May 2023

ಪಾಕ್ ಪರ ಸ್ಟೇಟಸ್ – ಯುವಕನ ಬಂಧನ

ಸಮಗ್ರ ನ್ಯೂಸ್: ವಿಜಯಪುರದ ಯುವಕನೊಬ್ಬ ಪಾಕಿಸ್ತಾನ್ ಜಿಂದಾಬಾದ್, ಓನ್ಲಿ ಮುಸ್ಲೀಮ್ ರಾಷ್ಟ್ರ ಎಂದು ಸ್ಟೇಟಸ್ ಹಾಕಿ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಹಿರೂರು ಗ್ರಾಮದ ಯುವಕ ಇಬ್ರಾಹಿಂ ಮುರ್ತುಜಸಾಬ ಮುಲ್ಲಾ ಎಂಬಾತ ಇನ್ಸ್ಟಾಗ್ರಾಂನಲ್ಲಿ ಪಾಕಿಸ್ತಾನ್ ಜಿಂದಾಬಾದ್, ಓನ್ಲಿ ಮುಸ್ಲೀಮ್ ರಾಷ್ಟ್ರ ಎಂದು ಸ್ಟೋರಿ ಹಾಕಿದ್ದ. ಇನ್ನು ಇಬ್ರಾಹಿಂ ಮುಲ್ಲಾನ ಇನ್ಸ್ಟಾಗ್ರಾಂ ವೀಕ್ಷಿಸಿದ ಸ್ಥಳೀಯರು ತಾಳಿಕೋಟೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಎಚ್ಚೆತ್ತ ತಾಳಿಕೋಟೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡು, ಆರೋಪಿ […]

ಪಾಕ್ ಪರ ಸ್ಟೇಟಸ್ – ಯುವಕನ ಬಂಧನ Read More »

ಕಾಂತಾರದಲ್ಲಿ ಗುರುವ ಪಾತ್ರದಲ್ಲಿ ಕಾಣಿಸಿಕೊಂಡ ಸ್ವರಾಜ್ ಶೆಟ್ಟಿ ಇದೀಗ “ಬೇರ”ಚಿತ್ರದಲ್ಲಿ

ಸಮಗ್ರ ನ್ಯೂಸ್: ಗುರುವ ಪಾತ್ರದ ಮೂಲಕ ಜನರ ಮನಸ್ಸೇಳೆದ ಸ್ವರಾಜ್ ಶೆಟ್ಟಿಯವರು ಬೇರ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಮಂಗಳೂರಿನಲ್ಲೇ ಹುಟ್ಟಿ ಬೆಳೆದ ಇವರು ಹಲವಾರು ತುಳು ಸಿನಿಮಾದಲ್ಲಿ ನಟಿಸಿದ್ದಾರೆ. ನಟನೆ ರಂಗಕ್ಕೆ ಕಾಲಿಟ್ಟು ಇದಾಗಲೇ ಹನ್ನೆರಡು ವರ್ಷ ಕಳೆದಿದೆ.ನಾಯಕ ನಟನಾಗಿ ಕೃಷ್ಣ ತುಳಸಿ ಧಾರವಾಹಿಯಲ್ಲಿ ನಟಿಸಿದ್ದಾರೆ. ಖಳನಾಯಕನಾಗಿ ರಾಧಾ ಕಲ್ಯಾಣದಲ್ಲಿ ಹಾಗೂ ಅಣ್ಣ ತಂಗಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಓಂ ಪ್ರಕಾಶ್ ನಿರ್ಮಾಣದ ಹುಚ್ಚ 2 ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸಿದ್ದಾರೆ. ಕಾಂತಾರ ಚಿತ್ರದಲ್ಲಿ ಗುರುವ ಪಾತ್ರದಲ್ಲಿ ಅತ್ಯದ್ಭುತವಾಗಿ ಕಾಣಿಸಿಕೊಂಡಿದ್ದಾರೆ.

ಕಾಂತಾರದಲ್ಲಿ ಗುರುವ ಪಾತ್ರದಲ್ಲಿ ಕಾಣಿಸಿಕೊಂಡ ಸ್ವರಾಜ್ ಶೆಟ್ಟಿ ಇದೀಗ “ಬೇರ”ಚಿತ್ರದಲ್ಲಿ Read More »

ಬೆಳ್ತಂಗಡಿ: ಗೃಹಿಣಿಯ ಮಾನಭಂಗಕ್ಕೆ ಯತ್ನ

ಸಮಗ್ರ ನ್ಯೂಸ್: ಕೆಲಸ ಕೊಡಿಸುವ ನೆಪದಲ್ಲಿ ಗೃಹಿಣಿಯೊಬ್ಬರನ್ನು ಮಾನಭಂಗಕ್ಕೆ ಯತ್ನಿಸಿದ ಘಟನೆ ಮೇ 14ರಂದು ಉಜಿರೆಯಲ್ಲಿ ನಡೆದಿದೆ. ಉಜಿರೆಯ ಉದ್ಯಮಿ ಪ್ರಭಾಕರ ಹೆಗ್ಡೆ ಕೃತ್ಯ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ . ಚಿಕ್ಕಮಗಳೂರು ಜಿಲ್ಲೆಯ ಹಂಗರವಳ್ಳಿ ನಿವಾಸಿ ಸುಜಾತಾ ದೂರು ನೀಡಿದವರು.ಸುಜಾತಾ ಮತ್ತು ಅವರ ಪತಿ ಕಿರಣ್‌ ಗೌಡ ಅವರು ಪ್ರಭಾಕರ್‌ ಹೆಗ್ಡೆ ಅವರ ಸಂಸ್ಥೆಗೆ ಕೆಲಸ ಹುಡುಕಿಕೊಂಡು ಬಂದಿದ್ದರು. ಈ ಸಂದರ್ಭದಲ್ಲಿ ಅವರ ಮನೆಯಲ್ಲೇ ಆಶ್ರಯ ನೀಡಿ ಮೇ 14ರಂದು ಪತಿ ಕಿರಣ್‌ ಅವರನ್ನು ತಮ್ಮ ಸಂಸ್ಥೆಯ

ಬೆಳ್ತಂಗಡಿ: ಗೃಹಿಣಿಯ ಮಾನಭಂಗಕ್ಕೆ ಯತ್ನ Read More »

ಸುಳ್ಯ ನ.ಪಂ.ನ ಪ್ರಥಮ ಅವಧಿಯ ಅಧಿಕಾರವಧಿ ಮುಕ್ತಾಯ

ಸಮಗ್ರ ನ್ಯೂಸ್: ಸುಳ್ಯ ನಗರ ಪಂಚಾಯತ್‌ನ ಪ್ರಥಮ ಎರಡೂವರೆ ವರ್ಷದ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಅವಧಿ ಮುಕ್ತಾಯಗೊಂಡಿದ್ದು, ಮುಂದಿನ ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪ್ರಕಟಗೊಳ್ಳಬೇಕಿದೆ. ಸುಳ್ಯ ನಗರ ಪಂಚಾಯತ್‌ನ ಪ್ರಥಮ ಅವಧಿಯ ಎರಡೂವರೆ ವರ್ಷದಲ್ಲಿ ವಿನಯಕುಮಾರ್ ಕಂದಡ್ಕ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಸರೋಜಿನಿ ಪೆಲತಡ್ಕ ಕಾರ್ಯನಿರ್ವಹಿಸಿದ್ದರು. ಮೇ ೫ಕ್ಕೆ ಅವರ ಅಧಿಕಾರವಧಿ ಮುಕ್ತಾಯಗೊಂಡಿದೆ. ಮುಂದಿನ ನ.ಪಂ.ನ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಗುವಲ್ಲಿವರೆಗೆ ಆಡಳಿತ ನೋಡಿಕೊಳ್ಳಲು ಆಡಳಿತಾಧಿಕಾರಿ ನೇಮಕಗೊಳ್ಳಬೇಕಿದ್ದು, ಶೀಘ್ರ ನೇಮಕವಾಗುವ ನಿರೀಕ್ಷೆಯಿದೆ.

ಸುಳ್ಯ ನ.ಪಂ.ನ ಪ್ರಥಮ ಅವಧಿಯ ಅಧಿಕಾರವಧಿ ಮುಕ್ತಾಯ Read More »

ಸುಳ್ಯ: ಜೀವಬಲಿಗಾಗಿ ಕಾಯುತ್ತಿವೆ ಮೆಸ್ಕಾಂ ವಿದ್ಯುತ್ ಕಂಬಗಳು

ಸಮಗ್ರ ನ್ಯೂಸ್: ವಿದ್ಯುತ್ ಕಂಬಗಳು ತುಕ್ಕು ಹಿಡಿದು ಧರೆಗುರುಳುವ ಸ್ಥಿತಿಯಲ್ಲಿರುವುದು ಸುಳ್ಯ ನಗರದ ಕೆಲವು ಕಡೆಗಳಲ್ಲಿ ಕಂಡುಬಂದಿದೆ. ಸುಳ್ಯ ನಗರದ ವಿವೇಕಾನಂದ ಸರ್ಕಲ್ ಬಳಿ ಅಂಬೆಟಡ್ಕ ಭಾಗದಲ್ಲಿ ಹಾದು ಹೋಗುವ ವಿದ್ಯುತ್ ತಂತಿಗಳಿಗೆ ಅಳವಡಿಸಿರುವ ಕಂಬಗಳು ತುಕ್ಕು ಹಿಡಿದಿರುವುದು ಕಂಡುಬಂದಿದೆ. ಇಲ್ಲಿ ಹೈ ವೋಲ್ಟೇಜ್ ವಿದ್ಯುತ್ ಹಾದುಹೋಗುವುದರಿಂದ ಇದರಿಂದ ಸಮಸ್ಯೆಗಳು ಕಟ್ಟಿಟ್ಟ ಬುತ್ತಿಯಾಗಿದೆ. ಮುಂದಿನ ದಿನಗಳಲ್ಲಿ ಅತಿಯಾದ ಗಾಳಿ ಮಳೆ ಬರುವುದರಿಂದ ಈ ಕಂಬಗಳು ತುಂಡಾಗಿ ನೆಲಕ್ಕೆ ಉರುಳುವ ಸಂಭವ ಕೂಡ ಇದೆ. ಈ ರಸ್ತೆಯಲ್ಲಿ ದಿನದಲ್ಲಿ

ಸುಳ್ಯ: ಜೀವಬಲಿಗಾಗಿ ಕಾಯುತ್ತಿವೆ ಮೆಸ್ಕಾಂ ವಿದ್ಯುತ್ ಕಂಬಗಳು Read More »

ಸುಳ್ಯ: ಅಡ್ತಲೆ – ಮರ್ಕಂಜ ಡಾಂಬರೀಕರಣಗೊಂಡ ರಸ್ತೆಯ ಸ್ಥಿತಿ ದೇವರಿಗೇ ಪ್ರೀತಿ!!

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅಡ್ತಲೆ ರಸ್ತೆಯು ನೂತನವಾಗಿ ಡಾಮರೀಕರಣಗೊಂಡಿದೆ. ಈ ರಸ್ತೆ ಬದಿ ಅರ್ಧ ಅಡಿ ಸಹ ಜಾಗ ಇಲ್ಲ, ಮತ್ತು ವಿದ್ಯುತ್ ಕಂಬಗಳು ರಸ್ತೆಯಲ್ಲಿಯೇ ಇದ್ದು ಪ್ರಯಾಣಿಕರಿಗೆ ಅಪಾಯ ಮಾಡುವಂತಿದೆ. ರಸ್ತೆ ಬದಿಯೇ ಚರಂಡಿ ಮತ್ತು ವಿದ್ಯುತ್ ಕಂಬಗಳು ಇರುವುದರಿಂದ, ಮುಂದೆ ಅಪಾಯಕಾರಿ ಘಟನೆಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಲೋಕೋಪಯೋಗಿ ಇಲಾಖೆ ಹಾಗೂ ಮೆಸ್ಕಾಂನಿಂದ ಈ ಬಗ್ಗೆ ಮಳೆಗಾಲ ಆರಂಭಕ್ಕೆ ಮೊದಲು ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಬೇಡಿಕೆ. ಈ ರಸ್ತೆಯ

ಸುಳ್ಯ: ಅಡ್ತಲೆ – ಮರ್ಕಂಜ ಡಾಂಬರೀಕರಣಗೊಂಡ ರಸ್ತೆಯ ಸ್ಥಿತಿ ದೇವರಿಗೇ ಪ್ರೀತಿ!! Read More »

ಕಾಂಗ್ರೆಸ್ ಹೈಕಮಾಂಡ್ ಗೆ ಬಿಸಿತುಪ್ಪವಾದ ಸಿಎಂ ಆಯ್ಕೆ| ಡಿ ಕೆ ಶಿವಕುಮಾರ್ ಮತ್ತು‌ ಸಿದ್ದರಾಮಯ್ಯ ‌ಮಧ್ಯೆ ಬಿಗ್ ಫೈಟ್

ಸಮಗ್ರ ನ್ಯೂಸ್: ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ತೀವ್ರ ಪೈಪೋಟಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಬೆಂಬಲವನ್ನು ಪಡೆದ ನಂತರ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್‌ ಗಿಂತ ಸಿಎಂ ಸ್ಥಾನಕ್ಕೆ ಹತ್ತಿರವಾಗಿದ್ದಾರೆ. ಆದರೆ, ಮುಖ್ಯಮಂತ್ರಿ ವಿಚಾರದಲ್ಲಿ ಕಾಂಗ್ರೆಸ್ ಉನ್ನತ ನಾಯಕತ್ವ ಇನ್ನೂ ಭಿನ್ನಾಭಿಪ್ರಾಯ ಹೊಂದಿದೆ ಎನ್ನಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಿದ್ದಾರೆ. ಬಹುತೇಕ ಶಾಸಕರು ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕಿ

ಕಾಂಗ್ರೆಸ್ ಹೈಕಮಾಂಡ್ ಗೆ ಬಿಸಿತುಪ್ಪವಾದ ಸಿಎಂ ಆಯ್ಕೆ| ಡಿ ಕೆ ಶಿವಕುಮಾರ್ ಮತ್ತು‌ ಸಿದ್ದರಾಮಯ್ಯ ‌ಮಧ್ಯೆ ಬಿಗ್ ಫೈಟ್ Read More »

ಕೋವಿ ಠೇವಣಾತಿ ಇರಿಸಿದ ರೈತರು ವಾಪಾಸ್ ಪಡಕೊಳ್ಳಲು ದ.ಕ ಜಿಲ್ಲಾಧಿಕಾರಿ ಸೂಚನೆ

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಠೇವಣಿ ಇರಿಸಲಾದ ಆಯುಧಗಳನ್ನು ವಾಪಸ್ ಪಡೆಯಲು ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಸೂಚನೆ ನೀಡಿದ್ದಾರೆ. ಮೇ.16 ರಿಂದ ಪೊಲೀಸ್ ಆಯುಕ್ತರ ಕಾರ್ಯ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದಂತೆ ಜಿಲ್ಲೆಯ ಎಲ್ಲಾ ಆಯುಧ ಪರವಾನಿಗೆದಾರರ ಆಯುಧಗಳನ್ನು ಈಗಾಗಲೇ ಪೊಲೀಸ್ ಠಾಣೆ, ಅಧಿಕೃತ ಕೋವಿ ಹಾಗು ಮದ್ದುಗುಂಡು ವ್ಯಾಪಾರಸ್ಥರಿಂದ ಠೇವಣಿ ಇರಿಸಿರುವುದರಿಂದ ಆಯುಧ ಪರವಾನಿಗೆದಾರರಿಗೆ ಹಿಂಪಡೆಯುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಕೋವಿ ಠೇವಣಾತಿ ಇರಿಸಿದ ರೈತರು ವಾಪಾಸ್ ಪಡಕೊಳ್ಳಲು ದ.ಕ ಜಿಲ್ಲಾಧಿಕಾರಿ ಸೂಚನೆ Read More »

ಉಡುಪಿ: ಕಾರುಗಳ ನಡುವೆ ಅಪಘಾತ – ನಾಲ್ವರಿಗೆ ಗಾಯ

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯ ಕಾಪುವಿನ ಪಾಂಗಾಳದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನ್ಯಾನೊ ಕಾರು ಮತ್ತು ಡಸ್ಟರ್ ಕಾರಿನ ನಡುವೆ ಅಪಘಾತದಲ್ಲಿ ನಾಲ್ವರು ಗಾಯಗೊಂಡ ಘಟನೆ ಸಂಭವಿಸಿದೆ. ಕಾರುಗಳು ಢಿಕ್ಕಿಯಾದ ರಭಸಕ್ಕೆ ಎರಡು ಕಾರು ಪಲ್ಟಿ ಹೊಡೆದಿದ್ದು, ನ್ಯಾನೋ ಕಾರಿನಲ್ಲಿದ್ದ ನಾಲ್ವರು ಗಾಯ ಗೊಂಡಿದ್ದಾರೆ. ಡಸ್ಟರ್ ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಾಳುಗಳನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಉಡುಪಿ: ಕಾರುಗಳ ನಡುವೆ ಅಪಘಾತ – ನಾಲ್ವರಿಗೆ ಗಾಯ Read More »

+84, +62, +60 ಸಂಖ್ಯೆಗಳಿಂದ ಬರುವ ಕರೆಗಳನ್ನು ಅಪ್ಪಿ ತಪ್ಪಿ ಸ್ವೀಕರಿಸಬೇಡಿ

ಸಮಗ್ರ ನ್ಯೂಸ್: ಅಪರಿಚಿತ ಸಂಖ್ಯೆಗಳಾದ +84, +62, +60 ರಿಂದ ಕರೆ ಬರುತ್ತಿದ್ದರೆ, ಅಂತಹ ಕರೆಗಳನ್ನು ಸ್ವೀಕರಿಸಬೇಡಿ. ನಿಮ್ಮನ್ನು ಬಲೆಗೆ ಬೀಳಿಸುವ ಮೂಲಕ ಹಣವನ್ನು ಸುಲಿಗೆ ಮಾಡಬಹುದು. ಈ ನಿಟ್ಟಿನಲ್ಲಿ ಸರ್ಕಾರವು ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಿದೆ. ಕಳೆದ ಕೆಲವು ತಿಂಗಳುಗಳಿಂದ, +84, +62, +60 ರಿಂದ ಪ್ರಾರಂಭವಾಗುವ ವಾಟ್ಸಾಪ್ ಸಂಖ್ಯೆಗಳಿಂದ ಭಾರಿ ಕರೆಗಳು ಬರುತ್ತಿರುವುದು ಕಂಡುಬಂದಿದೆ. ಮಲೇಷ್ಯಾ, ಕೀನ್ಯಾ, ವಿಯೆಟ್ನಾಂ ಮತ್ತು ಇಥಿಯೋಪಿಯಾದಿಂದ ಇಂತಹ ಕರೆಗಳು ಬರುತ್ತಿವೆ. ಈ ಐಎಸ್ಡಿ ಸಂಖ್ಯೆಗಳಿಂದ ಬರುವ ಕರೆಗಳು ಸಾಮಾನ್ಯವಾಗಿ ವೀಡಿಯೊ

+84, +62, +60 ಸಂಖ್ಯೆಗಳಿಂದ ಬರುವ ಕರೆಗಳನ್ನು ಅಪ್ಪಿ ತಪ್ಪಿ ಸ್ವೀಕರಿಸಬೇಡಿ Read More »