಇಲೆಕ್ಟ್ರಾನಿಕ್ ವಸ್ತುಗಳ ಕದಿಯುತ್ತಿದ್ದ ಗ್ಯಾಂಗ್ ನ ಹೆಡೆಮುರಿ ಕಟ್ಟಿದ ಪೊಲೀಸರು| ಲಕ್ಷಾಂತರ ಮೌಲ್ಯದ ಸೊತ್ತು‌ ವಶ Read More »

ನಾನು ಗೌಡ್ತಿಯಾಗಿಯೇ ಇರ್ತೇನೆ; ಗೌಡ ಹುಡುಗನ ಹುಡುಕಿ| ಮದುವೆ ಬಗ್ಗೆ ಮನದಾಳ ಬಿಚ್ಚಿಟ್ಟ ರಮ್ಯಾ

ಸಮಗ್ರ ನ್ಯೂಸ್: ನಾನು ಮದುವೆಯಾಗಲು ಸಿದ್ಧಳಿದ್ದು, ನೀವೇ ಸ್ವಯಂವರ ಏರ್ಪಡಿಸಿ ಗೌಡರ ಹುಡುಗನನ್ನು ಹುಡುಕಿ ಎಂದು ಅಭಿಮಾನಿಗಳಿಗೆ ನಟಿ ರಮ್ಯಾ ಮನವಿ ಮಾಡಿದ್ದಾರೆ. ನಾನು ಮಂಡ್ಯದ ಜನರನ್ನು ತುಂಬಾ ಗೌರವಿಸುತ್ತೇನೆ, ಪ್ರೀತಿಸುತ್ತೇನೆ. ನಾನು ಸಂಕಷ್ಟದಲ್ಲಿದ್ದಾಗ ಇಲ್ಲಿನ ಜನ ನನಗೆ ಸಹಾಯ ಮಾಡಿದ್ದಾರೆ. ಅಲ್ಲದೆ ನನ್ನ ತಾಯಿ ಇಲ್ಲಿನವರೇ, ನಾನು ಹುಟ್ಟಿದ್ದೂ ಇಲ್ಲಿಯೇ. ಮಂಡ್ಯ ಜನತೆಯೊಂದಿಗೆ ನನಗೆ ಕೌಟುಂಬಿಕ ಸಂಬಂಧವಿದೆ. ಹಾಗಾಗಿ ನಾನು ಈಗಲೂ ಗೌಡ್ತಿಯೇ, ಮುಂದೆಯೂ ಗೌಡ್ತಿಯಾಗಿಯೇ ಇರುವೆ ಎಂದಿದ್ದಾರೆ. ರಮ್ಯಾ ಮದುವೆ ಯಾವಾಗ ಎಂದು ಹಲವು

ನಾನು ಗೌಡ್ತಿಯಾಗಿಯೇ ಇರ್ತೇನೆ; ಗೌಡ ಹುಡುಗನ ಹುಡುಕಿ| ಮದುವೆ ಬಗ್ಗೆ ಮನದಾಳ ಬಿಚ್ಚಿಟ್ಟ ರಮ್ಯಾ Read More »

ಪುತ್ತೂರಿನಲ್ಲಿ ಗೂಂಡಾ ರಾಜ್ಯ ಸ್ಥಾಪನೆಗೆ ಅವಕಾಶ ಕೊಡಲ್ಲ – ಡಿವಿಎಸ್

ಸಮಗ್ರ ನ್ಯೂಸ್: ಪುತ್ತೂರಿನಲ್ಲಿ ಒಂದು ಕಾಲದಲ್ಲಿ ರೌಡಿಗಳ ಕೂಟವಿತ್ತು. ಪುತ್ತೂರನ್ನು ಗೂಂಡಾ ಸಾಮ್ರಾಜ್ಯ ಆಳುತ್ತಿತ್ತು. ಅಂಥ ಪುತ್ತೂರಿನಲ್ಲಿ ಸಾಮಾನ್ಯನಿಗೆ ಓಡುವ ವ್ಯವಸ್ಥೆ ಮಾಡಿದ್ದು ಬಿಜೆಪಿ. ಅಂಥಹ ವ್ಯವಸ್ಥೆ ಮತ್ತೆ ಮರುಕಳಿಸಲು ಅವಕಾಶ ನೀಡಲ್ಲ, ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ.ಸದಾನಂದ ಗೌಡ ಹೇಳಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಪ್ರಚಾರಕ್ಕೆ ಪುತ್ತೂರಿಗೆ ಆಗಮಿಸಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಪುತ್ತೂರು ಮಾಜಿ ಶಾಸಕರೂ ಆಗಿರುವ ಡಿವಿಎಸ್ ಪುತ್ತೂರಿನ ಅಂದಿನ ಸ್ಥಿತಿಯನ್ನು ಮಾದ್ಯಮಗಳಿಗೆ

ಪುತ್ತೂರಿನಲ್ಲಿ ಗೂಂಡಾ ರಾಜ್ಯ ಸ್ಥಾಪನೆಗೆ ಅವಕಾಶ ಕೊಡಲ್ಲ – ಡಿವಿಎಸ್ Read More »

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ಉಲ್ಲೇಖಕ್ಕೆ ಸುಳ್ಯ ಬಿಜೆಪಿ ಮಂಡಲ ಖಂಡನೆ

ಸಮಗ್ರ ನ್ಯೂಸ್: ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಹೊರತಂದ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಭಜರಂಗದಳವನ್ನು ನಿಷೇಧಿಸುತ್ತೇವೆ ಎಂಬುದನ್ನು ಸುಳ್ಯ ಮಂಡಲ ಭಾರತೀಯ ಜನತಾ ಪಾರ್ಟಿ ಖಂಡಿಸಿದೆ. ಈ ಬಗ್ಗೆ ಮಂಡಲದ ವತಿಯಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಅಧಿಕಾರ ಪಡೆಯುವ ಹಗಲು ಕನಸು ಕಾಣುತ್ತಿರುವ ಕಾಂಗ್ರೆಸ್ ಒಲೈಕೆ ರಾಜಕರಣದ ಭಾಗವಾಗಿ ತಾವು ಅಧಿಕಾರಕ್ಕೆ ಬಂದಲ್ಲಿ ಭಜರಂಗದಳವನ್ನು ನಿಷೇಧಿಸುತ್ತೇವೆ ಎಂದು ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವುದನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಮಿತಿ ತೀವ್ರವಾಗಿ

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ಉಲ್ಲೇಖಕ್ಕೆ ಸುಳ್ಯ ಬಿಜೆಪಿ ಮಂಡಲ ಖಂಡನೆ Read More »

ಕಾಂಗ್ರೆಸ್ ಓಟ್ ಕೇಳೋಕೆ ಬಂದ್ರೆ “ನಾಯಿ ಬಿಡ್ತೀವಿ” ಬಜರಂಗದಳ ಎಚ್ಚರಿಕೆ

ಸಮಗ್ರ ನ್ಯೂಸ್: ಮಲೆನಾಡ ಮನೆಗಳ ಮುಂದೆ ಕಾಂಗ್ರೆಸ್ಸಿಗರು ಮತ ಕೇಳಲು ಬಂದರೆ ಅವರ ಮೇಲೆ ನಾಯಿ ಬಿಡಲಾಗುವುದು ಎಚ್ಚರ ಎಂಬ ಬೋರ್ಡ್ ಹಾಕಿ ಕಾಂಗ್ರೆಸ್ಸಿನ ಪ್ರಣಾಳಿಕೆಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಿಂದೂ ಸಂಘಟನೆ ಬಜರಂಗದಳವನ್ನ ನಿಷೇಧ ಮಾಡುತ್ತೇವೆ ಎಂದ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರು ಕೆಂಡವಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಗುಡ್ಡಟ್ಟಿ ಎಂಬ ಗ್ರಾಮದಲ್ಲಿ ಅರುಣ್ ಎಂಬ ಭಜರಂಗದಳ ಕಾರ್ಯಕರ್ತ

ಕಾಂಗ್ರೆಸ್ ಓಟ್ ಕೇಳೋಕೆ ಬಂದ್ರೆ “ನಾಯಿ ಬಿಡ್ತೀವಿ” ಬಜರಂಗದಳ ಎಚ್ಚರಿಕೆ Read More »

‘ನಕಲಿ ಹಿಂದುತ್ವವಾದಿಗಳಿಂದ ಕಾಂಗ್ರೆಸ್ ಪ್ರಣಾಳಿಕೆಯ ತಿರುಚಿ ಪ್ರಚಾರ; ಅಷ್ಟಕ್ಕೂ ಪ್ರಣಾಳಿಕೆಯಲ್ಲಿರುವುದೇನು?’ – ವೈರಲ್ ಆಗ್ತಿದೆ ನವೀನ್ ಸೂರಿಂಜೆ ಬರಹ

ಸಮಗ್ರ ಡಿಜಿಟಲ್ ಡೆಸ್ಕ್: ಕಾಂಗ್ರೆಸ್ ಕರ್ನಾಟಕದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಆದರೆ ಇದರ ಬೆನ್ನಲ್ಲೇ ಪ್ರತಿಪಕ್ಷ ಬಿಜೆಪಿ ಈ ಪ್ರಣಾಳಿಕೆಯ ಕುರಿತು ಹಿಂದುತ್ವದ ಅಸ್ತ್ರ ಪ್ರಯೋಗಿಸಿದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಅವರು ಜಾಲತಾಣಗಳಲ್ಲಿ ಪ್ರಕಟಿಸಿದ ಬರಹವೊಂದು ವೈರಲ್ ಆಗುತ್ತಿದ್ದು, ಆ ಬರಹವನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ. “ಭಜರಂಗದಳ ಮತ್ತು ಪಿಎಫ್ಐ ನಿಷೇಧ ಮಾಡಲಾಗುವುದು ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಲಾಗಿದೆ ಎಂಬ ಚರ್ಚೆಗಳು ಪ್ರಾರಂಭವಾಗಿದೆ. ನಿಷೇಧ ಸರಿಯೋ ತಪ್ಪೊ ಬೇರೆಯದ್ದೇ ಚರ್ಚೆ.

‘ನಕಲಿ ಹಿಂದುತ್ವವಾದಿಗಳಿಂದ ಕಾಂಗ್ರೆಸ್ ಪ್ರಣಾಳಿಕೆಯ ತಿರುಚಿ ಪ್ರಚಾರ; ಅಷ್ಟಕ್ಕೂ ಪ್ರಣಾಳಿಕೆಯಲ್ಲಿರುವುದೇನು?’ – ವೈರಲ್ ಆಗ್ತಿದೆ ನವೀನ್ ಸೂರಿಂಜೆ ಬರಹ Read More »

ರಾಮನ ಬಳಿಕ ರಾಮಭಂಟನನ್ನೂ ಬಂಧಿಸಿಡುವ ಹುನ್ನಾರ| ಕಾಂಗ್ರೆಸ್ ಪ್ರಣಾಳಿಕೆ ವಿರುದ್ದ ಗುಡುಗಿದ ಪ್ರಧಾನಿ

ಸಮಗ್ರ ನ್ಯೂಸ್: ಕಾಂಗ್ರೆಸ್ ಈ ಹಿಂದೆ ಶ್ರೀರಾಮಚಂದ್ರನ ಬಂಧಿಸಿಟ್ಟಿತು. ಇದೀಗ ಹುನುಮಾನ್ ಜನ್ಮಸ್ಥಳದಲ್ಲೇ ಭಜರಂಗಬಲಿಯನ್ನು ಬಂಧಿಸಿಡಲು ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪ್ರಣಾಳಿಕೆ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿ ಭಜರಂಗದಳ ನಿಷೇಧಿಸುವುದಾಗಿ ಘೋಷಿಸಿದೆ. ಇದರ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಶ್ರೀರಾಮಚಂದ್ರ ಹಾಗೂ ಹನುಮಾನ್ ನಮಗೆ ಪೂಜ್ಯ ಎಂದಿದ್ದಾರೆ. ವಿಜಯನಗರದಲ್ಲಿ ಆಯೋಜಿಸಿದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ, ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ಹನುಮಾನ ಜನ್ಮಸ್ಥಾನಕ್ಕೆ ಬಂದಿದ್ದೇನೆ. ನಾನು

ರಾಮನ ಬಳಿಕ ರಾಮಭಂಟನನ್ನೂ ಬಂಧಿಸಿಡುವ ಹುನ್ನಾರ| ಕಾಂಗ್ರೆಸ್ ಪ್ರಣಾಳಿಕೆ ವಿರುದ್ದ ಗುಡುಗಿದ ಪ್ರಧಾನಿ Read More »

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಸಹೋದರನ ಮನೆಗೆ ಐಟಿ ದಾಳಿ| ಗಿಡದಲ್ಲಿ ಅಡಗಿಸಿಟ್ಟಿದ್ದ ಕೋಟಿ ರೂ ಪತ್ತೆ!

ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಐಟಿ ಅಧಿಕಾರಿಗಳು ರಾಜ್ಯದ ಹಲವೆಡೆ ದಾಳಿ ನಡೆಸಿ, ಅಕ್ರಮಗಳನ್ನು ಬಯಲಿಗೆಳೆಯುತ್ತಿದ್ದಾರೆ. ಇದೀಗ ಮೈಸೂರಿನಲ್ಲಿ ಕೆ.ಸುಬ್ರಹ್ಮಣ್ಯ ರೈ ಎಂಬುವವರ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಟಿ ಅಧಿಕಾರಿಗಳು ಕೆ.ಸುಬ್ರಹ್ಮಣ್ಯ ರೈ ಎಂಬುವವರ ಮನೆಗೆ ದಾಳಿ ನಡೆಸಿ, ಅವರ ಮನೆಯಂಗಳದಲ್ಲಿದ್ದ ಗಿಡದಲ್ಲಿ ನೇತು ಹಾಕಿದ್ದ ಒಂದು ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಖಚಿತ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ದಾಳಿ

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಸಹೋದರನ ಮನೆಗೆ ಐಟಿ ದಾಳಿ| ಗಿಡದಲ್ಲಿ ಅಡಗಿಸಿಟ್ಟಿದ್ದ ಕೋಟಿ ರೂ ಪತ್ತೆ! Read More »

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲೆಂದು‌ ಕರಾವಳಿಯ ದೈವ ದೇವರುಗಳಿಗೆ ಮೊರೆಹೋದ‌ ಎಚ್‌ಡಿಡಿ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ; ಯಾರು ಸಿಎಂ ಆಗುತ್ತಾರೆ ಎಂಬ ಲೆಕ್ಕಾಚಾರಗಳು ಈಗಲೇ ಶುರುವಾಗಿದೆ. ಈ ನಡುವೆ, ಕುಮಾರಸ್ವಾಮಿ ಮುಂದಿನ ಸಿಎಂ ಆಗಬೇಕೆಂದು ಮಾಜಿ ಪ್ರಧಾನಿ ದೇವೇಗೌಡರು ಇದೀಗ ತುಳುನಾಡಿನ ದೈವ-ದೇವರ ಮೊರೆ ಹೋಗುವ ಮೂಲಕ ಹರಕೆ ಹೊತ್ತಿದ್ದಾರೆ. ಮುಖ್ಯಮಂತ್ರಿಯಾಗಬೇಕೆಂದು ಮಾಜಿ ಪ್ರಧಾನಿ, ಮಣ್ಣಿನ ಮಗ ಕಾಲಿಗೆ ಚಕ್ರ ಕಟ್ಟಿ ತಿರುಗಾಡುತ್ತಿದ್ದಾರೆ. ತನ್ನ ಇಳಿ ವಯಸ್ಸಿನಲ್ಲೂ ಆರೋಗ್ಯವನ್ನು ಲೆಕ್ಕಿಸದೆ ಮಗನಿಗಾಗಿ ಶ್ರಮಿಸುತ್ತಿದ್ದಾರೆ. ಮಂಗಳೂರಿಗೆ ಭೇಟಿ ನೀಡಿದ ಸಂದರ್ಭ ಬಜಪೆ ಸುಂಕದಕಟ್ಟೆಯಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲೆಂದು‌ ಕರಾವಳಿಯ ದೈವ ದೇವರುಗಳಿಗೆ ಮೊರೆಹೋದ‌ ಎಚ್‌ಡಿಡಿ Read More »

ಡಿ ಕೆ ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗೆ ಬಡಿದ ಹದ್ದು| ಕಾಪ್ಟರ್ ತುರ್ತು ಭೂಸ್ಪರ್ಶ

ಸಮಗ್ರ ನ್ಯೂಸ್: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಚ್​ಎಎಲ್​ನಿಂದ ಮುಳಬಾಗಿಲಿಗೆ ತೆರಳುತ್ತಿದ್ದರು. ಈ ವೇಳೆ ಹೆಲಿಕಾಪ್ಟರ್​ಗೆ ರಣಹದ್ದು ಬಡಿದಿದೆ. ಇದರಿಂದ ಹೆಲಿಕಾಪ್ಟರ್​ ವಿಂಡೋ ಗ್ಲಾಸ್​ ಪುಡಿಪುಡಿಯಾಗಿದ್ದು ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರಚಾರ ಹಿನ್ನೆಲೆ ಮುಳುಬಾಗಿಲಿಗೆ ತೆರಳಬೇಕಿತ್ತು. ಹೀಗಾಗಿ ಬೆಂಗಳೂರಿನ ಹೆಚ್​ಎಎಲ್​ನಿಂದ ಮುಳಬಾಗಿಲಿಗೆ ತೆರಳಲು ಹೆಲಿಕಾಪ್ಟರ್ ಹತ್ತಿದ್ದಾರೆ. ಕೊಂಚ ದೂರ ಸಾಗುತ್ತಿದ್ದಂತೆ ಹೆಲಿಕಾಪ್ಟರ್​ಗೆ ರಣಹದ್ದು ಬಡಿದಿದೆ. ಇದರಿಂದ ಹೆಲಿಕಾಪ್ಟರ್​ ವಿಂಡೋ ಗ್ಲಾಸ್​ ಪುಡಿಪುಡಿಯಾಗಿದ್ದು ತಕ್ಷಣ ಎಚ್ಚೆತ್ತ ಪೈಲೆಟ್ ತುರ್ತು ಭೂಸ್ಪರ್ಶ ಮಾಡಿದ್ದಾರೆ.

ಡಿ ಕೆ ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗೆ ಬಡಿದ ಹದ್ದು| ಕಾಪ್ಟರ್ ತುರ್ತು ಭೂಸ್ಪರ್ಶ Read More »