May 2023

ಅಥಣಿ:ತಾವಂಶಿ ಗ್ರಾಮದಲ್ಲಿ ಆಲಿಕಲ್ಲು ಸಮೇತವಾಗಿ ಅಬ್ಬರಿಸಿದ ಮಳೆರಾಯ.

ಸಮಗ್ರ ನ್ಯೂಸ್:ಅಥಣಿ ತಾಲೂಕಿನ ಪೂರ್ವ ಹಾಗು ಪಶ್ಚಿಮ ಭಾಗದ ಗ್ರಾಮಗಳಲ್ಲಿ ಮಂಗಳವಾರ ಮಧ್ಯಾಹ್ನ ಬಿರುಗಾಳಿಯೊಂದಿಗೆ ಸುರಿದ ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ದ್ರಾಕ್ಷಿ ಬೆಳೆ ಹಾಗೂ ಮನೆಗಳಿಗೆ ಹಾನಿಯಾಗಿದೆ. ಅಥಣಿ ತಾಲೂಕಿನ ತಾವಂಶಿ ಗ್ರಾಮದಲ್ಲಿ ಗುಡುಗು ಗಾಳಿ ಸಮೇತವಾಗಿ ಆಲಿಕಲ್ಲು ಮಳೆಯಾಗಿ ಮ ಅವಾಂತರವನ್ನ ಸೃಷ್ಟಿಮಾಡಿದೆ ,ತಾಂವಶಿ ಗ್ರಾಮದ ಮುರುಗೆಪ್ಪ ಇಮಗೌಡರ್ ಇವರಿಗೆ ಸೇರಿದ್ದ ದನಗಳ ಕೊಠಡಿಯ ಮೇಲ್ಚಾವಣಿ ಹಾರಿ ಹೋಗಿ ಆಹಾರ ಧಾನ್ಯ ಹಾಗೂ ಗೃಹೋಪಯೋಗಿ ಸಲಕರಣೆಗಳು ಸಂಪೂರ್ಣವಾಗಿ ಹಾಳಾಗಿವೆ. ಕೋಹಳ್ಳಿ‌ ಗ್ರಾಮದ ನೀವಾಸಿಗಳಾದ ಗಂಗವ್ವ […]

ಅಥಣಿ:ತಾವಂಶಿ ಗ್ರಾಮದಲ್ಲಿ ಆಲಿಕಲ್ಲು ಸಮೇತವಾಗಿ ಅಬ್ಬರಿಸಿದ ಮಳೆರಾಯ. Read More »

ವಿಧಾನಸಭೆ ಸ್ಪೀಕರ್ ಆಗಿ ಯು.ಟಿ ಖಾದರ್ ಅವಿರೋಧ ಆಯ್ಕೆ

ಸಮಗ್ರ ನ್ಯೂಸ್: ವಿಧಾನಸಭೆ ಸಭಾಪತಿ ಸ್ಥಾನಕ್ಕೆ ಮಾಜಿ ಸಚಿವ, ಮಂಗಳೂರಿನ ಶಾಸಕ ಯು.ಟಿ ಖಾದರ್ ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಬೆಳಗ್ಗೆ ಯು.ಟಿ ಖಾದರ್ ಅವರು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿಗೆ ಅವರಿಗೆ ನಾಮಪತ್ರ ಸಲ್ಲಿಸಿದ್ದರು. ಖಾದರ್ ಅವರನ್ನು ಹೊರತುಪಡಿಸಿ ಮತ್ತ್ಯಾರೂ ಸ್ಪೀಕರ್‌ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೊದಲಿಗೆ ಯು.ಟಿ ಖಾದರ್ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು. ಅದನ್ನು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಅನುಮೋದಿಸಿದರು. ಬಳಿಕ

ವಿಧಾನಸಭೆ ಸ್ಪೀಕರ್ ಆಗಿ ಯು.ಟಿ ಖಾದರ್ ಅವಿರೋಧ ಆಯ್ಕೆ Read More »

ಯುಪಿಎಸ್ ಸಿ ಫಲಿತಾಂಶ ಪ್ರಕಟ| ರಾಜ್ಯದ 35 ಮಂದಿ ಪಾಸ್| ಎಚ್.ಎಸ್ ಭಾವನಾ ಕರ್ನಾಟಕದ ಟಾಪರ್

ಸಮಗ್ರ ನ್ಯೂಸ್: ಕೇಂದ್ರ ಲೋಕ ಸೇವಾ ಆಯೋಗದ (ಯುಪಿಎಸ್‌ಸಿ) ನಾಗರಿಕ ಸೇವಾ ಪರೀಕ್ಷೆಗಳ 2022ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ 35ಕ್ಕೂ ಅಧಿಕ ಅಭ್ಯರ್ಥಿಗಳು ರ‍್ಯಾಂಕ್‌ ಪಡೆದು ಸಾಧನೆ ಮಾಡಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಐಆರ್‌ಎಸ್‌ ಸೇವೆಯಲ್ಲಿರುವ ರಾಜ್ಯದ ಎಚ್‌.ಎಸ್‌.ಭಾವನಾ 55ನೇ ರ‍್ಯಾಂಕ್‌ ಪಡೆದು ರಾಜ್ಯದ ಟಾಪರ್‌ ಆಗಿದ್ದಾರೆ. ಭಾವನಾ ಅವರು ನಗರದ ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿ ಬಳಿಕ ಯಲಹಂಕದ ವೆಂಕಟೇಶ್ವರ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪೂರ್ಣಗೊಳಿಸಿದ್ದರು. ಐಎಎಸ್‌ ಅಧಿಕಾರಿ ಆಗಬೇಕು ಎಂದು ಯುಪಿಎಸ್‌ಸಿ ಪರೀಕ್ಷೆ

ಯುಪಿಎಸ್ ಸಿ ಫಲಿತಾಂಶ ಪ್ರಕಟ| ರಾಜ್ಯದ 35 ಮಂದಿ ಪಾಸ್| ಎಚ್.ಎಸ್ ಭಾವನಾ ಕರ್ನಾಟಕದ ಟಾಪರ್ Read More »

ಶಾಂತಿನಗರ ತಾ. ಕ್ರೀಡಾಂಗಣ; ಆರಂಭವಾಗದ ತಡೆಗೋಡೆ ಕಾಮಗಾರಿ|ಸ್ಥಳೀಯರಿಗೆ ಈ ಮಳೆಗಾಲದಲ್ಲೂ ಆತಂಕದ ಸ್ಥಿತಿ !

ಸಮಗ್ರ ನ್ಯೂಸ್: ಸುಳ್ಯ ನಗರ ಸಮೀಪದ ಶಾಂತಿನಗರ ತಾಲೂಕು ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿ ಹಿನ್ನಲೆಯಲ್ಲಿ ಮೈದಾನದಲ್ಲಿ ಅಗೆದ ಮಣ್ಣನ್ನು ಕೆಳ ಭಾಗದಲ್ಲಿ ತುಂಬಿಡಲಾಗಿರುವ ಬೃಹತ್ ಪ್ರಮಾಣದ ಮಣ್ಣಿನ ರಾಶಿಯಲ್ಲಿ ಬಿರುಕು ಉಂಟಾಗಿ ಕುಸಿತ ಆರಂಭಗೊಂಡಿದೆ, ಕುಸಿಯದಂತೆ ತಡೆಗೋಡೆ ನಿರ್ಮಾಣ ಇನ್ನೂ ನಡೆಯದೇ ಇರುವುದರಿಂದ ಸ್ಥಳೀಯ ನಿವಾಸಿಗಳಲ್ಲಿ ಮಳೆಗಾಲದ ಆರಂಭದಲ್ಲೇ ಆತಂಕದ ಭೀತಿ ಎದುರಾಗಿದೆ. ಸುಳ್ಯದ ಶಾಂತಿನಗರದ ತಾಲೂಕು ಕ್ರೀಡಾಂಗಣವನ್ನು ಅಭಿವೃದ್ಧಿ ಮಾಡಲು ಸಮತಟ್ಟು ಮಾಡುವ ಸಂದರ್ಭದಲ್ಲಿ ತೆಗೆಯಲಾದ ಮಣ್ಣನ್ನು ಕ್ರೀಡಾಂಗಣದ ಕೆಳ ಭಾಗದಲ್ಲಿರುವ ಪ್ರದೇಶದಲ್ಲಿ ಸುರಿಯಲಾಗಿದೆ. ಕಳೆದ

ಶಾಂತಿನಗರ ತಾ. ಕ್ರೀಡಾಂಗಣ; ಆರಂಭವಾಗದ ತಡೆಗೋಡೆ ಕಾಮಗಾರಿ|ಸ್ಥಳೀಯರಿಗೆ ಈ ಮಳೆಗಾಲದಲ್ಲೂ ಆತಂಕದ ಸ್ಥಿತಿ ! Read More »

ರಾಜ್ಯದಲ್ಲಿ ಮಳೆ ಅನಾಹುತಕ್ಕೆ ಎರಡು ಬಲಿ; ಹಲವೆಡೆ ಅವಘಡ| ಇನ್ನೂ ಮೂರು ದಿನ ಮಳೆ ಜೋರು

ಸಮಗ್ರ ನ್ಯೂಸ್: ರಾಜ್ಯದಲ್ಲಿ ಇನ್ನೂ 3 ದಿನ ಮಳೆ ಮುನ್ಸೂಚನೆ ಇದ್ದು, ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಬೆನ್ನಲ್ಲೇ ಜಿಲ್ಲಾಡಳಿತಗಳಿಗೆ ಎಚ್ಚರದಿಂದ ಇರಲು ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಒಳನಾಡಿನ ಕೆಲವು ಕಡೆ ಅಧಿಕ ಮಳೆಯಾಗಲಿದೆ. ಗಾಳಿಯ ವೇಗವು ಗಂಟೆಗೆ 40 ಕಿ.ಮೀ ರಿಂದ 50 ಕಿ.ಮೀ ಇರುವ ಸಾಧ್ಯತೆ ಇದೆ. ಬೆಂಗಳೂರು ಸೇರಿ ರಾಜ್ಯದ ಏಳು ಜಿಲ್ಲೆಗಳಲ್ಲಿ ಮಂಗಳವಾರವೂ ಕೆಲಕಾಲ

ರಾಜ್ಯದಲ್ಲಿ ಮಳೆ ಅನಾಹುತಕ್ಕೆ ಎರಡು ಬಲಿ; ಹಲವೆಡೆ ಅವಘಡ| ಇನ್ನೂ ಮೂರು ದಿನ ಮಳೆ ಜೋರು Read More »

ಸಚಿವ ಸಂಪುಟ ಸರ್ಕಸ್| ಹೈಕಮಾಂಡ್ ಜೊತೆ ಚರ್ಚೆಗೆ ಸಿಎಂ, ಡಿಸಿಎಂ ಇಂದು ದೆಹಲಿಗೆ

ಸಮಗ್ರ ನ್ಯೂಸ್: ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ 8 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದು, ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಇಂದು ಹೈಕಮಾಂಡ್ ಜೊತೆ ಚರ್ಚೆ ನಡೆಸಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಂಜೆ 6:30ಕ್ಕೆ ವಿಶೇಷ ವಿಮಾನದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಂಪುಟ ವಿಸ್ತರಣೆಯ ಸಂಬಂಧ ಹೈಕಮಾಂಡ್ ನಾಯಕರ ಜೊತೆಗೆ ಚರ್ಚೆ ನಡೆಸಲಿದ್ದಾರೆ. ಸಂಪುಟ ವಿಸ್ತರಣೆ ಕುರಿತಾಗಿ ಒಪ್ಪಿಗೆ ಪಡೆದುಕೊಳ್ಳಲಿದ್ದಾರೆ. ಮಧು ಬಂಗಾರಪ್ಪ, ಬಿ.ಕೆ. ಹರಿಪ್ರಸಾದ್, ಕೃಷ್ಣ ಬೈರೇಗೌಡ,

ಸಚಿವ ಸಂಪುಟ ಸರ್ಕಸ್| ಹೈಕಮಾಂಡ್ ಜೊತೆ ಚರ್ಚೆಗೆ ಸಿಎಂ, ಡಿಸಿಎಂ ಇಂದು ದೆಹಲಿಗೆ Read More »

ಕೃಷಿ ಪಂಪ್ ಸೆಟ್ ಗಳ ಆರ್.ಆರ್ ನಂಬರ್ ಗೆ ರೈತರ ಆಧಾರ್ ಜೋಡಣೆ ಮಾಡಲು ಸರ್ಕಾರಕ್ಕೆ ಕೆಇಆರ್ ಸಿ ಸೂಚನೆ

ಸಮಗ್ರ ನ್ಯೂಸ್: ಕೃಷಿ ಪಂಪ್‌ಸೆಟ್‌ಗಳ ಆರ್‌.ಆರ್‌. ನಂಬರ್‌ ಅನ್ನು ಆಧಾರ್‌ ಸಂಖ್ಯೆಯೊಂದಿಗೆ ಜೋಡಣೆ ಮಾಡುವಂತೆ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಸರ್ಕಾರಕ್ಕೆ ಸೂಚಿಸಿದೆ. ಈ ಸೂಚನೆಯಿಂದ ಮುಂಬರುವ ದಿನಗಳಲ್ಲಿ ಮೀಟರ್‌ ಅಳವಡಿಕೆಯ ಸಾಧ್ಯತೆಯ ಮೊದಲ ಹಂತ ಎಂಬುದು ರೈತರ ಆತಂಕಕ್ಕೆ ಕಾರಣವಾಗಿದೆ ಸದ್ಯಕ್ಕೆ ಯಾವುದೇ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಕೆ ಇಲ್ಲ. ಎಷ್ಟು ಪ್ರಮಾಣದ ವಿದ್ಯುತ್‌ ಪೂರೈಕೆ ಆಗುತ್ತಿದೆ ಎಂಬ ನಿಖರ ಲೆಕ್ಕವೂ ಇಲ್ಲ. ಆದರೆ ದಶಕ ಗಳಿಂದ ಒಟ್ಟಾರೆ ಬಳಕೆಯ ಶೇ.34ರಷ್ಟು ವಿದ್ಯುತ್‌ ಪಂಪ್‌ಸೆಟ್‌ಗಳಿಗೆ ಹೋಗುತ್ತಿದೆ.

ಕೃಷಿ ಪಂಪ್ ಸೆಟ್ ಗಳ ಆರ್.ಆರ್ ನಂಬರ್ ಗೆ ರೈತರ ಆಧಾರ್ ಜೋಡಣೆ ಮಾಡಲು ಸರ್ಕಾರಕ್ಕೆ ಕೆಇಆರ್ ಸಿ ಸೂಚನೆ Read More »

ಪುತ್ತೂರು: ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಹಿಂದೂ ಕಾರ್ಯಕರ್ತನ ಕಿವಿ ತಮಟೆ ಡ್ಯಾಮೇಜ್| ಗಂಭೀರ ಸ್ವರೂಪ ಪಡೆದ ಪ್ರಕರಣ

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಸುದ್ದಿ ಮಾಡಿದ ಪುತ್ತೂರು ಹಿಂದೂ ಕಾರ್ಯಕರ್ತರ ಮೇಲೆ ಪೋಲೀಸರ ದೌರ್ಜನ್ಯಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದ್ದು, ದೌರ್ಜನ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಹಿಂದೂ ಕಾರ್ಯಕರ್ತನ ಕಿವಿಯ ತಮಟೆ ಹರಿದು ಹೋಗಿದ್ದಾಗಿ ಸ್ಕ್ಯಾನಿಂಗ್ ರಿಪೋರ್ಟ್‌ನಲ್ಲಿ ಉಲ್ಲೇಖಗೊಂಡಿದೆ. ಇದರಿಂದ ಪ್ರಕರಣ ಮತ್ತಷ್ಟು ಗಂಭೀರತೆಯನ್ನು ಪಡೆದುಕೊಂಡಿದೆ. ವಿಷಯ ತಿಳಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಎಸ್ಪಿ ಭೇಟಿಯಾಗಿ ಡಿವೈಎಸ್ಪಿಯನ್ನು ಅಮಾನತುಗೊಳಿಸಿ ಐದು ಲಕ್ಷ ಪರಿಹಾರ ನೀಡದಿದ್ದಲ್ಲಿ ತೀವ್ರ ಸ್ವರೂಪದ ಹೋರಾಟದ ಎಚ್ಚರಿಕೆ ನೀಡಿದ್ದಾರೆಂದು ತಿಳಿದು ಬಂದಿದೆ. ಬಿಜೆಪಿ ನಾಯಕರಾದ

ಪುತ್ತೂರು: ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಹಿಂದೂ ಕಾರ್ಯಕರ್ತನ ಕಿವಿ ತಮಟೆ ಡ್ಯಾಮೇಜ್| ಗಂಭೀರ ಸ್ವರೂಪ ಪಡೆದ ಪ್ರಕರಣ Read More »

ಸುಳ್ಯ: ಸಾರಿಗೆ ಬಸ್ ಗೆ ಗುದ್ದಿ ಲಾರಿ ಡ್ರೈವರ್ ಪರಾರಿ

ಸಮಗ್ರ ನ್ಯೂಸ್: ರಾಜ್ಯ ರಸ್ತೆ ಸಾರಿಗೆ ಬಸ್ ಗೆ ಲಾರಿಯೊಂದು ಹಿಂದಿನಿಂದ ಬಂದು ಗುದ್ದಿದ್ದು ಲಾರಿ ಡ್ರೈವರ್ ಪರಾರಿಯಾದ ಘಟನೆ ಮಾಣಿ ಮೈಸೂರು ಹೆದ್ದಾರಿಯ ಸುಳ್ಯ ಸಮೀಪದ ಪರಿವಾರಕಾನ ಬಳಿ ನಡೆದಿದೆ. ಸುಳ್ಯದಿಂದ ಕೊಯನಾಡಿಗೆ ತೆರಳುತ್ತಿದ್ದ ಬಸ್ ಗೆ ಅದರ ಹಿಂದಿನಿಂದ ವೇಗವಾಗಿ ಬಂದ ಲಾರಿ(KA 51 AH 9126) ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬಸ್ ನ ಹಿಂಭಾಗ ಜಖಂಗೊಂಡಿದ್ದು, ಲಾರಿ ಚಾಲಕ ಹೆದರಿ ಪರಾರಿಯಾಗಿದ್ದಾನೆ. ಸುಳ್ಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುಳ್ಯ: ಸಾರಿಗೆ ಬಸ್ ಗೆ ಗುದ್ದಿ ಲಾರಿ ಡ್ರೈವರ್ ಪರಾರಿ Read More »

ಸುಳ್ಯ:ಸ್ಕೂಟಿ ಮತ್ತು ಕಾರು ನಡುವೆ ಭೀಕರ ಅಪಘಾತ; ಸವಾರ ಸ್ಥಳದಲ್ಲೇ ಸಾವು

ಸಮಗ್ರ ನ್ಯೂಸ್: ಸ್ಕೂಟಿ‌ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾಣಿ-ಮೈಸೂರು ರಾ.ಹೆದ್ದಾರಿಯ ಅರಂತೋಡು ಮರ್ಕಂಜ ಕ್ರಾಸ್ ಬಳಿ ನಡೆದಿದೆ. ಮೃತಪಟ್ಟ ಸ್ಕೂಟಿ ಸವಾರನನ್ನು ಸುಳ್ಯದ ಕುಕ್ಕುಜಡ್ಕ ಮೂಲದ ನವೀನ್(30) ಎಂದು ಹೇಳಲಾಗಿದೆ. ಕಾರು ಮಂಡ್ಯ ಮೂಲದ್ದಾಗಿದ್ದು ಮಡಿಕೇರಿಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿತ್ತು.ಈ ವೇಳೆ ಅರಂತೋಡು ಮರ್ಕಂಜ ಕ್ರಾಸ್ ಬಳಿ ಕಲ್ಲುಗುಂಡಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಘಟನೆ ಪರಿಣಾಮ ಸ್ಕೂಟಿ ನಜ್ಜುಗುಜ್ಜಾಗಿದ್ದು ಸವಾರ ಸ್ಥಳದಲ್ಲಿ

ಸುಳ್ಯ:ಸ್ಕೂಟಿ ಮತ್ತು ಕಾರು ನಡುವೆ ಭೀಕರ ಅಪಘಾತ; ಸವಾರ ಸ್ಥಳದಲ್ಲೇ ಸಾವು Read More »