May 2023

ಮೋಡಿ ಮಾಡದ ಮೋದಿ ರೋಡ್ ಶೋ ಪ್ರಚಾರ| ಮೋದಿಯ‌ನ್ನು ನೋಡಿದ್ದಷ್ಟೇ ಓಟು ಹಾಕಿಲ್ಲ!!

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕಳೆದ ಮೂರೂವರೆ ವರ್ಷಗಳಿಂದ ಆಡಳಿತ ನಡೆಸಿದ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಇದ್ದುದು ಚುನಾವಣಾ ಫಲಿತಾಂಶದ ಮೂಲಕ ಸ್ಪಷ್ಟವಾಗಿದೆ. ಜನರ ಅಸಮಾಧಾನದ ಮುಂದೆ ಪ್ರಧಾನಿ ನರೇಂದ್ರ ಮೋದಿ ಎಷ್ಟೇ ಮೋಡಿ ಮಾಡಿದರೂ ಅದು ಮತದಾನರ ಮುಂದೆ ಕಮಾಲ್ ಮಾಡಲು ಸಾಧ್ಯವಾಗಿಲ್ಲ ಎಂಬುದು ನಿಜವಾಗುತ್ತಿದೆ. ಪ್ರಧಾನಿ ಮೋದಿ ಅವರು ಚುನಾವಣೆಗೆ ಇನ್ನೂ ಮೂರು ವಾರ ಬಾಕಿ ಇರುವಾಗಲೇ ರಾಜ್ಯ ಪ್ರವಾಸ ಆರಂಭಿಸಿದರು. ಹಿಂದೆಲ್ಲಾ ಪ್ರಧಾನಿಯಾದವರು ಕೇವಲ ಒಂದು ಅಥವಾ ಹೆಚ್ಚೆಂದರೆ ಎರಡು ಬಾರಿ ಬೆಂಗಳೂರಿಗೆ […]

ಮೋಡಿ ಮಾಡದ ಮೋದಿ ರೋಡ್ ಶೋ ಪ್ರಚಾರ| ಮೋದಿಯ‌ನ್ನು ನೋಡಿದ್ದಷ್ಟೇ ಓಟು ಹಾಕಿಲ್ಲ!! Read More »

‘ಬಿಜೆಪಿ ಸೋಲಿನ ಹೊಣೆ ಹೊತ್ತುಕೊಳ್ಳುತ್ತೇನೆ’- ಕಟೀಲ್

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿದ್ದು ಇದರ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ಮತದಾರರಿಗೆ ಧನ್ಯವಾದ ತಿಳಿಸುತ್ತ ಒಳ್ಳೆಯಕಾರ್ಯಗಳಿಗೆ ಸಹಕಾರ ನೀಡುತ್ತ, ವಿರೋಧ ಪಕ್ಷವಾಗಿ ಜವಬ್ದಾರಿಯುತ ಕಾರ್ಯ ನಿರ್ವಹಿಸುತ್ತೇವೆ. ಹಾಗೇ ಬಿಜೆಪಿಯ ಸೋಲಿನ ಹೊಣೆ ನನ್ನದು, ಮುಂಬರುವ ಎಂಪಿ ಚುನಾವಣೆಯತ್ತ ಗಮನ ಹರಿಸಿ ಗೆಲ್ಲುತ್ತೇನೆ. ಈ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.

‘ಬಿಜೆಪಿ ಸೋಲಿನ ಹೊಣೆ ಹೊತ್ತುಕೊಳ್ಳುತ್ತೇನೆ’- ಕಟೀಲ್ Read More »

ಹೊಸ ಇತಿಹಾಸ ದಾಖಲಿಸಿದ ಸುಳ್ಯ| ಕರ್ನಾಟಕದ ವಿಧಾನಸಭೆಗೆ ಸುಳ್ಯದ ದ್ರೌಪದಿ ಮುರ್ಮು ಭಾಗೀರಥಿ ಮುರುಳ್ಯ ಭರ್ಜರಿ ಎಂಟ್ರಿ| ಸಾಮಾನ್ಯ ಕಾರ್ಯಕರ್ತೆಯನ್ನು ಶಾಸಕಿಯನ್ನಾಗಿಸಿದ ಸುಳ್ಯದ ಜನತೆ

ಸಮಗ್ರ ನ್ಯೂಸ್: ವೃತ್ತಿಯಲ್ಲಿ ಟೈಲರಿಂಗ್, ಹೈನುಗಾರಿಕೆ, ಗೌರವ ಶಿಕ್ಷಕಿಯಾಗಿ ಕೆಲಸ ಮಾಡಿ, ಪ್ರಸ್ತುತ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯದಿಂದ ಸ್ಪರ್ಧಿಸಿ ಸುಮಾರು 35 ವರ್ಷಗಳ ನಂತರ ಇಂದು ಸುಳ್ಯ ಮೀಸಲು ಕ್ಷೇತ್ರದ ನೂತನ ಶಾಸಕಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ಆಯ್ಕೆಯಾಗಿದ್ದಾರೆ. ಸತತವಾಗಿ 35 ವರ್ಷಗಳಿಂದ ಬಿಜೆಪಿಯ ಹಿಡಿತದಲ್ಲಿರುವ ಸುಳ್ಯ ಮೀಸಲು ಕ್ಷೇತ್ರದಲ್ಲಿ ಈ ಸಲ ಎಸ್.ಅಂಗಾರ ಅವರನ್ನು ಬದಲಾವಣೆ ಮಾಡಿ ಹೊಸ ಮುಖಕ್ಕೆ ಟಿಕೆಟ್‌ ನೀಡಿದ್ದು,

ಹೊಸ ಇತಿಹಾಸ ದಾಖಲಿಸಿದ ಸುಳ್ಯ| ಕರ್ನಾಟಕದ ವಿಧಾನಸಭೆಗೆ ಸುಳ್ಯದ ದ್ರೌಪದಿ ಮುರ್ಮು ಭಾಗೀರಥಿ ಮುರುಳ್ಯ ಭರ್ಜರಿ ಎಂಟ್ರಿ| ಸಾಮಾನ್ಯ ಕಾರ್ಯಕರ್ತೆಯನ್ನು ಶಾಸಕಿಯನ್ನಾಗಿಸಿದ ಸುಳ್ಯದ ಜನತೆ Read More »

ಪುತ್ತೂರಲ್ಲಿ ಪ್ರಯಾಸದ ಗೆಲುವು ಕಂಡ ಅಶೋಕ್ ರೈ| ಕೊನೆವರೆಗೂ ಹೋರಾಡಿ ಸೋಲು ಕಂಡ ಪುತ್ತಿಲ| ಮಕಾಡೆ ಮಲಗಿದ ಬಿಜೆಪಿ

ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದ್ದು, ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್‍ ರೈ ಮತ್ತು ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ನಡುವೆ ಹಾವು ಏಣಿ ಆಟ ನಡೆಯುತ್ತಿತ್ತು. ಇದೀಗ ಮತ ಎಣಿಕೆ ಪೂರ್ಣಗೊಂಡಿದ್ದು ಪುತ್ತೂರು ಕ್ಷೇತ್ರದಿಂದ ಕಾಂಗ್ರೇಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ವಿಜಯಶಾಲಿಯಾಗಿದ್ದಾರೆ. ಇನ್ನು ಬಿಜೆಪಿಯ ಆಶಾ ತಿಮ್ಮಪ್ಪ 31000 ಗಳಷ್ಟು ಮತ ಪಡೆಯಲು ಶಕ್ತರಾದರು. ಅಶೋಕ್ ರೈ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ವಿರುದ್ಧ ಪ್ರಯಾಸದ ಗೆಲುವು

ಪುತ್ತೂರಲ್ಲಿ ಪ್ರಯಾಸದ ಗೆಲುವು ಕಂಡ ಅಶೋಕ್ ರೈ| ಕೊನೆವರೆಗೂ ಹೋರಾಡಿ ಸೋಲು ಕಂಡ ಪುತ್ತಿಲ| ಮಕಾಡೆ ಮಲಗಿದ ಬಿಜೆಪಿ Read More »

Breaking:ಡಾ.ಸುಧಾಕರ್ ಗೆ ಸೋಲುಣಿಸಿದ ಪ್ರದೀಪ್ ಈಶ್ವರ್

ಸಮಗ್ರ ನ್ಯೂಸ್: ಮೇ 10ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರ ಭಾರೀ ಕುತೂಹಲ ಮೂಡಿಸಿತ್ತು. ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಹೋದ ನಂತರ ಆರೋಗ್ಯ ಸಚಿವರಾಗಿ ಗಮನ ಸೆಳೆದಿದ್ದ ಸುಧಾಕರ್ ಗೆಲುವು ನಿಶ್ಚಿತ ಎಂದೇ ಹೇಳಲಾಗುತ್ತಿತ್ತು. ಆದರೆ ಸುಧಾಕರ್ ಅವರ ದೌರ್ಜನ್ಯ ಹಾಗೂ ಬಿಜೆಪಿಯ ದುರಾಡಳಿತದಿಂದ ಬೇಸತ್ತ ಜನರು ಈ ಬಾರಿ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಆಯ್ಕೆಯ ಗೊಂದಲದಲ್ಲಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಟಿಕೆಟ್ ಸಿಕ್ಕರೂ ಅತ್ಯಲ್ವ ಅವಧಿಯಲ್ಲಿ ಜನರ ಮನಸ್ಸನ್ನು

Breaking:ಡಾ.ಸುಧಾಕರ್ ಗೆ ಸೋಲುಣಿಸಿದ ಪ್ರದೀಪ್ ಈಶ್ವರ್ Read More »

ಕೊಡಗಿನ ಎರಡೂ ಕ್ಷೇತ್ರಗಳು ಕೈ ಪಾಲು| ಕೆ.ಜಿ ಬೋಪಯ್ಯ, ಅಪ್ಪಚ್ಚು ರಂಜನ್ ಸೋಲು

ಸಮಗ್ರ ನ್ಯೂಸ್: ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮಡಿಕೇರಿಯಲ್ಲಿ ಡಾ. ಮಂಥರ್ ಗೌಡ ಹಾಗೂ ವಿರಾಜಪೇಟೆಯಲ್ಲಿ ಎನ್.ಸಿ ಪೊನ್ನಣ್ಣ ಗೆಲುವು ಕಂಡಿದ್ದಾರೆ. ಬಿಜೆಪಿಯ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ ಭೋಪಯ್ಯ ಸೋಲು ಕಂಡಿದ್ದಾರೆ.

ಕೊಡಗಿನ ಎರಡೂ ಕ್ಷೇತ್ರಗಳು ಕೈ ಪಾಲು| ಕೆ.ಜಿ ಬೋಪಯ್ಯ, ಅಪ್ಪಚ್ಚು ರಂಜನ್ ಸೋಲು Read More »

ಬೆಳ್ತಂಗಡಿ: ಶ್ರಮಿಕ ಹರೀಶ್ ಪೂಂಜಾ ಮತ್ತೆ ಶಾಸಕ

ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣೆಯು ಮೇ.10ರಂದು ನಡೆದಿದ್ದು, ಮತ ಎಣಿಕೆಯು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್‌ ಪೂಂಜಾ ಮತ್ತು ಕಾಂಗ್ರೇಸ್‌ ಅಭ್ಯರ್ಥಿ ರಕ್ಷಿತ್‌ ಶಿವರಾಮ್‌ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು,, ಬಿಜೆಪಿ ಅಭ್ಯರ್ಥಿ ಹರೀಶ್‌ ಪೂಂಜಾ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಬೆಳ್ತಂಗಡಿ: ಶ್ರಮಿಕ ಹರೀಶ್ ಪೂಂಜಾ ಮತ್ತೆ ಶಾಸಕ Read More »

ಸುಳ್ಯದಲ್ಲಿ ಬಿಜೆಪಿ ಭದ್ರ| ಭಾಗೀರಥಿ ಮುರುಳ್ಯ ಭರ್ಜರಿ ಗೆಲುವು

ಸಮಗ್ರ ನ್ಯೂಸ್: ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ‌ಭಾಗೀರಥಿ ಮುರುಳ್ಯ ಭರ್ಜರಿ ಗೆಲುವು ಕಂಡಿದ್ದಾರೆ. ಕಾಂಗ್ರೆಸ್ ನ ಜಿ.ಕೃಷ್ಣಪ್ಪ ವಿರುದ್ದ ಗೆಲುವಿನ ನಗೆ ಬೀರಿದ್ದಾರೆ.

ಸುಳ್ಯದಲ್ಲಿ ಬಿಜೆಪಿ ಭದ್ರ| ಭಾಗೀರಥಿ ಮುರುಳ್ಯ ಭರ್ಜರಿ ಗೆಲುವು Read More »

ಸಾರಿಗೆ ಸಚಿವ ಶ್ರೀರಾಮುಲುಗೆ ಭಾರೀ ಮುಖಭಂಗ| 26 ಸಾವಿರ ಮತಗಳಿಂದ ಸೋಲು

ಸಮಗ್ರ ನ್ಯೂಸ್: ಬಿಜೆಪಿಯ ಅಭ್ಯರ್ಥಿ ಹಾಲಿ ಸಚಿವ ಬಿ. ಶ್ರೀ ರಾಮುಲು ತೀವ್ರ ಮುಖಭಂಗವನ್ನು ಅನುಭವಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಮೂರು ಬಾರಿ ಶಾಸಕರಾಗಿದ್ದ ಬಿ.ನಾಗೇಂದ್ರ ವಿರುದ್ಧ 26 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ. ಕಳೆದ ಬಾರಿ ಮೊಳಕಾಲ್ಮೂರು, ಬಾದಾಮಿ ಎರಡೂ ಕಡೆ ನಿಂತು ಮೊಳಕಾಲ್ಮೂರಿನಲ್ಲಿ ಜಯ ಸಾಧಿಸಿದ್ದ ಬಿಜೆಪಿಯ ನಾಯಕ ಬಿ. ಶ್ರೀರಾಮುಲು ಈ ಬಾರಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಮುಗ್ಗರಿಸಿದ್ದಾರೆ.

ಸಾರಿಗೆ ಸಚಿವ ಶ್ರೀರಾಮುಲುಗೆ ಭಾರೀ ಮುಖಭಂಗ| 26 ಸಾವಿರ ಮತಗಳಿಂದ ಸೋಲು Read More »

ಸುಳ್ಯ: ಬಿಜೆಪಿಯ ಭಾಗೀರಥಿ ಭಾರೀ ಮುನ್ನಡೆ

ಸಮಗ್ರ ನ್ಯೂಸ್: ಮತ ಎಣಿಕೆ ಕಾರ್ಯ ಮುಂದುವರಿಯುತ್ತಿದ್ದಂತೆ ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ‌ ಅಭ್ಯರ್ಥಿ ಭಾಗೀರಥಿ ಮುರುಳ್ಯ ಮುನ್ನಡೆ ಕಾಯ್ದುಕೊಂಡಿದ್ದಾರೆ. 8 ಸುತ್ತು ಕೊನೆಗೊಂಡಾಗ ಭಾಗೀರಥಿ ಮುರುಳ್ಯ 11,974 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಭಾಗೀರಥಿಗೆ 39,712 ಮತ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ 27,738 ಮತ ಪಡೆದಿದ್ದಾರೆ. 7ನೇ ಸುತ್ತಿನಲ್ಲಿ ಬಿಜೆಪಿಗೆ 5712 ಮತ ಹಾಗೂ ಕಾಂಗ್ರೆಸ್‌ಗೆ 3816 ಮತ ದೊರಕಿದೆ.8ನೇ ಸುತ್ತಿನಲ್ಲಿ ಭಾಗೀರಥಿ ಮುರುಳ್ಯ 5955 ಮತ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ 3295 ಮತ ಪಡೆದಿದ್ದಾರೆ.

ಸುಳ್ಯ: ಬಿಜೆಪಿಯ ಭಾಗೀರಥಿ ಭಾರೀ ಮುನ್ನಡೆ Read More »