May 2023

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಗ್ರಹಗತಿಗಳ ಆಧಾರದ ಮೇಲೆ ಭವಿಷ್ಯ ಹೇಳಲಾಗುವುದು. ಈ ವಾರ ಅಂದರೆ ಮೇ 21ರಿಂದ 27ರವರೆಗಿನ ವಾರಭವಿಷ್ಯ ಇಲ್ಲಿ ನೀಡಲಾಗಿದೆ. ನಿಮ್ಮ ರಾಶಿಗೆ ಶುಭವೋ ಅಥವಾ ಜಾಗ್ರತೆವಹಿಸಬೇಕಾ ನೋಡೋಣ ಬನ್ನಿ… ಮೇಷ: ಈ ವಾರ ಸೂರ್ಯ ಹಾಗೂ ಕುಜ ತಮ್ಮ ಸ್ಥಾನವನ್ನು ಬದಲಿಸಿದ್ದಾರೆ. ಸೂರ್ಯ ಉಚ್ಚಸ್ಥಾನದಿಂದ ಮುಂದೆ ಹೋಗಿದ್ದಾನೆ. ಕುಜನು ತನ್ನ ನೀಚಸ್ಥಾನದಲ್ಲಿ ಇದ್ದಾನೆ. ಆದ್ದರಿಂದ ಭೂಮಿಗೆ ಸಂಬಂಧಿಸಿದ ಕಾರ್ಯಗಳು ಸಫಲವಾಗದು. ದ್ವಿತೀಯದ ಸೂರ್ಯನು ತಂದೆಯಿಂದ ಲಾಭವನ್ನು ಮಾಡಿಸಿಕೊಡುವನು. ಗುರು, ಬುಧ, ರಾಹುಗಳು ನಿಮ್ಮ ಗೃಹದಲ್ಲಿ […]

ದ್ವಾದಶ ರಾಶಿಗಳ ವಾರಭವಿಷ್ಯ Read More »

ಐಪಿಎಲ್ 2023 ನೆ ಪ್ಲೇ ಆಫ್ ಪ್ರವೇಶ ರಾಜಸ್ಥಾನ ರಾಯಲ್ಸ್ ತಂಡಕ್ಕೂ ಸಿಕ್ಕಿದೆ ಅವಕಾಶ

ಸಮಗ್ರ ನ್ಯೂಸ್: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಈಗಾಗಲೇ ಎರಡು ತಂಡಗಳು ಎಂಟ್ರಿ ಕೊಟ್ಟಿದ್ದು. ಗುಜರಾತ್ ಟೈಟಾನ್ಸ್ ಮತ್ತು ಚೆನೈ ಉಳಿದಂತೆ ಎರಡು ಸ್ಥಾನಕ್ಕೆ ಮೂರು ತಂಡಗಳ ನಡುವೆ ಪೈಪೋಟಿ ಆರಂಭವಾಗಿದೆ . ಇನ್ನು ಪಂಜಾಬ್ ಕಿಂಗ್ಸ್ ವಿರುದ್ಧ 2023 ರ 66 ನೇ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳ ಜಯದೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್‌ ಪ್ಲೇ ಆಫ್‌ ನಲ್ಲಿ ಉಳಿದುಕೊಂಡಿದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಲೀಗ್‌ ಹಂತದ ಪಂದ್ಯಗಳು ಕೊನೆ ಹಂತವನ್ನು ತಲುಪಿದ್ದು. ರಾಜಸ್ಥಾನ ರಾಯಲ್ಸ್‌ ತಂಡ

ಐಪಿಎಲ್ 2023 ನೆ ಪ್ಲೇ ಆಫ್ ಪ್ರವೇಶ ರಾಜಸ್ಥಾನ ರಾಯಲ್ಸ್ ತಂಡಕ್ಕೂ ಸಿಕ್ಕಿದೆ ಅವಕಾಶ Read More »

ಕರ್ನಾಟಕದ ನೂತನ ಡಿಜಿ ಐಜಿಪಿ ಆಗಿ ಡಾ. ಅಲೋಕ್ ಮೋಹನ್ ನೇಮಕ

ಸಮಗ್ರ ನ್ಯೂಸ್: ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ ಡಾ. ಅಲೋಕ್ ಮೋಹನ್ ಅವರು ನೇಮಕಗೊಂಡಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸಿಬಿಐ ನಿರ್ದೇಶಕರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಅವರಿಂದ ತೆರವಾಗುವ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ಮೋಹನ್ ಅವರನ್ನು ಆಯ್ಕೆ ಮಾಡಲಾಗಿದೆ. ಬಿಹಾರ ಮೂಲದ ಡಾ.ಅಲೋಕ್ ಮೋಹನ್ ಅವರು 1987 ರ ಬ್ಯಾಚ್ ನ ಹಿರಿಯ IPS ಅಧಿಕಾರಿಯಾಗಿದ್ದಾರೆ. ಅವರು 36 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಸದ್ಯ ಹಾಲಿ ಅಗ್ನಿಶಾಮಕದಳ ಹಾಗೂ ತುರ್ತು ಸೇವೆಗಳ ಡಿಜಿಪಿಯಾಗಿದ್ದಾರೆ.

ಕರ್ನಾಟಕದ ನೂತನ ಡಿಜಿ ಐಜಿಪಿ ಆಗಿ ಡಾ. ಅಲೋಕ್ ಮೋಹನ್ ನೇಮಕ Read More »

ಐದು ಗ್ಯಾರಂಟಿಗೆ ತಾತ್ವಿಕ ಅನುಮೋದನೆ – ಸಿಎಂ ಸಿದ್ದರಾಮಯ್ಯ

ಸಮಗ್ರ ನ್ಯೂಸ್: ನೂತನ ಕಾಂಗ್ರೆಸ್ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಐದು ಗ್ಯಾರಂಟಿಗಳಿಗೆ ತಾತ್ವಿಕ ಅನುಮೋದನೆ ಪಡೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಹೆಚ್ಚಿನ ವಿವರಗಳನ್ನು ಮುಂದಿನ ಸಭೆಗಳಲ್ಲಿ ಚರ್ಚಿಸಲಾಗುವುದು. ಈ ಕುರಿತು ಆದೇಶ ಹೊರಡಿಸಲಾಗುವುದು ಎಂದು ಅವರು ತಿಳಿಸಿದರು. 200 ಯುನಿಟ್ ಗಳವರೆಗೆ ಉಚಿತ ವಿದ್ಯುತ್, ಬಿಪಿಎಲ್ ಕುಟುಂಬಗಳ ಸದಸ್ಯರಿಗೆ ಉಚಿತವಾಗಿ ತಿಂಗಳಿಗೆ ತಲಾ ಹತ್ತು ಕೆ.ಜಿ. ಅಕ್ಕಿ, ಮನೆಯ ಯಜಮಾನಿಗೆ ತಿಂಗಳಿಗೆ ₹ 2,000 ನೆರವು, ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ ₹

ಐದು ಗ್ಯಾರಂಟಿಗೆ ತಾತ್ವಿಕ ಅನುಮೋದನೆ – ಸಿಎಂ ಸಿದ್ದರಾಮಯ್ಯ Read More »

ಕೆಟ್ಟು ನಿಂತ ಲಾರಿಗೆ ಕಾರು ಡಿಕ್ಕಿ

ಸಮಗ್ರ ನ್ಯೂಸ್: ಮಾಣಿ ಮೈಸೂರು ಹೆದ್ದಾರಿಯ ಕೊಯನಾಡು ಬಲಿ ಕೆಟ್ಟು ನಿಂತ ಲಾರಿಗೆ ಮಾರುತಿ 800 ಕಾರು ಡಿಕ್ಕಿಯಾದ ಘಟನೆ ಮೇ 20ರಂದು ಸಂಭವಿಸಿದೆ. ಮಡಿಕೇರಿಯಿಂದ ಸುಳ್ಯ ಕಡೆ ಹೋಗುತ್ತಿದ್ದ ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಕೆಟ್ಟು ನಿಂತ ಲಾರಿಗೆ ಕಾರು ಡಿಕ್ಕಿ Read More »

ಸಿದ್ದರಾಮಯ್ಯ ಸಿಎಂ ಆಗಿ ಪ್ರಮಾಣವಚನ| ಕಂಠೀರವ ಕ್ರೀಡಾಂಗಣದಿಂದ ನೇರಪ್ರಸಾರ

ಸಮಗ್ರ ನ್ಯೂಸ್: ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಮಧ್ಯಾಹ್ನ 12.30ಕ್ಕೆ ರಾಜ್ಯದ ಸಿಎಂ ಆಗಿ ಎರಡನೇ ಬಾರಿ ಸಿದ್ದರಾಮಯ್ಯ ಹಾಗೂ ಮೊದಲ ಬಾರಿ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್​​ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಸೇರಿದಂತೆ 10 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರಲ್ಲಿ ಇಂದು 8 ಶಾಸಕರು ಮಾತ್ರ ಸಚಿವರಾಗಿ

ಸಿದ್ದರಾಮಯ್ಯ ಸಿಎಂ ಆಗಿ ಪ್ರಮಾಣವಚನ| ಕಂಠೀರವ ಕ್ರೀಡಾಂಗಣದಿಂದ ನೇರಪ್ರಸಾರ Read More »

ಮುಳಿಯ ಜ್ಯುವೆಲ್ಸ್ ಪುತ್ತೂರು| ಇಂದು ಮೆಹೆಂದಿ ಸಂಭ್ರಮ!|

ಸಮಗ್ರ ನ್ಯೂಸ್: ಪುತ್ತೂರಿನ ಮುಳಿಯ ಜ್ಯುವೆಲ್ಸ್ ತನ್ನ ಚಿನ್ನೋತ್ಸವದ ‘ಮೆಹೆಂದಿ ಸಂಭ್ರಮ!’ ಆಚರಣೆಯೊಂದಿಗೆ ಹಮ್ಮಿಕೊಂಡಿದೆ. ಮೇ. 20 ರಂದು(ಇಂದು) ಮುಳಿಯ ಜ್ಯುವೆಲ್ಸ್ ಮಳಿಗೆಗೆ ಆಗಮಿಸುವ ಆಸಕ್ತ ಗ್ರಾಹಕರಿಗೆ ಮೆಹೆಂದಿ ಹಾಕಿಸಿಕೊಳ್ಳಲು ಇದು ಸುವರ್ಣಾವಕಾಶ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಮುಳಿಯ ಜ್ಯುವೆಲ್ಸ್ ಪುತ್ತೂರು| ಇಂದು ಮೆಹೆಂದಿ ಸಂಭ್ರಮ!| Read More »

ಚಲಿಸುತ್ತಿರುವ ಬಸ್ ನಲ್ಲಿ ಗರ್ಭಿಣಿ‌ಗೆ ಹೆರಿಗೆ ಮಾಡಿಸಿ ದೇವರಾದ ಮಹಿಳಾ ಕಂಡಕ್ಟರ್ ವಸಂತಮ್ಮ

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಹಿಳಾ ಕಂಡಕ್ಟರ್ ಬೆಂಗಳೂರು-‌ಚಿಕ್ಕಮಗಳೂರು ಮಾರ್ಗದಲ್ಲಿ ಚಲಿಸುವ‌ ಬಸ್‌ನಲ್ಲಿ ಮಹಿಳಾ ಕಂಡೆಕ್ಟರ್ ತುಂಬು ಗರ್ಭಿಣಿ ಮಗುವಿಗೆ ಜನ್ಮ ನೀಡಲು ಸಹಾಯ ಮಾಡಿದರು. ಸೋಮವಾರ (ಮೇ. 15) ಮಧ್ಯಾಹ್ನ 1.25ರ ಸುಮಾರಿಗೆ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಈ ಘಟನೆ ನಡೆದಿದೆ. ಮಹಿಳಾ ಕಂಡಕ್ಟರ್ ಎಸ್.ವಸಂತಮ್ಮ, ಚಾಲಕನಿಗೆ ಬಸ್ ನಿಲ್ಲಿಸುವಂತೆ ಹೇಳಿ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಲು ಹೇಳಿದರು. ಸೋಮವಾರ ಮಹಿಳೆಗೆ ಹೆರಿಗೆಯಾಗಿದ್ದು, ತಾಯಿ(ಫಾತಿಮಾ) ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಅಷ್ಟೇ

ಚಲಿಸುತ್ತಿರುವ ಬಸ್ ನಲ್ಲಿ ಗರ್ಭಿಣಿ‌ಗೆ ಹೆರಿಗೆ ಮಾಡಿಸಿ ದೇವರಾದ ಮಹಿಳಾ ಕಂಡಕ್ಟರ್ ವಸಂತಮ್ಮ Read More »

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಗೆ ಮಾತೃವಿಯೋಗ

ಸಮಗ್ರ ನ್ಯೂಸ್: ಆರೋಗ್ಯ ಸಚಿವರಾಗಿದ್ದ, ಪ್ರಭಾವಿ ಬಿಜೆಪಿ ನಾಯಕ ಡಾ ಕೆ ಸುಧಾಕರ್‌ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿ ರಾಜ್ಯವೇ ಹುಬ್ಬೇರಿಸುವಂತೆ ಮಾಡಿದ್ದ ಪ್ರದೀಪ್‌ ಈಶ್ವರ್‌ ಅವರ ಸಾಕು ತಾಯಿ ರತ್ನಮ್ಮ ನಿಧನರಾಗಿದ್ದಾರೆ. 72 ವರ್ಷ ವಯಸ್ಸಿನ ರತ್ನಮ್ಮ ಪೇರೇಸಂದ್ರ ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದಾರೆ. ರತ್ನಮ್ಮ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇನ್ನು ಮತ್ತೊಂದೆಡೆ ಇಂದು ಸಿಎಂ ಮತ್ತು ಡಿಸಿಎಂ ಸೇರಿದಂತೆ ಕೆಲ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಹಿನ್ನೆಲೆ ಪ್ರದೀಪ್ ಈಶ್ವರ್ ಬೆಂಗಳೂರಿನಲ್ಲಿದ್ದಾರೆ.

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಗೆ ಮಾತೃವಿಯೋಗ Read More »

13 ವರ್ಷದ ಬಾಲಕಿ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ

ಸಮಗ್ರ ನ್ಯೂಸ್: 13 ವರ್ಷದ ಬಾಲಕಿಯ ಮೇಲೆ ಚಲಿಸುತ್ತಿರುವ ವಾಹನದಲ್ಲಿ ಸಾಮೂಹಿಕ ಬಲಾತ್ಕಾರ ಮಾಡಿರುವ ಘಟನೆ ಆಸ್ಸಾಂ ರಾಜ್ಯದ ಕೊಕರಾಝಾರ ಜಿಲ್ಲೆಯ ಡೋಟಮಾ ಪ್ರದೇಶದಲ್ಲಿ ನಡೆದಿದೆ. ಆರೋಪಿಗಳನ್ನು ರೂಬೆಲ್ ರೆಹಮಾನ, ಇಮ್ರಾನ್ ಹುಸೇನ, ಅನ್ವರ ಹುಸೇನ ಮತ್ತು ಮೊಮಿನೂರ ರಹಮಾನ ಎಂದು ಗುರುತಿಸಲಾಗಿದೆ. ಪೊಲೀಸರು ಗಸ್ತು ಮಾಡುತ್ತಿರುವಾಗ ಅವರಿಗೆ ವಾಹನದ ಬಗ್ಗೆ ಸಂದೇಹ ಬಂದಿತು. ಅವರು ವಾಹನವನ್ನು ನಿಲ್ಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂತು. ಅ. 13 ರಂದು ಮಧ್ಯಾಹ್ನ ಡೊಟಮಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರ

13 ವರ್ಷದ ಬಾಲಕಿ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ Read More »