May 2023

ಐತಿಹಾಸಿಕ ದಾಖಲೆ ನಿರ್ಮಿಸಿದ ಮಹೀಂದ್ರಾ ಥಾರ್ SUV| ಒಂದು ಲಕ್ಷ ವಾಹನ ಮಾರಾಟ ಸಾಧನೆ

ಸಮಗ್ರ ನ್ಯೂಸ್: ಮಹೀಂದ್ರಾ ಥಾರ್ ಎಸ್‍ಯುವಿಯು ಬಹಳ ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ಆಫ್-ರೋಡರ್ ಎಸ್‍ಯುವಿಯಾಗಿದೆ. ಸದ್ಯ ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಸ್ತುತ ಜನರೇಷನ್ ಮಹೀಂದ್ರಾ ಥಾರ್ ಮಾದರಿಯು ಬಹುಬೇಡಿಯೊಂದಿಗೆ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಇದರಿಂದ ಬೇಡಿಕೆ ಹೆಚ್ಚಾಗಿರುವುದರಿಂದ ಮಹೀಂದ್ರಾ ಥಾರ್ ಎಸ್‍ಯುವಿಯ ಕಾಯುವ ಅವಧಿಯು ಕೂಡ ಹೆಚ್ಚಾಗುತ್ತಿದೆ. ಇದೀಗ ಮಹೀಂದ್ರಾ ಥಾರ್ ಎಸ್‍ಯುವಿಯು 1 ಲಕ್ಷ ಮಾರಾಟವಾಗಿ ಹೊಸ ಮೈಲಿಗಲ್ಲು ದಾಖಲಿಸಿದೆ. 2020ರ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾದ ಈ ಆಫ್-ರೋಡ್ 1 ಲಕ್ಷ ಉತ್ಪಾದನಾ ಗಡಿಯನ್ನು ದಾಟಿದೆ ಮತ್ತು […]

ಐತಿಹಾಸಿಕ ದಾಖಲೆ ನಿರ್ಮಿಸಿದ ಮಹೀಂದ್ರಾ ಥಾರ್ SUV| ಒಂದು ಲಕ್ಷ ವಾಹನ ಮಾರಾಟ ಸಾಧನೆ Read More »

“ಬೇರ” ಸಿನಿಮಾದ ಟ್ರೈಲರ್ ನ್ನು ಬಿಡುಗಡೆಗೊಳಿಸಿದ ಡಾ. ಡಿ ವೀರೇಂದ್ರ ಹೆಗ್ಗಡೆ

ಸಮಗ್ರ ನ್ಯೂಸ್: ಎಸ್ ಎಲ್ ವಿ ಕಲರ್ಸ್ ಲಾಂಛನದಲ್ಲಿ ಮೂಡಿಬಂದ ವಿನು ಬಳಂಜ ನಿರ್ದೇಶನದ “ಬೇರ” ಸಿನಿಮಾದ ಟ್ರೈಲರ್ ನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಯವರು ಬಿಡುಗಡೆಗೊಳಿಸಿ ಚಿತ್ರಕ್ಕೆ ಹಾಗೂ ಚಿತ್ರ ತಂಡಕ್ಕೆ ಶುಭ ಆಶೀರ್ವಾದ ನೀಡಿದರು. ಈ ಸಂದರ್ಭದಲ್ಲಿ ರಾಜರಾಮ ಶೆಟ್ಟಿ ಕೋಲ್ಪೆ ಗುತ್ತು ಸಿನಿಮಾ ನಿರ್ಮಾಪಕ ದಿವಾಕರ ದಾಸ ನೇರ್ಲಾಜೆ, ನಿರ್ದೇಶಕ ವಿನು ಬಳಂಜ, ಕಾರ್ಯಕಾರಿ ನಿರ್ಮಾಪಕ ರಾಮದಾಸ್ ಶೆಟ್ಟಿ, ಬಹುಭಾಷ ನಟಿ ಹರ್ಷಿಕಾ ಪೂಣಚ್ಚ, ಸ್ವರಾಜ್

“ಬೇರ” ಸಿನಿಮಾದ ಟ್ರೈಲರ್ ನ್ನು ಬಿಡುಗಡೆಗೊಳಿಸಿದ ಡಾ. ಡಿ ವೀರೇಂದ್ರ ಹೆಗ್ಗಡೆ Read More »

ವಿಧಾನಸಭಾ ಸ್ಪೀಕರ್ ಆಗಿ ಯು.ಟಿ ಖಾದರ್ ಆಯ್ಕೆ| ಇಂದು ನಾಮಪತ್ರ ಸಲ್ಲಿಕೆ

ಸಮಗ್ರ ನ್ಯೂಸ್: ವಿಧಾನಸಭೆಯ ನೂತನ ಸ್ಪೀಕರ್ ಹುದ್ದೆಗೆ ಮಾಜಿ ಸಚಿವ ಯು ಟಿ ಖಾದರ್ ಅವರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ. ಯು ಟಿ ಖಾದರ್ ಇಂದು ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಐದನೇ ಬಾರಿಗೆ ಆಯ್ಕೆಯಾಗಿರುವ ಯು ಟಿ ಖಾದರ್ ಎಂಬ ಸೋಲಿಲ್ಲದ ಸರದಾರನಿಗೆ ಈ ಬಾರಿಯ ಕಾಂಗ್ರೆಸ್ ಸರ್ಕಾರದಲ್ಲಿ ಗೃಹ ಅಥವಾ ತತ್ಸಮಾನ ಪ್ರಮುಖ ಖಾತೆ ನೀಡಲಾಗುತ್ತೆ ಎಂದು ಊಹಿಸಲಾಗಿತ್ತು. ಆದರೆ ಸ್ಪೀಕರ್ ಹುದ್ದೆಗೆ ಯು ಟಿ ಖಾದರ್ ಹೆಸರು ಅಚ್ಚರಿಯ ಆಯ್ಕೆ.

ವಿಧಾನಸಭಾ ಸ್ಪೀಕರ್ ಆಗಿ ಯು.ಟಿ ಖಾದರ್ ಆಯ್ಕೆ| ಇಂದು ನಾಮಪತ್ರ ಸಲ್ಲಿಕೆ Read More »

ಉಪ್ಪಿನಂಗಡಿ: ವಿದ್ಯುತ್ ಶಾಕ್ ಗೆ ಕಾಲೇಜು ವಿದ್ಯಾರ್ಥಿ ಬಲಿ

ಸಮಗ್ರ ನ್ಯೂಸ್: ವಿದ್ಯುತ್ ಶಾಕ್ ಹೊಡೆದು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿಯ ಹಿರೇಬಂಡಾಡಿ ಗ್ರಾಮದ ಅಡಕ್ಕಲ್ ಬಳಿ ನಡೆದಿದೆ. ಶರೀಪುದ್ದೀನ್(19) ಮೃತ ವಿದ್ಯಾರ್ಥಿ. ಯುವಕ ಹಮ್ಮಬ್ಬ ಅವರ ಸಹೋದರಿಯ ಪುತ್ರನಾಗಿದ್ದು, ಹುಮ್ಮಬ್ಬ ಅವರ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಘಟನೆಯ ಬಗ್ಗೆ ಹುಮ್ಮಬ್ಬ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಸಾರ್ವಜನಿಕರ ಮೂಲಕ ನನ್ನ ತಂಗಿಯ ಮಗನಿಗೆ ಶರೀಪುದ್ದೀನ್ ಗೆ ಅಡೆಕ್ಕಲ್ ಕುಮಾರಧಾರ ನದಿ ಕಿನಾರೆಯ ಬಳಿ ವಿಧ್ಯುತ್ ಸ್ಪರ್ಶವಾಗಿ ಅಸ್ವಸ್ಥಗೊಂಡಿರುವ ಬಗ್ಗೆ ಮಾಹಿತಿ ಬಂದಿದೆ. ಸ್ಥಳೀಯರು

ಉಪ್ಪಿನಂಗಡಿ: ವಿದ್ಯುತ್ ಶಾಕ್ ಗೆ ಕಾಲೇಜು ವಿದ್ಯಾರ್ಥಿ ಬಲಿ Read More »

ಇಂದಿನಿಂದ ದೇಶಾದ್ಯಂತ ಬ್ಯಾಂಕ್ ಗಳಲ್ಲಿ ₹. 2000 ನೋಟು ವಿನಿಮಯ ಅವಕಾಶ

ಸಮಗ್ರ ನ್ಯೂಸ್: ಇಂದಿನಿಂದ ದೇಶಾದ್ಯಂತ ಎಲ್ಲಾ ಬ್ಯಾಂಕ್ ಗಳಲ್ಲಿ 2000 ಮುಖಬೆಲೆಯ ನೋಟುಗಳ ವಿನಿಮಯ ಆರಂಭಿಸಲಾಗುತ್ತಿದೆ. ಕೌಂಟರ್ನಲ್ಲಿ 2000 ರೂ.ಗಳ ನೋಟುಗಳನ್ನು ವಿನಿಮಯ ಮಾಡುವ ಸೌಲಭ್ಯವನ್ನು ಸಾರ್ವಜನಿಕರಿಗೆ ಸಾಮಾನ್ಯ ರೀತಿಯಲ್ಲಿ ಒದಗಿಸಲಾಗುವುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಹೇಳಿದೆ. ಮೇ.23ರ ಮಂಗಳವಾರದ ಇಂದಿನಿಂದ ಹಿಂಪಡೆಯಲಾದಂತ 2,000 ರೂಪಾಯಿ ಮುಖಬಲೆಯ ನೋಟುಗಳನ್ನು ಯಾವುದೇ ಬ್ಯಾಂಕಿನಲ್ಲಿ ನೀಡಿ, ಇತರೆ ಮುಖ ಬೆಲೆಯ ನೋಟುಗಳನ್ನು ಪಡೆಯಬಹುದು ಎಂಬುದಾಗಿ ತಿಳಿಸಿದೆ. 2000 ಮುಖಬೆಲೆಯ ನೋಟುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆ ಮಾಡುವುದನ್ನು

ಇಂದಿನಿಂದ ದೇಶಾದ್ಯಂತ ಬ್ಯಾಂಕ್ ಗಳಲ್ಲಿ ₹. 2000 ನೋಟು ವಿನಿಮಯ ಅವಕಾಶ Read More »

ಸಿಡ್ನಿ: ಮೋದಿ ಸಮ್ಮುಖದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ ಮಂಗಳೂರಿನ ಅನಿಶಾ

ಸಮಗ್ರ ನ್ಯೂಸ್: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಅಂಧೋನಿ ಅಲ್ಪನೀಸ್ ಸಮ್ಮುಖದಲ್ಲಿ ನೃತ್ಯ ಪ್ರದರ್ಶನ ನೀಡುವ ಅಪರೂಪದ ಅವಕಾಶ ಮಂಗಳೂರು ಮೂಲದ ಯುವತಿ ಅನಿಶಾ ಪೂಜಾರಿ ಅವರಿಗೆ ಒಲಿದಿದೆ. ಮೋದಿ ಆಸ್ಟ್ರೇಲಿಯ ಭೇಟಿ ಸಂದರ್ಭ ಮೇ 23ರಂದು ಆಸೀಸ್ ಪ್ರಧಾನಿ ಜೊತೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ನಂತರ ಸಮುದಾಯ ಸ್ವಾಗತ ಸಂದರ್ಭ ಅನಿಶಾ ಅವರು ಇರುವ `ನಾಟ್ಯೋಕ್ತಿ’ ನೃತ್ಯ ತಂಡ ತುಳು ಜಾನಪದ ಮತ್ತು ಕಾಂತಾರ ಚಿತ್ರಗೀತೆಗಳಿಗೆ ನೃತ್ಯ ಪ್ರದರ್ಶನ

ಸಿಡ್ನಿ: ಮೋದಿ ಸಮ್ಮುಖದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ ಮಂಗಳೂರಿನ ಅನಿಶಾ Read More »

ಮಂಗಳೂರು ವಿವಿ ಸ್ನಾತಕೋತ್ತರ ಅಧ್ಯಯನ ವಿಭಾಗದಿಂದ ‘ಗಿರಿಜನರ ಜೊತೆ ಒಡನಾಟ’ ಶಿಬಿರ

ಸಮಗ್ರ ನ್ಯೂಸ್: ಮಂಗಳೂರು ವಿಶ್ವವಿದ್ಯಾನಿಲಯ ಸ್ನಾನತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮಂಗಳ ಗಂಗೋತ್ರಿ, ಕೊಣಾಜೆ ಇದರ ಆಶ್ರಯದಲ್ಲಿ ಗಡಿನಾಡ ಗಿರಿಜನರ ಜೊತೆ ಒಡನಾಟದ ಪಯಣ ಶಿಬಿರವು ದಿನಾಂಕ 20 ಮೆ 2023 ರಿಂದ 26 ಮೇ 2023ರವರೆಗೆ ನಡೆಯಲಿದ್ದು, ಈ ಶಿಬಿರದ ಉದ್ಘಾಟನಾ ಕಾರ್ಯಕ್ರಮವು 20 ಮೇ 2023 ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಗಿರಿಜನ ಆಶ್ರಮ ಶಾಲೆಯ ಶಿಕ್ಷಕರಾದ ಶೇಖರ್ ಇವರು ಶಿಬಿರದ ಕುರಿತು ಸಲಹೆಗಳನ್ನು ನೀಡುವುದರ ಮೂಲಕ ಕಾರ್ಯಕ್ರಮದ

ಮಂಗಳೂರು ವಿವಿ ಸ್ನಾತಕೋತ್ತರ ಅಧ್ಯಯನ ವಿಭಾಗದಿಂದ ‘ಗಿರಿಜನರ ಜೊತೆ ಒಡನಾಟ’ ಶಿಬಿರ Read More »

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಬ್ಬರ| ಅಪಾರ ಹಾನಿ; 8 ಮಂದಿ ಬಲಿ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಬ್ಬರಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಬೆಳೆ ನಷ್ಟವಾಗಿದ್ದು, ವರುಣಾರ್ಭಟಕ್ಕೆ 8 ಮಂದಿ ಬಲಿಯಾಗಿದ್ದಾರೆ. ಅಕಾಲಿಕ ಮಳೆಗೆ ರಾಜ್ಯದಲ್ಲೇ ಅತಿಹೆಚ್ಚು ಬೆಳೆ ನಷ್ಟ ಕೋಲಾರದಲ್ಲಿ ಆಗಿದ್ದು, 7,166 ಎಕರೆ ಬೆಳೆಹಾನಿಯಾಗಿದೆ. ಕೊಪ್ಪಳದಲ್ಲಿ 618 ಕ್ಕೂ ಹೆಚ್ಚು ಎಕರೆ, ದಾವಣಗೆರೆಯಲ್ಲಿ 153 ಎಕರೆ, ಚಿಕ್ಕಬಳ್ಳಾಪುರದಲ್ಲಿ 100 ಎಕರೆ, ಹಾವೇರಿಯಲ್ಲಿ 16 ಎಕರೆ, ಚಿತ್ರದುರ್ಗ 39 ಎಕರೆ, ಹಾವೇರಿಯಲ್ಲಿ 16 ಎಕರೆ ಬೆಳೆ ನಷ್ಟವಾಗಿದೆ. ಮುಂಗಾರು ಪೂರ್ವ ಮಳೆಗೆ ರಾಜ್ಯದಲ್ಲಿ ಮತ್ತೆ

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಬ್ಬರ| ಅಪಾರ ಹಾನಿ; 8 ಮಂದಿ ಬಲಿ Read More »

ಸ್ಪೀಕರ್ ಸ್ಥಾನಕ್ಕೆ ಅಚ್ಚರಿಯ ಆಯ್ಕೆ| ಖಾದರ್ ಗೆ ಒಲಿಯುತ್ತಾ ಸಭಾಧ್ಯಕ್ಷ ಸ್ಥಾನ?

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭೆಯ ನೂತನ ಸ್ಪೀಕರ್ ಹುದ್ದೆಗೆ ಅಚ್ಚರಿಯ ಆಯ್ಕೆಯಾಗಿ ಮಾಜಿ ಸಚಿವ ಯು ಟಿ ಖಾದರ್ ಅವರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ ಎಂದು ತಿಳಿದು ಬಂದಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ರಾಷ್ಟ್ರೀಯ ಪ್ರಧಾನ್ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಖಾದರ್ ಅವರನ್ನು ಕರೆದು ಮಾತನಾಡಿದ್ದು ಅಲ್ಪಸಂಖ್ಯಾತರಿಗೆ ಪ್ರಮುಖ ಹುದ್ದೆ ನೀಡಬೇಕು ಎಂದು ರಾಹುಲ್ ಗಾಂಧಿ ತೀರ್ಮಾನಿಸಿದ್ದು ಸ್ಪೀಕರ್ ರಂತಹ ಪ್ರತಿಷ್ಠಿತ ಹಾಗು ಅತ್ಯಂತ ಜವಾಬ್ದಾರಿಯುತ ಹುದ್ದೆಗೆ ನೀವೇ ಸೂಕ್ತ ಎಂದು

ಸ್ಪೀಕರ್ ಸ್ಥಾನಕ್ಕೆ ಅಚ್ಚರಿಯ ಆಯ್ಕೆ| ಖಾದರ್ ಗೆ ಒಲಿಯುತ್ತಾ ಸಭಾಧ್ಯಕ್ಷ ಸ್ಥಾನ? Read More »

ಸುಳ್ಯ: ಕೊಡಿಯಾಲಬೈಲ್‌ ನಲ್ಲಿ ಪರಿವಾರ ದೈವಗಳ ನೇಮೋತ್ಸವ

ಸಮಗ್ರ ನ್ಯೂಸ್: ಮೇ 22, ಕೊಡಿಯಾಲಬೈಲಿನ ಶ್ರೀ ಮಹಮ್ಮಾಯಿ ಮಾರಿಯಮ್ಮ ದೇವಸ್ಥಾನದಲ್ಲಿ ಪರಿವಾರ ದೈವಗಳ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ನಡೆಯಿತು. ಉಬರಡ್ಕ ಮಿತ್ತೂರು ಗ್ರಾಮದ ಕೊಡಿಯಾಲಬೈಲಿನಲ್ಲಿ ಪರಿವಾರ ದೈವಗಳ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಮೇ 20 ರಿಂದ 22ನೇ ಸೋಮವಾರದ ತನಕ ನಡೆಯಿತು. ಈ ಸಂದರ್ಭದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ, ವಿವಿಧ ತಂಡಗಳಿಂದ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಕ್ತರನ್ನು ಮನರಂಜಿಸಲಾಯಿತು. ಮೇ 21ರ ರಾತ್ರಿ ಶ್ರೀ

ಸುಳ್ಯ: ಕೊಡಿಯಾಲಬೈಲ್‌ ನಲ್ಲಿ ಪರಿವಾರ ದೈವಗಳ ನೇಮೋತ್ಸವ Read More »