May 2023

ಮಾಜಿ ಸಿಎಂ ಸಿದ್ದರಾಮಯ್ಯ ಓಟ್ ಮಾಡಿದ ಬಳಿಕ ಮಹತ್ವದ ಘೋಷಣೆ

ಸಮಗ್ರ ನ್ಯೂಸ್‌: ಬಹುನಿರೀಕ್ಷಿತ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ರಾಜ್ಯದ 224 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಇಂದು ಮತದಾನ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, 2615 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ವರುಣ ಕ್ಷೇತ್ರದ ತಮ್ಮ ಸ್ವಂತ ಊರು ಸಿದ್ದರಾಮನಹುಂಡಿಯಲ್ಲಿ ಮತದಾನ ಮಾಡಿದ್ದಾರೆ. ಬಳಿಕ […]

ಮಾಜಿ ಸಿಎಂ ಸಿದ್ದರಾಮಯ್ಯ ಓಟ್ ಮಾಡಿದ ಬಳಿಕ ಮಹತ್ವದ ಘೋಷಣೆ Read More »

ಕಡಬ: ಬಹಿರಂಗ ಪ್ರಚಾರ ಮುಗಿದರೂ ಬ್ಯಾನರ್ ಭರಾಟೆ

ಸಮಗ್ರ ನ್ಯೂಸ್: ಬಹಿರಂಗ ಪ್ರಚಾರಕ್ಕೆ ಮೇ.8ರಂದೇ ತೆರೆ ಬಿದ್ದರೂ ಹಲವು ಮತಗಟ್ಟೆಗಳ ಸುತ್ತಮುತ್ತ ಬ್ಯಾನರ್ ಗಳು ರಾರಾಜಿಸುತ್ತಿವೆ. ಕಡಬ ತಾಲೂಕಿನ ಹಲವು ಮತಗಟ್ಟೆಗಳ ಸುತ್ತಮುತ್ತ ವಿವಿಧ ಪಕ್ಷಗಳಿಂದ ಬ್ಯಾನರ್ ಅಳವಡಿಸಿ ಅಭ್ಯರ್ಥಿ ಪರ ಪ್ರಚಾರ ನಡೆಸಲಾಗುತ್ತಿತ್ತು. ಕೆಲವೆಡೆಗಳಲ್ಲಿ ವಿಚಕ್ಷಣ ದಳದವರು ಮತಕೇಂದ್ರಗಳಿಗೆ ತೆರಳಿ ಬ್ಯಾನರ್ ಗಳನ್ನು ತೆರವುಗೊಳಿಸಿದರು. ಕಡಬದ ಬೂತ್ ಸಂಖ್ಯೆ 90, 91 ರಲ್ಲಿ ಮತದಾರರು ಸಾಲುಗಟ್ಟಿ ನಿಂತಿದ್ದು, ಪಂಚಾಯತ್ ವತಿಯಿಂದ ನೀರಿನ ವ್ಯವಸ್ಥೆ ಮಾಡಲಾಗಿಲ್ಲ ಎಂಬ ಆರೋಪ ಕೇಳಿಬಂತು. ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ

ಕಡಬ: ಬಹಿರಂಗ ಪ್ರಚಾರ ಮುಗಿದರೂ ಬ್ಯಾನರ್ ಭರಾಟೆ Read More »

ರಾಜ್ಯ ವಿಧಾನಸಭಾ ಚುನಾವಣೆ| ಬಿರುಸಿನಿಂದ ನಡೆಯುತ್ತಿರುವ ಮತದಾನ

ಸಮಗ್ರ ನ್ಯೂಸ್: ಇಂದು ನಡೆಯುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ತಮ್ಮ ಹಕ್ಕು ಚಲಾಯಿಸಲು ಮತದಾರರು ಮತಗಟ್ಟೆಗಳ ಬಳಿ ಸಾಲುಗಟ್ಟಿ ನಿಂತಿದ್ದಾರೆ. ಬೆಳಿಗ್ಗೆಯಿಂದಲೇ ಮತದಾನ ಚುರುಕುಗೊಂಡಿದ್ದು, ಮತಗಟ್ಟೆಗಳ ಬಳಿ ಪಕ್ಷಗಳ ಕಾರ್ಯಕರ್ತರು ಕೊನೆ ಕ್ಷಣದ ಕಸರತ್ತಾಗಿ ಮತಯಾಚನೆಯಲ್ಲಿ ತೊಡಗಿದ್ದಾರೆ. ರಾಜ್ಯದಾದ್ಯಂತ ಮತದಾನ ಶಾಂತಿಯುತವಾಗಿ ಸಾಗಿದ್ದು, ಕೆಲವೆಡೆ ಪಕ್ಷಗಳ ಕಾರ್ಯಕರ್ತರ ನಡುವೆ ಸಣ್ಣ ಮಟ್ಟದಲ್ಲಿ ಮಾತಿನ ಚಕಮಕಿ ನಡೆದಿದೆ. ಮಧ್ಯಾಹ್ನದ ಬಳಿಕ ಮಳೆ ಬರಬಹುದೆಂಬ ಆತಂಕದ ಹಿನ್ನೆಲೆಯಲ್ಲಿ ಮತದಾರರು ಬೆಳಿಗ್ಗೆಯಿಂದಲೇ ಕ್ಯೂ ನಿಂತಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆ| ಬಿರುಸಿನಿಂದ ನಡೆಯುತ್ತಿರುವ ಮತದಾನ Read More »

ಇಂದು ಪ್ರಜಾಪ್ರಭುತ್ವದ ಹಬ್ಬ; ರಾಜ್ಯದೆಲ್ಲೆಡೆ ಮತದಾನ ಪ್ರಕ್ರಿಯೆ ಆರಂಭ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಇಂದು ಪ್ರಜಾಪ್ರಭುತ್ವದ ಹಬ್ಬ! ರಾಜ್ಯದ ಗದ್ದುಗೆಯ ಭವಿಷ್ಯ ನಿರ್ಧಾರಕ್ಕೆ ಪ್ರಜಾ ದೊರೆಗಳು ಮುಂದಾಗಿದ್ದು, ಬೆಳಗ್ಗೆ 7 ಗಂಟೆಗೆ ರಾಜ್ಯಾದ್ಯಂತ ಮತದಾನ ಆರಂಭವಾಗಿದೆ. ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಲು ಮತಗಟ್ಟೆಯ ಬಳಿ ಆಗಮಿಸುತ್ತಿದ್ದಾರೆ. ಈ ಬಾರಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಚುನಾವಣಾ ಆಯೋಗ ಸಾಕಷ್ಟು ಪ್ರಯತ್ನ ನಡೆಸಿದ್ದು, ಎಲ್ಲರು ತಪ್ಪದೇ ಮತದಾನ ಮಾಡುವಂತೆ ಕರೆ ಕೊಟ್ಟಿದೆ. ಸುಭದ್ರ ಕರ್ನಾಟಕಕ್ಕಾಗಿ ಮತದಾನ ಮಾಡುವುದು ನಮ್ಮ ಕರ್ತವ್ಯ ಕೂಡ ಆಗಿದೆ. ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ

ಇಂದು ಪ್ರಜಾಪ್ರಭುತ್ವದ ಹಬ್ಬ; ರಾಜ್ಯದೆಲ್ಲೆಡೆ ಮತದಾನ ಪ್ರಕ್ರಿಯೆ ಆರಂಭ Read More »

ಮತದಾರರನ್ನು ವಾಹನಗಳಲ್ಲಿ ಕರೆತಂದರೆ ನಿರ್ದಾಕ್ಷಿಣ್ಯ ಕ್ರಮ| ಜಿಲ್ಲಾಧಿಕಾರಿ ರವಿಕುಮಾರ್ ಖಡಕ್ ಎಚ್ಚರಿಕೆ

ಸಮಗ್ರ ನ್ಯೂಸ್: ನಾಳೆ ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣೆಯಲ್ಲಿ ಮತದಾನ ನಡೆಸುವ ಮತದಾರರನ್ನು ವಾಹನಗಳ ಮೂಲಕ ಕರೆ ತರಲು ಯಾವುದೇ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷದವರಿಗೆ ಅವಕಾಶವಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್ ರವಾನಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರನ್ನು ವಾಹನಗಳಲ್ಲಿ ಕರೆ ತರಲು ಅವಕಾಶವಿಲ್ಲ. ಯಾವುದೇ ಪಕ್ಷ, ಯಾವುದೇ ಅಭ್ಯರ್ಥಿಗಳಿಗೆ ಅವಕಾಶವಿಲ್ಲ. ಅಂತಹ ವಿಚಾರಗಳಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಯಾವುದೇ ಭಾಗದಿಂದ ನೇರವಾಗಿ ಕರೆ ತರಲು ಅವಕಾಶವಿಲ್ಲ

ಮತದಾರರನ್ನು ವಾಹನಗಳಲ್ಲಿ ಕರೆತಂದರೆ ನಿರ್ದಾಕ್ಷಿಣ್ಯ ಕ್ರಮ| ಜಿಲ್ಲಾಧಿಕಾರಿ ರವಿಕುಮಾರ್ ಖಡಕ್ ಎಚ್ಚರಿಕೆ Read More »

ನಮೀಬಿಯಾದಿಂದ ತಂದ ಮತ್ತೊಂದು ಚೀತಾ ದುರಂತ ಸಾವು| ಎರಡೇ ತಿಂಗಳಲ್ಲಿ ಮೂರನೇ ಸಾವು

ಸಮಗ್ರ ನ್ಯೂಸ್: ಮಧ್ಯಪ್ರದೇಶದ ಕುನೋ ಉದ್ಯಾನವನಕ್ಕೆ ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ತಂದಿದ್ದ ಇನ್ನೊಂದು ಹೆಣ್ಣು ಚೀತಾ ‘ದಕ್ಷಾ’ ಮಂಗಳವಾರ ಸಾವು ಕಂಡಿದೆ. ಗಂಡು ಚೀತಾದ ಆಕ್ರಮಣಕಾರಿ ಸಂಭೋಗದ ಕಾರಣದಿಂದಾಗಿ ಚೀತಾ ಸಾವು ಕಂಡಿದೆ ಎಂದು ಹೇಳಲಾಗಿದೆ. ಕುನೋದಲ್ಲಿ ಕಳೆದ ಎರಡು ತಿಂಗಳಲ್ಲಿ ಸಾವು ಕಂಡ ಮೂರನೇ ಆಫ್ರಿಕಾದ ಚೀತಾ ಇದಾಗಿದೆ.‌ ಕೆಲವು ವಾರಗಳ ಹಿಂದೆ, ಏಪ್ರಿಲ್‌ನಲ್ಲಿ, ದಕ್ಷಿಣ ಆಫ್ರಿಕಾದಿಂದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಗೊಂಡಿದ್ದ ಆರು ವರ್ಷದ ಗಂಡು ಚೀತಾ ಉದಯ್ ಹೃದಯಾಘಾತದಿಂದ ಸಾವು ಕಂಡಿತ್ತು. ಮಾರ್ಚ್‌

ನಮೀಬಿಯಾದಿಂದ ತಂದ ಮತ್ತೊಂದು ಚೀತಾ ದುರಂತ ಸಾವು| ಎರಡೇ ತಿಂಗಳಲ್ಲಿ ಮೂರನೇ ಸಾವು Read More »

ಮೊಬೈಲ್‌ನಲ್ಲಿ ಆ್ಯಪ್ ಬಳಸಿ ಮತಗಟ್ಟೆ ಹುಡುಕುವುದು ಹೇಗೆ?

ಸಮಗ್ರ ನ್ಯೂಸ್: ಮೇ 09, ರಾಜ್ಯಾದ್ಯಂತ ನಾಳೆ ಬೆಳಗ್ಗೆ 7ರಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, ಮತದಾರರು ತಮ್ಮ ಮತಗಟ್ಟೆ ವಿಳಾಸ ಎಲ್ಲಿದೆ ಎಂದು ಸುಲಭವಾಗಿ ಹುಡುಕಬಹುದು. ಮತದಾರರಿಗೆ ಅನುಕೂಲ ಆಗುವಂತೆ ಕೇಂದ್ರ ಚುನಾವಣಾ ಆಯೋಗದಿಂದ ಚುನಾವಣಾ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮತಗಟ್ಟೆಗೆ ಗೂಗಲ್ ಲೊಕೇಶನ್ ಆಧರಿಸಿ ಮತಗಟ್ಟೆ ತಲುಪಬಹುದು. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಕೇಂದ್ರಗಳಲ್ಲಿ ಸಣ್ಣ ಪುಟ್ಟ ಸ್ಥಳಗಳ ಬಗ್ಗೆ ಗೂಗಲ್‌ನಲ್ಲಿಯೂ ಮಾಹಿತಿ ಲಭ್ಯವಾಗದೆ ಮತ್ತು ಅಂತಹ ಸ್ಥಳಗಳನ್ನು ಗೂಗಲ್ ಮ್ಯಾಪ್ ಲಭ್ಯವಿರುವುದಿಲ್ಲ. ಅದಕ್ಕಾಗಿ,

ಮೊಬೈಲ್‌ನಲ್ಲಿ ಆ್ಯಪ್ ಬಳಸಿ ಮತಗಟ್ಟೆ ಹುಡುಕುವುದು ಹೇಗೆ? Read More »

ಬೆಳ್ತಂಗಡಿ: ದಲಿತ ಕಾಲೋನಿಗೆ ಹಣ ಹಂಚಲು ಹೋದ ಹರೀಶ್ ಪೂಂಜಾಗೆ ಘೇರಾವ್!?

ಸಮಗ್ರ ನ್ಯೂಸ್: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರು ಮನೆ ಮನೆ ಪ್ರಚಾರದ ವೇಳೆ ಹಣ ಹಂಚಿರುವ ಆರೋಪ ಕೇಳಿಬಂದಿದೆ. ಬೆಳ್ತಂಗಡಿಯಲ್ಲಿರುವ ಆಶೋಕ ನಗರದ ದಲಿತ ಕಾಲೋನಿಯೊಂದಕ್ಕೆ ಮತಯಾಚನೆಗೆ ಹೋದ ಸಂದರ್ಭ ಐದು ಲಕ್ಷ ರೂ. ಕೊಡುತ್ತೇನೆ ಎಂದು ಆಮಿಷವೊಡ್ಡಿರುವುದಾಗಿ ಹೇಳಲಾಗುತ್ತಿದೆ. ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರ ಮೇ 8 ರಂದು ಸಂಜೆ ಕೊನೆಯಾಗಿತ್ತು. ಈ ಹಿನ್ನಲೆಯಲ್ಲಿ ರಾತ್ರಿ ವೇಳೆ ಪೂಂಜ ಮತ್ತು ತಂಡದವರು ಮನೆ ಮನೆ ಪ್ರಚಾರ ಆರಂಭಿಸಿದ್ದರು. ದಲಿತ ಕಾಲೋನಿಯಲ್ಲಿ ನಿವಾಸಿಗಳಿಗೆಮನೆ

ಬೆಳ್ತಂಗಡಿ: ದಲಿತ ಕಾಲೋನಿಗೆ ಹಣ ಹಂಚಲು ಹೋದ ಹರೀಶ್ ಪೂಂಜಾಗೆ ಘೇರಾವ್!? Read More »

ತಮಿಳುನಾಡಿನ ನಾಲ್ಕು ಜಿಲ್ಲೆಗಳಿಗೆ ಎನ್‍ಐಎ ದಾಳಿ

ಸಮಗ್ರ ನ್ಯೂಸ್: ಮೇ 09ಮಂಗಳವಾರದಂದು ತಮಿಳುನಾಡಿನ ನಾಲ್ಕು ಜಿಲ್ಲೆಗಳಲ್ಲಿ ಎನ್ಐಎ ದಾಳಿ ನಡೆಸಿದ ವೇಳೆ ನಿಷೇಧಿತ ಭಯೋತ್ಪಾದಕ ಸಂಘಟನೆ ಪಿಎಫ್‍ಐ ಪ್ರಕರಣದ ವಿರುದ್ಧದ ತನಿಖೆಗೆ ಸಂಬಂಧಿಸಿದಂತೆ ಎನ್‍ಐಎ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರೈ, ಚೆನ್ನೈ, ದಿಂಡಿಗಲ್ ಮತ್ತು ಥೇಣಿ ಸೇರಿದಂತೆ ಆರು ಜಿಲ್ಲೆಗಳ ಪ್ರದೇಶಗಳಲ್ಲಿ ಕಾರ್ಯಚರಣೆ ನಡೆಯುತ್ತಿದೆ. ಈ ಪ್ರಕರಣ ಸೆ. 19 ರಂದು ದಾಖಲಾದಾಗಿನಿಂದ ಇಲ್ಲಿಯವರೆಗೆ 10 ಜನರನ್ನು ಈ ಪ್ರಕರಣದಲ್ಲಿ ಬಂಧಿಸಲಾಯಿತು. ಹಲವಾರು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು , ಆರೋಪಿಗಳು ಕೋಮು ಸೌಹರ‍್ದತೆಗೆ

ತಮಿಳುನಾಡಿನ ನಾಲ್ಕು ಜಿಲ್ಲೆಗಳಿಗೆ ಎನ್‍ಐಎ ದಾಳಿ Read More »

ಕಡಬ: ಮಕ್ಕಳಿಬ್ಬರು ನೀರಿನಲ್ಲಿ ಮುಳುಗಿ ಸಾವನಪ್ಪಿದ ಪ್ರಕರಣ| ಪೋಸ್ಟ್ ಮಾರ್ಟಮ್ ಗೆ ವ್ಯವಸ್ಥೆ ಮಾಡಿ ಸಹಕರಿಸಿದ ಅರುಣ್ ಕುಮಾರ್ ಪುತ್ತಿಲ

ಸಮಗ್ರ ನ್ಯೂಸ್: ಕಡಬ ತಾಲೂಕಿನ ಬಳ್ಪ ಸಮೀಪದ ಕೇನ್ಯ ಕಣ್ಕಲ್ ಎಂಬಲ್ಲಿ ಹೊಳೆಯಲ್ಲಿ ಸಹೋದರಿಯರಿಬ್ವರು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು, ಮೃತರ ಪೋಸ್ಟ್ ಮಾರ್ಟಂ ನಡೆಸಲು ನಿರಾಕರಿಸಿದ ವೇಳೆ ಅರುಣ್ ಕುಮಾರ್ ಪುತ್ತಿಲರು ಪೋಸ್ಟ್ ಮಾರ್ಟಮ್ ಗೆ ವ್ಯವಸ್ಥೆ ಮಾಡಿದ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಬಗ್ಗೆ ಶ್ರೀನಿಧಿ ಅಮ್ಮಣ್ಣಾಯ ಸೌತಡ್ಕ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, `ಪಂಜ ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರದ ಭಾಗ ಅಲ್ಲಿ ನಿನ್ನೆ ನನ್ನ ಅಣ್ಣನ ಮಕ್ಕಳಿಬ್ಬರು ನದಿ ನೀರಿನಲ್ಲಿ

ಕಡಬ: ಮಕ್ಕಳಿಬ್ಬರು ನೀರಿನಲ್ಲಿ ಮುಳುಗಿ ಸಾವನಪ್ಪಿದ ಪ್ರಕರಣ| ಪೋಸ್ಟ್ ಮಾರ್ಟಮ್ ಗೆ ವ್ಯವಸ್ಥೆ ಮಾಡಿ ಸಹಕರಿಸಿದ ಅರುಣ್ ಕುಮಾರ್ ಪುತ್ತಿಲ Read More »