May 2023

‘ಶಂಖ’ವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು….?

ಸಮಗ್ರ ನ್ಯೂಸ್: ಹಿಂದೂ ಧರ್ಮದಲ್ಲಿ ಬಹಳ ಪ್ರಾಮುಖ್ಯತೆ ಪಡೆದ ಶಂಖವನ್ನು ಪೂಜೆಯ ಸಮಯದಲ್ಲಿ ಊದುವ ರೂಢಿಯಿದೆ. ಶಂಖನಾದದಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಯಾಗುವುದು. ಶಂಖ ನಮ್ಮ ಆರೋಗ್ಯ, ಧನ ಮುಂತಾದವುಗಳ ಮೇಲೂ ಧನಾತ್ಮಕ ಪ್ರಭಾವ ಬೀರುತ್ತದೆ. ವಿಷ್ಣು ಮತ್ತು ದೇವಿ ಲಕ್ಷ್ಮಿ ಇಬ್ಬರೂ ಶಂಖವನ್ನು ಧರಿಸಿರುತ್ತಾರೆ. ಅದರಿಂದ ಶಂಖ ಇರುವ ಮನೆಯಲ್ಲಿ ಈ ದೇವತೆಗಳ ಕೃಪೆ ಸದಾ ನೆಲೆಯಾಗಿರುತ್ತದೆ ಎಂದು ನಂಬಲಾಗಿದೆ. ಶುಕ್ರವಾರದ ದಿನ ಲಕ್ಷ್ಮಿಯನ್ನು ಪೂಜಿಸಿ ಶಂಖ ಊದಿದರೆ ಮನೆಯಲ್ಲಿ ಸಮೃದ್ಧಿ ಹೆಚ್ಚುತ್ತದೆ ಎಂಬುದು ಹಿಂದೂ […]

‘ಶಂಖ’ವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು….? Read More »

ರಾಜ್ಯದಲ್ಲಿ ನಾಲ್ಕು ದಿನ ಮದ್ಯ ಮಾರಾಟ ಬಂದ್

ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣೆಗೆ ಮೇ 10 ರ ಬುಧವಾರದಂದು ಮತದಾನ ನಡೆಯಲಿದ್ದು, ಮೇ 13ರ ಶನಿವಾರ ಮತ ಎಣಿಕೆ ನಡೆಯಲಿದೆ. ಮತದಾನ ಹಾಗೂ ಮತ ಎಣಿಕೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ನಾಲ್ಕು ದಿನಗಳ ಕಾಲ ಮದ್ಯ ಮಾರಾಟ ಬಂದ್ ಆಗಲಿದೆ. ಮತದಾನ ಹಾಗೂ ಮತ ಎಣಿಕೆ ಹಿನ್ನೆಲೆಯಲ್ಲಿ ಮೇ 8, 9, 10 ಮತ್ತು 13ರಂದು ಮದ್ಯ ಮಾರಾಟ ಬಂದ್ ಆಗಲಿದ್ದು, ಮೇ 8ರ ಬೆಳಿಗ್ಗೆ 6 ಗಂಟೆಯಿಂದಲೇ ಮದ್ಯದಂಗಡಿಗಳು ಬಂದ್ ಆಗಲಿದ್ದು, ಮೇ 10ರ ಮಧ್ಯರಾತ್ರಿ

ರಾಜ್ಯದಲ್ಲಿ ನಾಲ್ಕು ದಿನ ಮದ್ಯ ಮಾರಾಟ ಬಂದ್ Read More »

Weather Report:ಚಂಡಮಾರುತ; ವಾಯುಭಾರ ಕುಸಿತ| ಮೇ.6ರಿಂದ ವ್ಯಾಪಕ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಕಳೆದ ಒಂದೂವರೆ ತಿಂಗಳಿಂದ ಸೂರ್ಯನ ತಾಪಮಾನ ಹೆಚ್ಚಳದಿಂದ ರಾಜ್ಯದ ಜನತೆ ಸೆಕೆಯಲ್ಲಿ ಬೆಂದು ಬಸವಳಿದಿದ್ದಾರೆ. ಹೀಗಾಗಿ ಜನರು ವರುಣನ ಆಗಮನದಿಂದ ಸಂತಸಗೊಂಡಿದ್ದಾರೆ. ವಾತಾವಾರಣದಲ್ಲಿ ಗಾಳಿ ದಿಕ್ಕಿನ ಬದಲಾವಣೆಯಿಂದಾಗಿ ದಕ್ಷಿಣ ಒಳನಾಡಿನಲ್ಲಿ ಮುಂದಿನ 2 ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಮೇ 8 ರಿಂದ 11ರ ವೇಳೆಗೆ ಪೂರ್ವ ಕರಾವಳಿಗೆ ಮೋಚಾ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಇನ್ನು ಈ ಸಮಯದಲ್ಲಿ

Weather Report:ಚಂಡಮಾರುತ; ವಾಯುಭಾರ ಕುಸಿತ| ಮೇ.6ರಿಂದ ವ್ಯಾಪಕ ಮಳೆ ಸಾಧ್ಯತೆ Read More »

ಬಿಡುಗಡೆಗೊಂಡ 24 ಗಂಟೆಯೊಳಗೆ 1 ಮಿಲಿಯನ್ ವೀಕ್ಷಣೆಯೊಂದಿಗೆ ಸದ್ದು ಮಾಡುತ್ತಿದೆ ಬೇರ ಸಿನಿಮಾದ ಟೀಸರ್

ಸಮಗ್ರ ನ್ಯೂಸ್: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಹೊಸಬರ ಸಿನಿಮಾಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಹೀಗಿರುವಾಗ ‘ಬೇರ’ ಸಿನಿಮಾ ವಿಭಿನ್ನ ಕಥೆಯನ್ನು ಇಟ್ಟುಕೊಂಡು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಹ್ಯಾಟ್ರಿಕ್ ಹೀರೊ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಬೇರ ಚಿತ್ರದ ಟೀಸರ್ ನ್ನು ಬಿಡುಗಡೆಗೊಳಿಸಿದ್ದರು. ಆನಂದ್ ಆಡಿಯೋದಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡ ‘ಬೇರ’ ಟೀಸರ್ ಇದೀಗ ಕೇವಲ 24 ಗಂಟೆಯೊಳಗೆ 8 ಲಕ್ಷ ವೀಕ್ಷಣೆಯೊಂದಿಗೆ ಭಾರೀ ಸದ್ದು ಮಾಡುತ್ತಿದೆ. ಶಿವ ರಾಜ್​ಕುಮಾರ್​ಸಿನಿಮಾದ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಅಭಿಮಾನಿಗಳಲ್ಲಿ

ಬಿಡುಗಡೆಗೊಂಡ 24 ಗಂಟೆಯೊಳಗೆ 1 ಮಿಲಿಯನ್ ವೀಕ್ಷಣೆಯೊಂದಿಗೆ ಸದ್ದು ಮಾಡುತ್ತಿದೆ ಬೇರ ಸಿನಿಮಾದ ಟೀಸರ್ Read More »

ನಟ ಶರತ್ ಬಾಬು ಆರೋಗ್ಯ ಸ್ಥಿರ| ವದಂತಿಗಳನ್ನು ನಂಬದಂತೆ ಕುಟುಂಬಸ್ಥರ ಮನವಿ

ಸಮಗ್ರ ನ್ಯೂಸ್: ಶರತ್ ಬಾಬು ಇನ್ನಿಲ್ಲ ಎಂಬ ಎಲ್ಲಾ ವರದಿಗಳನ್ನ ನಟನ ಸಹೋದರಿ ತಳ್ಳಿಹಾಕಿದ್ದು, ವದಂತಿಗಳನ್ನು ನಂಬದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಶರತ್ ಬಾಬು ಆರೋಗ್ಯದ ಕುರಿತು ಹೇಳಿಕೆ ನೀಡಿರುವ ಕುಟುಂಬ, ಹಿರಿಯ ನಟನ ಆರೋಗ್ಯ ಸ್ಥಿರವಾಗಿದ್ದು, ಶೀಘ್ರದಲ್ಲೇ ಚೇತರಿಸಿಕೊಂಡು ಮನೆಗೆ ಮರಳಲಿದ್ದಾರೆ ಎಂದು ತಿಳಿಸಿದ್ದಾರೆ. ಶರತ್ ಬಾಬು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೊದಲಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದ ಶರತ್ ಬಾಬು ಅವರನ್ನು ನಂತರ ಹೈದ್ರಾಬಾದ್’ನ ಎಐಜಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಸದ್ಯ ಅಲ್ಲಿಯೇ ಚಿಕಿತ್ಸೆ

ನಟ ಶರತ್ ಬಾಬು ಆರೋಗ್ಯ ಸ್ಥಿರ| ವದಂತಿಗಳನ್ನು ನಂಬದಂತೆ ಕುಟುಂಬಸ್ಥರ ಮನವಿ Read More »

ಮೇ.6‌ ಕ್ಕೆ ಸೋನಿಯಾ ಗಾಂಧಿ ಚುನಾವಣಾ ರಂಗಪ್ರವೇಶ| ಹುಬ್ಬಳ್ಳಿಯಲ್ಲಿ ಪ್ರಚಾರಕ್ಕೆ ಅಖಾಡ ಸಿದ್ದ

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭಾ ಚುನಾವಣಾ ಅಖಾಡಕ್ಕೆ ಸೋನಿಯಾ ಗಾಂಧಿ ಎಂಟ್ರಿ ಕೊಡುತ್ತಿದ್ದು, ಮೇ 6 ರಂದು ಹುಬ್ಬಳ್ಳಿಗೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿದೆ. ಈಗಾಗಲೇ ‌ರಾಹುಲ್, ಪ್ರಿಯಾಂಕಾ, ಖರ್ಗೆ ಸೇರಿದಂತೆ ಕಾಂಗ್ರೆಸ್ ನ ಹಿರಿಯ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಸೋನಿಯಾ ಗಾಂಧಿ ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ. ಮೇ.6 ರಂದು ಹುಬ್ಬಳ್ಳಿಗೆ ಆಗಮಿಸಿ ಅಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಿ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ

ಮೇ.6‌ ಕ್ಕೆ ಸೋನಿಯಾ ಗಾಂಧಿ ಚುನಾವಣಾ ರಂಗಪ್ರವೇಶ| ಹುಬ್ಬಳ್ಳಿಯಲ್ಲಿ ಪ್ರಚಾರಕ್ಕೆ ಅಖಾಡ ಸಿದ್ದ Read More »

ಆಟೋ ರಿಕ್ಷಾ ಹೊತ್ತಿ ಮಹಿಳೆ ಸಜೀವ ದಹನ

ಸಮಗ್ರ ನ್ಯೂಸ್: ಮೇ 3 ಮಹಾರಾಷ್ಟ್ರದ ಥಾಣೆ ನಗರದಲ್ಲಿ ಆಟೋ ರಿಕ್ಷಾಕ್ಕೆ ಬೆಂಕಿ ಹೊತ್ತಿಕೊಂಡು ಮಹಿಳೆಯೊಬ್ಬರು ಆಟೋದಲ್ಲೇ ಸಜೀವ ದಹನಗೊಂಡಿದ್ದಾರೆ. ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿ ಆಟೋ ರಸ್ತೆಯ ವಿಭಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಮಹಿಳೆ ಆಟೋದಲ್ಲೇ ಇದ್ದ ಕಾರಣ ಸಜೀವ ದಹನವಾಗೊಂಡಿದ್ದಾರೆ. ಸಂಪೂರ್ಣ ದೇಹ ಸುಟ್ಟು ಹೋದ ಕಾರಣ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಘಟನೆಯಲ್ಲಿ ಆಟೋ ಚಾಲಕ ರಾಜೇಶ್‌ ಕುಮಾರ್‌ (45) ಅವರಿಗೆ ಸುಟ್ಟ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಟೋ ರಿಕ್ಷಾ ಹೊತ್ತಿ ಮಹಿಳೆ ಸಜೀವ ದಹನ Read More »

ಬೆಳ್ಳಾರೆ: ಸಿಕ್ಕಿದ್ದು ದಕ್ಕದು ಎಂದು ‘ಕಾಮಧೇನು’ವಿನ ಮೇಲೆ ಮೋಸದ ಬಲೆ ಎಸೆದ ದಿವ್ಯಪ್ರಭಾ!? ಪುತ್ತೂರು ಜೆಡಿಎಸ್ ಅಭ್ಯರ್ಥಿ ಮೇಲೆ ಮೋಸ; ವಂಚನೆ ಪ್ರಕರಣ ದಾಖಲು

ಸಮಗ್ರ ನ್ಯೂಸ್: ಕೆಲ ದಿನಗಳ ಹಿಂದೆ ಬೀದಿಗೆ ಬಂದಿದ್ದ ಕಾಮಧೇನು ಮಾಧವ ಗೌಡರ ಮನೆಯ ಕಲಹವು ಇದೀಗ ಮತ್ತೊಂದು ರೀತಿಯಲ್ಲಿ ಬೀದಿಗೆ ಬಂದಿದದ್ದು ಸ್ವಂತ ಪತ್ನಿಯೇ ತನ್ನ ಗಂಡ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪುತ್ತೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ(45) ಮಾಧವ ಗೌಡ(65), ಸ್ಪಂದನ(23), ಪ್ರಕರಣದ ಆರೋಪಿಗಳು. ದೂರು ನೀಡಿರುವ ನವೀನ್ ಎಂಬವರ ಚಿಕ್ಕಮ್ಮ(ಮಾಧವ ಗೌಡರ ಎರಡನೇ ಪತ್ನಿ) ತಾರಾಕುಮಾರಿ, ತಾ.31-12-2020 ರಂದು ತಾರ ಕುಮಾರಿಯವರು ತನ್ನ ಒಡೆತನದಲ್ಲಿ ಕಾಮಧೇನು ಗೋಲ್ಡ್ ಪ್ಯಾಲೇಸ್‌ನ್ನು

ಬೆಳ್ಳಾರೆ: ಸಿಕ್ಕಿದ್ದು ದಕ್ಕದು ಎಂದು ‘ಕಾಮಧೇನು’ವಿನ ಮೇಲೆ ಮೋಸದ ಬಲೆ ಎಸೆದ ದಿವ್ಯಪ್ರಭಾ!? ಪುತ್ತೂರು ಜೆಡಿಎಸ್ ಅಭ್ಯರ್ಥಿ ಮೇಲೆ ಮೋಸ; ವಂಚನೆ ಪ್ರಕರಣ ದಾಖಲು Read More »

ಮೇ ಆರಂಭದಲ್ಲಿ ಮೋಚಾ’ ಚಂಡಮಾರುತ ಸಾಧ್ಯತೆ

ಸಮಗ್ರ ನ್ಯೂಸ್: ಮೇ ಆರಂಭದಲ್ಲಿ ಮೋಚಾ’ ಚಂಡಮಾರುತ ಸಾಧ್ಯತೆ ಕುರಿತು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಮುನ್ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ, ಮೇ ಆರಂಭದಲ್ಲಿ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ‘ಮೋಚಾ’ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಯಿದೆ ಮತ್ತು ಪಶ್ಚಿಮ ಬಂಗಾಳ ಕರಾವಳಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಿಳಿಸಿದೆ. IMD ಕೇವಲ ಕಡಿಮೆ ಒತ್ತಡದ ಪ್ರದೇಶ ರಚನೆಯ ಮುನ್ಸೂಚನೆ ನೀಡಿದೆ. ಆದರೆ, ಮೇ ಎರಡನೇ ವಾರದಲ್ಲಿ ಚಂಡಮಾರುತವು ತೀವ್ರ ಚಂಡಮಾರುತವಾಗಿ

ಮೇ ಆರಂಭದಲ್ಲಿ ಮೋಚಾ’ ಚಂಡಮಾರುತ ಸಾಧ್ಯತೆ Read More »

ಮೇ 5ರಂದು ಈ ವರ್ಷದ ಮೊದಲ ಚಂದ್ರಗ್ರಹಣ

Samagra news: ಈ ವರ್ಷದ ಮೊದಲ ಚಂದ್ರಗ್ರಹಣ ಮೇ 5 ಶುಕ್ರವಾರದಂದು ರಾತ್ರಿ 8.45 ರಿಂದ ಆರಂಭವಾಗಿ ಮೇ 6 ರ ಮುಂಜಾನೆ 1.02 ಕ್ಕೆ ಗ್ರಹಣ ಕೊನೆಗೊಳ್ಳುತ್ತದೆ. ಚಂದ್ರಗ್ರಹಣ ಸಂಭವಿಸುವುದು ಪೆನಂಬ್ರಾಲ್ ಚಂದ್ರ ಗ್ರಹಣವಾಗಿದ್ದು ಒಟ್ಟು 4 ಗಂಟೆ 18 ನಿಮಿಷಗಳವರೆಗೆ ಗ್ರಹಣ ಗೋಚರಿಸಲಿದೆ. ಅಂಟಾರ್ಟಿಕಾ, ಏಷ್ಯಾ, ರಷ್ಯಾ, ಆಫ್ರಿಕಾ ಸೇರಿದಂತೆ ಪ್ರಪಂಚದ ಹೆಚ್ಚಿನ ಭಾಗಗಳಿಂದ ಚಂದ್ರಗ್ರಹಣ ಗೋಚರಿಸುತ್ತದೆ. ಈ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಮೇ 5 ರಂದು ಪೆನಂಬ್ರಾಲ್ ಚಂದ್ರಗ್ರಹಣವಾಗಿರುತ್ತದೆ. ಈ ಹಂತದಲ್ಲಿ ಚಂದ್ರನು

ಮೇ 5ರಂದು ಈ ವರ್ಷದ ಮೊದಲ ಚಂದ್ರಗ್ರಹಣ Read More »