May 2023

ಪತನಗೊಂಡ ವಿಮಾನದಿಂದ ಕಾಣೆಯಾದ ಮಕ್ಕಳಿಗಾಗಿ ಮುಂದುವರಿದ ಶೋಧ| ತಿಂಗಳು ಕಳೆದರೂ ನಾಲ್ಕು ಮಕ್ಕಳು ಬದುಕಿ ಸಿಗುವರೆಂಬ ನಿರೀಕ್ಷೆ

ಸಮಗ್ರ ನ್ಯೂಸ್: ಸುಮಾರು ಒಂದು ತಿಂಗಳ ಹಿಂದೆ ಕೊಲಂಬಿಯಾದ ಅಮೆಜಾನ್ ಕಾಡಿನಲ್ಲಿ ವಿಮಾನವೊಂದು ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ನಾಲ್ಕು ಮಕ್ಕಳ ಶವ ದೊರೆತಿರಲಿಲ್ಲ. ಅವರ ಜತೆ 11 ತಿಂಗಳ ಮಗು ಕೂಡ ಇತ್ತು ಎನ್ನಲಾಗಿದೆ. ಅರ್ಧ ತಿಂದಿರುವ ಹಣ್ಣು, ಮಗುವಿನ ಡೈಪರ್, ಒಂದು ಜತೆ ಶೂ ಪತ್ತೆಯಾಗಿದೆ. ಹಾಗಾಗಿ ಒಂದು ತಿಂಗಳಾದರೂ ಮಕ್ಕಳು ಬದುಕಿರಬಹುದು ಎನ್ನುವ ಭರವಸೆ ಒಂದೆಡೆ ಇದೆ. ಒಂದೊಮ್ಮೆ ಮೃತಪಟ್ಟಿದ್ದರೆ ಶ್ವಾನಗಳು ಅವರನ್ನು ಪತ್ತೆಹಚ್ಚುತ್ತವೆ. ಮೇ 1 ರಂದು ಕೊಲಂಬಿಯಾದ ಆಗ್ನೇಯದಲ್ಲಿ […]

ಪತನಗೊಂಡ ವಿಮಾನದಿಂದ ಕಾಣೆಯಾದ ಮಕ್ಕಳಿಗಾಗಿ ಮುಂದುವರಿದ ಶೋಧ| ತಿಂಗಳು ಕಳೆದರೂ ನಾಲ್ಕು ಮಕ್ಕಳು ಬದುಕಿ ಸಿಗುವರೆಂಬ ನಿರೀಕ್ಷೆ Read More »

ಬಳಕೆದಾರರೇ ಗಮನಿಸಿ| ಗ್ಯಾರಂಟಿ ನಂಬಿ ಬಿಲ್ ಕಟ್ಟದಿದ್ರೆ ಕನೆಕ್ಷನ್ ಕಟ್ ಆಗುತ್ತೆ!!

ಸಮಗ್ರ ನ್ಯೂಸ್: ಕರೆಂಟ್ ಬಿಲ್ ಕಟ್ಟದ ಜನತೆಗೆ ಇಂಧನ ಇಲಾಖೆ ಶಾಕ್ ನೀಡಿದ್ದು, ಕರೆಂಟ್ ಬಿಲ್ ಕಟ್ಟದಿದ್ದರೆ ಕನೆಕ್ಷನ್ ಕಟ್ ಮಾಡುವಂತೆ ಎಲ್ಲಾ ಎಸ್ಕಾಂಗಳಿಗೆ ಖಡಕ್ ಸೂಚನೆ ನೀಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಗೃಹಜ್ಯೋತಿ ಗ್ಯಾರಂಟಿ ಯೋಜನೆ ಇನ್ನೂ ಜಾರಿಯಾಗಿಲ್ಲ. ಆದರೆ ಜನರು ಕರೆಂಟ್ ಬಿಲ್ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಧನ ಇಲಾಖೆ ಕರೆಂಟ್ ಬಿಲ್ ಕಟ್ಟದಿದ್ದರೆ ಕನೆಕ್ಷನ್ ಕಟ್ ಮಾಡುವಂತೆ ರಾಜ್ಯದ ಎಲ್ಲಾ ಎಸ್ಕಾಂಗಳಿಗೆ ಸೂಚನೆ ನೀಡಿದೆ. ಜನರು ಬಾಕಿ ಇರುವ,

ಬಳಕೆದಾರರೇ ಗಮನಿಸಿ| ಗ್ಯಾರಂಟಿ ನಂಬಿ ಬಿಲ್ ಕಟ್ಟದಿದ್ರೆ ಕನೆಕ್ಷನ್ ಕಟ್ ಆಗುತ್ತೆ!! Read More »

ರಾಜ್ಯದಲ್ಲಿ ಪೂರ್ವಮುಂಗಾರು ಅಬ್ಬರ; ಸಿಡಿಲಿಗೆ ನಾಲ್ವರು ಬಲಿ| ಮುಂದಿನ ಮೂರು ದಿನ ಭಾರೀ‌ ಮಳೆ‌ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರಿಗೂ ಮುನ್ನವೇ ವರುಣನ ಅಬ್ಬರ ಜೋರಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಇನ್ನೂ 3 ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಚಾಮರಾಜನಗರ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ರಾಮನಗರ ಜಿಲ್ಲೆಗಳಲ್ಲಿ ಜೂನ್ 2ರವರೆಗೂ ಅಧಿಕ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೇ.

ರಾಜ್ಯದಲ್ಲಿ ಪೂರ್ವಮುಂಗಾರು ಅಬ್ಬರ; ಸಿಡಿಲಿಗೆ ನಾಲ್ವರು ಬಲಿ| ಮುಂದಿನ ಮೂರು ದಿನ ಭಾರೀ‌ ಮಳೆ‌ ಸಾಧ್ಯತೆ Read More »

ಮಣಿಪುರದಲ್ಲಿ ಮುಂದುವರಿದ ಹಿಂಸಾಚಾರ| ಕಳೆದ‌ 24 ಗಂಟೆಗಳಲ್ಲಿ 10 ಮಂದಿ ಬಲಿ

ಸಮಗ್ರ ನ್ಯೂಸ್: ಮಣಿಪುರದಲ್ಲಿ ಮತ್ತೆ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಕಳೆದ 24 ಗಂಟೆಗಳಲ್ಲಿ ಕನಿಷ್ಠ 10 ಮಂದಿ ಬಲಿಯಾಗಿದ್ದಾರೆ. ಹಿಂಸಾಚಾರದ ಬೆನ್ನಲ್ಲೇ ಸೇನಾ ತುಕಡಿಗಳ ಮೇಲೆ ಪದೇ ಪದೇ ದಾಳಿ ನಡೆಯುತ್ತಿರುವ ಜಿಲ್ಲೆಗಳಲ್ಲಿ ಗುಂಡು ನಿರೋಧಕ ವಾಹನಗಳಲ್ಲಿ ಸೇನೆ, ಕ್ಷೇತ್ರ ಪ್ರಾಬಲ್ಯ ಕಾರ್ಯಾಚರಣೇ ನಡೆಸಿದೆ. ಮೇ 3 ರಿಂದ ನಡೆಯುತ್ತಿರುವ ಹಿಂಸಾಕೃತ್ಯಗಳ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಭೇಟಿ ನೀಡುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಭೇಟಿಯ ಮುನ್ನಾದಿನ ಮೀಟಿ ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬರು ಇಂಫಾಲ ಪೂರ್ವ

ಮಣಿಪುರದಲ್ಲಿ ಮುಂದುವರಿದ ಹಿಂಸಾಚಾರ| ಕಳೆದ‌ 24 ಗಂಟೆಗಳಲ್ಲಿ 10 ಮಂದಿ ಬಲಿ Read More »

ಸಿದ್ದಾಪುರ: ಕೋಳಿ ಗೂಡಿನೊಳಗೆ ನುಗ್ಗಿದ್ದ ನಾಗರಹಾವು ಸೆರೆ

ಸಮಗ್ರ ನ್ಯೂಸ್: ಕೋಳಿಗೂಡಿನೊಳಗೆ ನುಗ್ಗಿದ್ದ ನಾಗರಹಾವನ್ನು ಸೆರೆಹಿಡಿದು ರಕ್ಷಿಸಿದ ಘಟನೆ ಸಿದ್ದಾಪುರ ಗ್ರಾಮದ ಬೀಟಿಕಾಡು ಎಸ್ಟೇಟ್ ನಲ್ಲಿ ನಡೆದಿದೆ. ಇಲ್ಲಿನ ಶರತ್ ಕುಮಾರ್ ಅವರ ಮನೆಯ ಕೋಳಿ ಗೂಡಿನೊಳಗೆ ಹಾವು ಇರುವುದು ಕಂಡು ಬಂದಿದ್ದು, ತಕ್ಷಣ ಗುಹ್ಯ ಗ್ರಾಮದ ಉರಗ ಪ್ರೇಮಿ ಸುರೇಶ್ ಪೂಜಾರಿಯವರಿಗೆ ಮಾಹಿತಿ ನೀಡಲಾಯಿತು. ಸುರೇಶ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಕೋಳಿಗೂಡಿನ ಒಳಗೆ ಬೃಹತ್ ಗಾತ್ರದ ನಾಗರಹಾವು ನಾಲ್ಕು ಮೊಟ್ಟೆಯನ್ನು ನುಂಗಿ ಮಲಗಿರುವ ದೃಶ್ಯ ಕಂಡುಬಂದಿದ್ದು ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಹಾವನ್ನು ಹಿಡಿಯಲಾಯಿತು.

ಸಿದ್ದಾಪುರ: ಕೋಳಿ ಗೂಡಿನೊಳಗೆ ನುಗ್ಗಿದ್ದ ನಾಗರಹಾವು ಸೆರೆ Read More »

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಮೇಜರ್ ಸರ್ಜರಿ| ಮೂರು ಲಕ್ಷಕ್ಕೂ ಅಧಿಕ ಅನರ್ಹ ಪಡಿತರ ಕಾರ್ಡ್ ಗಳು ರದ್ದು

ಸಮಗ್ರ ನ್ಯೂಸ್: ಸುಳ್ಳು ಮಾಹಿತಿ ನೀಡಿ ಪಡಿತರ ಚೀಟಿ ಪಡೆದವರಿಗೆ ಆಹಾರ ಇಲಾಖೆ ಬಿಗ್ ಶಾಕ್ ನೀಡಿದೆ. ನಿಯಮ ಉಲ್ಲಂಘಿಸಿ ರಾಜ್ಯಾದ್ಯಂತ ಆರ್ಥಿಕ ಸಬಲರು ಪಡೆದಿದ್ದ, ಮೂರು ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ. ಆಹಾರ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯಾದ್ಯಂತ 3,30,002 ರೇಷನ್ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ. ಇದರಲ್ಲಿ 21,679 ಅಂತ್ಯೋದಯ ಮತ್ತು 3,08,345 ಬಿಪಿಎಲ್ ಕಾರ್ಡ್ ಗಳಿವೆ. ಕೆಲ ಕಾರ್ಡ್ ಗಳನ್ನು ಎಪಿಎಲ್ ಗೂ ಪರಿವರ್ತಿಸಲಾಗಿದೆ. ಬೆಂಗಳೂರಿನಲ್ಲಿ 34,705, ವಿಜಯಪುರದಲ್ಲಿ 28, 735,

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಮೇಜರ್ ಸರ್ಜರಿ| ಮೂರು ಲಕ್ಷಕ್ಕೂ ಅಧಿಕ ಅನರ್ಹ ಪಡಿತರ ಕಾರ್ಡ್ ಗಳು ರದ್ದು Read More »

ಧರೆಗುರುಳಿದ ಸಪ್ತರ್ಷಿಗಳು!! ಭೀಕರ ಗಾಳಿ ಮಳೆಗೆ ಭಾರೀ ಅನಾಹುತ; ಇಬ್ಬರ ಸಾವು

ಸಮಗ್ರ ನ್ಯೂಸ್: ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿರುವ ಮಹಾಕಾಲ್ ಲೋಕ ಕಾರಿಡಾರ್ ಭಾನುವಾರ ಮಧ್ಯಾಹ್ನ ಬೀಸಿದ ಬಿರುಗಾಳಿಯಿಂದ ಸಪ್ತಋಷಿಗಳ ಪ್ರತಿಮೆಗಳಿಗೆ ಹಾನಿಯಾಗಿದೆ. ಏಳು ಪ್ರತಿಮೆಗಳಲ್ಲಿ ಆರು ಸ್ಥಳಾಂತರಗೊಂಡಿವೆ ಮತ್ತು ಎರಡು ಹಾನಿಗೊಳಗಾಗಿವೆ. ಇದರ ಜೊತೆಗೆ ಬಿರುಗಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಬಿರುಗಾಳಿಯಿಂದ ಪ್ರತಿಮೆಗಳಲ್ಲಿ ಕೆಲವು ನೆಲಕ್ಕೆ ಉರುಳಿದ್ದರಿಂದ ಕೈಗಳು ಮತ್ತು ತಲೆಗಳು ಮುರಿದಿವೆ. 2022 ರ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ ಮಹಾಕಾಲ್ ಲೋಕ ದೇವಾಲಯದ ಕಾರಿಡಾರ್‌ನಲ್ಲಿ ಘಟನೆ ಸಂಭವಿಸಿದೆ. ದೇವಾಲಯದ ಕಾರಿಡಾರ್‌ನಲ್ಲಿ ಆರು ಪ್ರತಿಮೆಗಳನ್ನು

ಧರೆಗುರುಳಿದ ಸಪ್ತರ್ಷಿಗಳು!! ಭೀಕರ ಗಾಳಿ ಮಳೆಗೆ ಭಾರೀ ಅನಾಹುತ; ಇಬ್ಬರ ಸಾವು Read More »

ಐಪಿಎಲ್ -2023| ಐದನೇ ಬಾರಿ ಚಾಂಪಿಯನ್ ಪಟ್ಟ‌ ಮುಡಿಗೇರಿಸಿಕೊಂಡ ಚೆನ್ನೈ ಸೂಪರ್ ಕಿಂಗ್ಸ್

ಸಮಗ್ರ ನ್ಯೂಸ್: ಐಪಿಎಲ್-2023ರ ರೋಚಕ ಫೈನಲ್ ಹಣಾಹಣಿಯಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಅಮೋಘ ಗೆಲುವು ಪಡೆಯುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ ಫೈನಲ್ ಪಂದ್ಯದಲ್ಲಿ ಕೊನೆಯ ಎರಡು ಎಸೆತಗಳಲ್ಲಿ 10 ರನ್’ಗಳ ಅವಶ್ಯಕತೆ ಇದ್ದಾಗ ಸಿಕ್ಸರ್ ಮತ್ತು ಬೌಂಡರಿ ಸಿಡಿಸುವ ಮೂಲಕ ರವೀಂದ್ರ ಜಡೇಜಾ ಸಿಎಸ್’ಕೆ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ ನಿಗದಿತ 20 ಓವರ್’ಗಳಲ್ಲಿ

ಐಪಿಎಲ್ -2023| ಐದನೇ ಬಾರಿ ಚಾಂಪಿಯನ್ ಪಟ್ಟ‌ ಮುಡಿಗೇರಿಸಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ Read More »

ಬಟ್ಟೆ ಮೇಲಿನ ಕಲೆಯನ್ನು ನಿಮಿಷಗಳಲ್ಲೇ ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

ಸಮಗ್ರ ನ್ಯೂಸ್: ಸಾಮಾನ್ಯವಾಗಿ ಏನಾದ್ರು ಕೆಲಸ ಮಾಡುವಾಗ ಬಟ್ಟೆಯಲ್ಲಿ ಕಲೆಗಳಾಗುವುದು ಸಾಮಾನ್ಯ. ಅವುಗಳನ್ನು ತೆಗೆಯೋದು ಹೇಗೆ ಎನ್ನುವುದೇ ಚಿಂತೆಯಾಗಿ ಹೋಗಿರುತ್ತದೆ. ಆದರೆ ಈ ಟಿಪ್ಸ್ ಮೂಲಕ ಸುಲಭವಾಗಿ ಬಟ್ಟೆಯಲ್ಲಾದ ಕಲೆಯನ್ನು ರಿಮೂವ್ ಮಾಡಬಹುದು. ನಿಂಬೆ-ಉಪ್ಪಿನ ಬಳಕೆ : ಹೆಚ್ಚಾಗಿ ಎಣ್ಣೆ ಮತ್ತು ಜಿಡ್ಡಿನ ಕಲೆಗಳನ್ನು ಸುಲಭವಾಗಿ ತೆಗೆಯಲು ನಿಂಬೆ ಮತ್ತು ಉಪ್ಪು ಸಹಾಯಕವಾಗಿದೆ. ಇದಕ್ಕಾಗಿ ನಿಂಬೆಹಣ್ಣನ್ನು ಕತ್ತರಿಸಿ ಅದಕ್ಕೆ ಉಪ್ಪು ಹಾಕಿ ಬಟ್ಟೆಯಲ್ಲಿನ ಕಲೆಯ ಮೇಲೆ ಉಜ್ಜುವುದು ಕಲೆಗಳನ್ನು ತೆಗೆದು ಹಾಕಲು ಸಹಾಯಕವಾಗುತ್ತದೆ. ಮೊಸರಿನ ಬಳಕೆ :ಬಟ್ಟೆಯ

ಬಟ್ಟೆ ಮೇಲಿನ ಕಲೆಯನ್ನು ನಿಮಿಷಗಳಲ್ಲೇ ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಟಿಪ್ಸ್ Read More »

ಮಂಗಳೂರು: ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ | ಪ್ರಾಕೃತಿಕ ವಿಕೋಪಗಳಿಂದಾಗುವ ಹಾನಿಗಳ ತಡೆಗೆ ಯತ್ನಿಸಲು ಸ್ವೀಕರ್ ಯು.ಟಿ. ಖಾದರ್ ಸೂಚನೆ

ಸಮಗ್ರನ್ಯೂಸ್: ರಾಜ್ಯ ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್‌ ಮೇ.29 ರಂದು ಮಂಗಳೂರಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಿದ್ದಾರೆ. ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಪೂರ್ವ ಸಿದ್ಧತೆಯೊಂದಿಗೆ ಕಾರ್ಯನಿರ್ವಹಿಸಲು ಜಿಲ್ಲೆಯ ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ, ತುರ್ತು ಸಂದರ್ಭದಲ್ಲಿ ಜನರಿಗೆ ನೆರವು ನೀಡಲು ಕಟ್ರೋಲ್ ರೂಂ ಆರಂಭಿಸಲು ಜಿಲ್ಲಾಡಳಿತ, ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸೂಚನೆ ನೀಡಿರುವುದಾಗಿ ಯು.ಟಿ.ಖಾದರ್ ತಿಳಿಸಿದ್ದಾರೆ. ಪ್ರಾಕೃತಿಕ ವಿಕೋಪ, ಮಳೆ ಹಾನಿಗೆ ಸಂಬಂಧಿಸಿದಂತೆ ತುರ್ತು ನೆರವು ನೀಡಲು ಜಿಲ್ಲೆಗೆ ರೂ.3.5ಕೋಟಿ ನಿಧಿ

ಮಂಗಳೂರು: ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ | ಪ್ರಾಕೃತಿಕ ವಿಕೋಪಗಳಿಂದಾಗುವ ಹಾನಿಗಳ ತಡೆಗೆ ಯತ್ನಿಸಲು ಸ್ವೀಕರ್ ಯು.ಟಿ. ಖಾದರ್ ಸೂಚನೆ Read More »