May 2023

ಭಾರೀ ಗಾಳಿ ಮಳೆ| ಕಡಬ- ಸುಬ್ರಹ್ಮಣ್ಯ ಸಂಪರ್ಕ ರಸ್ತೆ ಸಂಚಾರ ಅಸ್ತವ್ಯಸ್ತ

ಸಮಗ್ರ ನ್ಯೂಸ್: ವಿಪರೀತ ಗಾಳಿ ಮತ್ತು ಮಳೆಯ ಪರಿಣಾಮ ಕಡಬ – ಸುಬ್ರಹ್ಮಣ್ಯ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಮರ್ಧಾಳದಲ್ಲಿ ಪ್ರವಾಸಿಗರ ಟಿಟಿ ವಾಹನವೊಂದರ ಮೇಲೆ ಮರ ಬಿದ್ದ ಪರಿಣಾಮ ಪ್ರಯಾಣಿಕರು ಜಖಂಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನೆಟ್ಟಣ, ಬಿಳಿನೆಲೆ, ಕೈಕಂಬ ಪ್ರದೇಶಗಳಲ್ಲಿ ರಸ್ತೆಗೆ ಮರಗಳು ಉರುಳಿದ ಪರಿಣಾಮ ರಸ್ತೆ ಸಂಪರ್ಕ ಬಂದ್ ಆಗಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿದ್ದು, ಅಗ್ನಿಶಾಮಕ ದಳ ತಂಡ ಕಾರ್ಯಾಚರಣೆ ನಡೆಸುತ್ತಿದೆ.

ಭಾರೀ ಗಾಳಿ ಮಳೆ| ಕಡಬ- ಸುಬ್ರಹ್ಮಣ್ಯ ಸಂಪರ್ಕ ರಸ್ತೆ ಸಂಚಾರ ಅಸ್ತವ್ಯಸ್ತ Read More »

ಖಾಸಗಿ ಬಸ್ ಮತ್ತು ಇನ್ನೋವಾ ನಡುವೆ ಭೀಕರ ಅಪಘಾತ| ಮಗು ಸೇರಿದಂತೆ 10 ಮಂದಿ ಸಾವು

ಸಮಗ್ರ ನ್ಯೂಸ್: ಖಾಸಗಿ ಬಸ್ ಮತ್ತು ಇನೋವಾ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹತ್ತು ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲ ಹಾಗೂ ಟಿ.ನರಸೀಪುರ ಮುಖ್ಯ ರಸ್ತೆಯ ಕುರುಬೂರು ಗ್ರಾಮದ ಪಿಂಜರ ಪೋಲ್ ಎಂಬಲ್ಲಿ ನಡೆದಿದೆ. ಸೋಮವಾರ ಮಧ್ಯಾಹ್ನ ಟಿ.ನರಸೀಪುರ ಮುಖ್ಯ ರಸ್ತೆಯ ಕುರುಬೂರು ಗ್ರಾಮದ ಬಳಿಕ ಇನೋವಾ ಕಾರು ಖಾಸಗಿ ಬಸ್‌ಗೆ ಡಿಕ್ಕಿಯಾಗಿದೆ. ಅಪಘಾತದ ಭೀಕರತೆಗೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದವರು ಕೂಡ ಆಸ್ಪತ್ರೆ ಮಾರ್ಗ ಮಧ್ಯೆದಲ್ಲಿ ಕೊನೆಯುಸಿರೆಳೆದಿದ್ದಾರೆ. ಭೀಕರ ಅಪಘಾತದಲ್ಲಿ ಮಗು

ಖಾಸಗಿ ಬಸ್ ಮತ್ತು ಇನ್ನೋವಾ ನಡುವೆ ಭೀಕರ ಅಪಘಾತ| ಮಗು ಸೇರಿದಂತೆ 10 ಮಂದಿ ಸಾವು Read More »

ಜೂ.1 ರಂದು ರಾಜ್ಯ ಸಚಿವ ಸಂಪುಟ ಸಭೆ| ಅಂದೇ ಸಿಗುತ್ತಾ ಗ್ಯಾರಂಟಿ ಭಾಗ್ಯ?

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭಾ ಚುನಾಣೆಯಲ್ಲಿ ಕಾಂಗ್ರೆಸ್​ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ಕಾಂಗ್ರೆಸ್​ ಸರ್ಕಾರವು ಸಿದ್ಧತೆ ನಡೆಸಿದ್ದು, ಮುಂದಿನ ಸಚಿವ ಸಂಪುಟದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಸಂಬಂಧ ಇಂದು ಸಿಎಂ ಸಿದ್ದರಾಮಯ್ಯ 5 ಇಲಾಖೆಗಳ ಜೊತೆಗೆ ಮಹತ್ವದ ಸಭೆ ನಡೆಸಲಿದ್ದಾರೆ. ಜೂನ್ 1 ರಂದು ನಡೆಯಲಿರುವ ಸಚಿವ ಸಂಪುಟದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಸಂಬಂಧ ಮಾಹಿತಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 5 ಗ್ಯಾರಂಟಿ

ಜೂ.1 ರಂದು ರಾಜ್ಯ ಸಚಿವ ಸಂಪುಟ ಸಭೆ| ಅಂದೇ ಸಿಗುತ್ತಾ ಗ್ಯಾರಂಟಿ ಭಾಗ್ಯ? Read More »

ಭೀಕರ ಕಾರು ಅಪಘಾತದಲ್ಲಿ ಏಳು ಇಂಜಿನಿಯರಿಂಗ್ ವಿಧ್ಯಾರ್ಥಿಗಳು ದುರ್ಮರಣ

ಸಮಗ್ರ ನ್ಯೂಸ್: ಬೆಳ್ಳಂಬೆಳಗ್ಗೆ ನಡೆದ ಭೀಕರ ಕಾರು ಅಪಘಾತದಲ್ಲಿ ಒಂದೇ ಕಾಲೇಜಿನ ಏಳು ವಿದ್ಯಾರ್ಥಿಗಳು ಮೃತ್ಯುಲೋಕಕ್ಕೆ ತೆರಳಿದ್ದಾರೆ. ಈ ಅವಘಡದಲ್ಲಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಮೃತಪಟ್ಟವರನ್ನು ಕೌಶಿಕ್‌ ಬರುವಾ, ಕೌಶಿಕ್‌ ಮೋಹನ್‌, ರಾಜ್‌ ಕಿರಣ್‌ ಭೂಯಾನ್‌, ಇವೋನ್‌ ಬರುವಾ, ಅರಿಂದಮ್‌ ಭೋವಲ್‌, ಉಪಾಂಶು ಶರ್ಮಾ, ನಿಯಾರ್‌ ದೇಕಾ ಎಂದು ಗುರುತಿಸಲಾಗಿದೆ. ಅಸ್ಸಾಂ ಗುವಾಹಟಿಯ ಜಾಲುಕ್‌ಬಾರಿ ಪ್ರದೇಶದಲ್ಲಿರುವ ಎಇಸಿ ಕಾಲೇಜಿನ ಮೂರನೇ ವರ್ಷದ ಹತ್ತು ವಿದ್ಯಾರ್ಥಿಗಳು ಮುಂಜಾನೆಯ ನುಸುಕಿನ ವೇಳೆಗೆ ಕಾರಿನಲ್ಲಿ ಕಾಲೇಜು ಕ್ಯಾಂಪಸ್‌ನಿಂದ ಹೊರಗೆ ಹೋಗುತ್ತಿದ್ದು, ಇದೇ

ಭೀಕರ ಕಾರು ಅಪಘಾತದಲ್ಲಿ ಏಳು ಇಂಜಿನಿಯರಿಂಗ್ ವಿಧ್ಯಾರ್ಥಿಗಳು ದುರ್ಮರಣ Read More »

ಮೇ.31 ರಿಂದ ಶಾಲಾ ಶೈಕ್ಷಣಿಕ ವರ್ಷಾರಂಭ; ಮಾರ್ಗಸೂಚಿ ಪ್ರಕಟ| ಇತಿಹಾಸದಲ್ಲೇ ಮೊದಲ ಬಾರಿಗೆ ಪುಸ್ತಕ, ಯೂನಿಫಾರ್ಮ್ ವಿತರಿಸಿದ ಶಿಕ್ಷಣ ಇಲಾಖೆ|

ಸಮಗ್ರ ನ್ಯೂಸ್: 2023-24 ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿಯಂತೆ ಮೇ. 31 ರಿಂದ ರಾಜ್ಯಾದ್ಯಂತ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಪುನಾರಂಭಗೊಳ್ಳಲಿವೆ. ಇದಕ್ಕೆ ಪೂರಕವಾಗಿ ಮೇ. 29 ಮತ್ತು 30 ರಂದು ಶಾಲೆಗಳನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ, ಸರಿಪಡಿಸಿ ಪ್ರಾರಂಭೋತ್ಸವಕ್ಕೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಸೂಚಿಸಿದೆ. ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಶಾಲೆ ಆರಂಭವಾದ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಜೊತೆಗೆ ಕಡ್ಡಾಯವಾಗಿ

ಮೇ.31 ರಿಂದ ಶಾಲಾ ಶೈಕ್ಷಣಿಕ ವರ್ಷಾರಂಭ; ಮಾರ್ಗಸೂಚಿ ಪ್ರಕಟ| ಇತಿಹಾಸದಲ್ಲೇ ಮೊದಲ ಬಾರಿಗೆ ಪುಸ್ತಕ, ಯೂನಿಫಾರ್ಮ್ ವಿತರಿಸಿದ ಶಿಕ್ಷಣ ಇಲಾಖೆ| Read More »

Weather report| ನಾಳೆಯಿಂದ (ಮೇ.30) ರಾಜ್ಯಾದ್ಯಂತ ವ್ಯಾಪಕ ಮಳೆ ಸಾಧ್ಯತೆ| ಎಲ್ಲೋ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ಮೇ ತಿಂಗಳ ಅಂತ್ಯಕ್ಕೆ ರಾಜ್ಯದಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದ್ದು, ದಕ್ಷಿಣ ಒಳನಾಡಿನ 10 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ನೀಡಲಾಗಿದೆ. ಜೂನ್ ಮೊದಲ ವಾರದಲ್ಲಿ ರಾಜ್ಯದಲ್ಲಿ ಮುಂಗಾರು ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಮಂಗಳವಾರದಿಂದ ಮಳೆಯ ಅಬ್ಬರ ಹೆಚ್ಚಾಗಲಿದ್ದು, ಮೇ 31 ಮತ್ತು ಜೂನ್ 1ರಂದು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಂಭವ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೊಡಗು, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ತುಮಕೂರು, ರಾಮನಗರ

Weather report| ನಾಳೆಯಿಂದ (ಮೇ.30) ರಾಜ್ಯಾದ್ಯಂತ ವ್ಯಾಪಕ ಮಳೆ ಸಾಧ್ಯತೆ| ಎಲ್ಲೋ ಅಲರ್ಟ್ ಘೋಷಣೆ Read More »

ಮೂಡಿಗೆರೆ: ಬಂಡಾಜೆ ಫಾಲ್ಸ್ ಕಡೆಗೆ ಟ್ರೆಕ್ಕಿಂಗ್ ಗೆ ತೆರಳಿದಾತ ಕೊನೆಗೂ ಪತ್ತೆ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ರಾಣಿಝರಿ ಪ್ರದೇಶದ ಮೂಲಕ ಬಂಡಾಜೆ ಫಾಲ್ಸ್‌ ಕಡೆ ಟ್ರೆಕ್ಕಿಂಗ್‌ಗೆ ಬಂದ ಯುವಕನೊಬ್ಬ ದಾರಿ ತಪ್ಪಿ ನಾಪತ್ತೆಯಾಗಿದ್ದು ಸತತ ಹುಡುಕಾಟದ ಬಳಿಕ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಬೆಂಗಳೂರು ಜೆಪಿ ನಗರದ ಪರೋಸ್‌ ಅಗರ್ವಾಲ್‌ ಎಂದು ಹೇಳಲಾಗಿರುವ ಯುವಕ ರಾಣಿಝರಿ ಸಮೀಪದವರೆಗೆ ಬೈಕ್‌ನಲ್ಲಿ ಬಂದಿದ್ದು ಇಲ್ಲಿಂದ ಬಂಡಾಜೆ ಫಾಲ್ಸ್‌ನ ಬದಿಯಿಂದ ಟ್ರೆಕ್ಕಿಂಗ್‌ ನಡೆಸಲು ಮುಂದಾಗಿದ್ದಾನೆ. ಆದರೆ ಸಂಜೆಯಾಗುತ್ತಿದ್ದಂತೆ ದಾರಿ ತಪ್ಪಿದ್ದು ಪೊಲೀಸ್‌ ಕಂಟ್ರೋಲ್‌ ರೂಂಗೆ ದೂರವಾಣಿ ಕರೆ ಮಾಡಿದ್ದಾನೆ. ಆದರೆ ಆತನಿರುವ ಸ್ಥಳ ಪತ್ತೆ

ಮೂಡಿಗೆರೆ: ಬಂಡಾಜೆ ಫಾಲ್ಸ್ ಕಡೆಗೆ ಟ್ರೆಕ್ಕಿಂಗ್ ಗೆ ತೆರಳಿದಾತ ಕೊನೆಗೂ ಪತ್ತೆ Read More »

ಸಿದ್ದರಾಮಯ್ಯ ಟೀಕಿಸಿ ಪ್ರವೀಣ್ ನೆಟ್ಟಾರು ಮಾಡಿದ್ದ ಟ್ವೀಟ್ ವೈರಲ್

ಸಮಗ್ರ ನ್ಯೂಸ್: ಪ್ರವೀಣ್ ನೆಟ್ಟಾರು ಅವರು 3 ವರ್ಷಗಳ ಹಿಂದೆ ಸಿದ್ದರಾಮಯ್ಯ ಅವರನ್ನು ಟೀಕಿಸಿ ಮಾಡಿದ್ದ ಟ್ವೀಟ್ ಇದೀಗ ವೈರಲ್ ಆಗಿದೆ. ಸಿದ್ದರಾಮಯ್ಯ ಅವರು 2020ರ ಅಕ್ಟೋಬರ್ 22ರಂದು ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಟ್ವೀಟ್ ಮಾಡಿದ್ದರು. ಮಂಗಳೂರಿನಲ್ಲಿ ಎಲ್ಲಿಯೋ ಬೀದಿ ಅಲೆಯುತ್ತಿದ್ದ ಈ ನಳಿನ್ ಕುಮಾರ್ ಕಟೀಲ್ ಎಂಬ ಪೋಕರಿಯನ್ನು ಯಾರೋ ತಮ್ಮ ‘ಸಂತೋಷ’ಕ್ಕಾಗಿ ತಂದು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದರು. ಇವರಿಗೆ ಕೊಟ್ಟಿರುವ ಕೆಲಸ ಪಕ್ಷ ಕಟ್ಟುವುದಲ್ಲ, ಬಿ.ಎಸ್. ಯಡಿಯೂರಪ್ಪನವರನ್ನು ಕೆಡವುದು, ಅದನ್ನೇ ಮಾಡುತ್ತಾ

ಸಿದ್ದರಾಮಯ್ಯ ಟೀಕಿಸಿ ಪ್ರವೀಣ್ ನೆಟ್ಟಾರು ಮಾಡಿದ್ದ ಟ್ವೀಟ್ ವೈರಲ್ Read More »

Health Tips| ಮೂಗಿನೊಳಗಿನ ಕೂದಲು ತೆಗೆಯೋ ಮೊದ್ಲು ಈ ಸಲಹೆ ತಿಳ್ಕೊಳ್ಳಿ…

ಸಮಗ್ರ ನ್ಯೂಸ್: ಮುಖದ ಸೌಂದರ್ಯಕ್ಕೆ ಜನರು ಹೆಚ್ಚಿನ ಮಹತ್ವ ನೀಡ್ತಾರೆ. ಮುಖದ ಮೇಲಿರುವ ಅನಗತ್ಯ ಕೂದಲನ್ನು ಕತ್ತರಿಸುತ್ತೇವೆ. ಹಾಗೆ ಮೂಗಿನ ಒಳಗಿರುವ ಕೂದಲನ್ನು ಕೆಲವರು ತೆಗೆಯುತ್ತಾರೆ. ಆದರೆ ಈ ಕೂದಲು ತೆಗೆಯೋದ್ರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಮೂಗಿನೊಳಗಡೆ ಎರಡು ರೀತಿಯ ಕೂದಲಿದ್ದು, ಒಂದು ಚಿಕ್ಕ ಕೂದಲಾದರೆ ಇನ್ನೊಂದು ದಪ್ಪ ಕೂದಲು. ಮೂಗಿನಲ್ಲಿರುವ ಕೂದಲು ದೇಹದ ರಕ್ಷಣೆ ಕೆಲಸ ಮಾಡುತ್ತದೆ. ಉಸಿರಾಡುವಾಗ ಆಮ್ಲಜನಕವನ್ನು ಶುದ್ಧಗೊಳಿಸುವ ಜೊತೆಗೆ ಬ್ಯಾಕ್ಟೀರಿಯಾ, ಧೂಳು ಒಳ ಹೋಗದಂತೆ ರಕ್ಷಿಸುತ್ತದೆ. ಒಂದು ವೇಳೆ ಮೂಗಿನಲ್ಲಿರುವ ಕೂದಲನ್ನು

Health Tips| ಮೂಗಿನೊಳಗಿನ ಕೂದಲು ತೆಗೆಯೋ ಮೊದ್ಲು ಈ ಸಲಹೆ ತಿಳ್ಕೊಳ್ಳಿ… Read More »

ದ.ಕ ಜಿಲ್ಲೆಯ ನಾಲ್ಕು ಮಂದಿಗೆ ಒಲಿದು ಬಂದ ರಾಷ್ಟ್ರಪತಿ ಭೇಟಿ ಅವಕಾಶ

ಸಮಗ್ರ ನ್ಯೂಸ್: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಡಕಟ್ಟು ಜನಾಂಗದ ಸದಸ್ಯರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿದ್ದು, ಈ ಸಲುವಾಗಿ ದಿಲ್ಲಿಯ ರಾಷ್ಟ್ರಪತಿ ಭವನದ ಅಮೃತ ಉದ್ಯಾನಕ್ಕೆ ದೇಶದ ಎಲ್ಲೆಡೆಯಿಂದ ಬುಡಕಟ್ಟು ಜನಾಂಗದ ವಿವಿಧ ವರ್ಗಗಳ ಪುರುಷರು ಹಾಗೂ ಮಹಿಳೆಯರನ್ನು ಆಯ್ಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಿಂದಲೂ ಹಲವು ಸಾಧಕರನ್ನು ಆಯ್ಕೆ ಮಾಡಲಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಮಂದಿ ಆಯ್ಕೆಯಾಗಿದ್ದಾರೆ. ದ.ಕ. ಕೊರಗರ ಜಿಲ್ಲಾ ಸಂಘದ ಅಧ್ಯಕ್ಷ ಮಂಗಳೂರಿನ ಮರಕಡದ ಎಂ. ಸುಂದರ, ಸಂಘಟನೆಯ ಸದಸ್ಯರಾದ

ದ.ಕ ಜಿಲ್ಲೆಯ ನಾಲ್ಕು ಮಂದಿಗೆ ಒಲಿದು ಬಂದ ರಾಷ್ಟ್ರಪತಿ ಭೇಟಿ ಅವಕಾಶ Read More »