May 2023

‘ಮುಸ್ಲಿಂ ಓಟು ಬೇಡ ಎನ್ನುವವರೇ ಅವರ ಜೊತೆ ತೆರೆಮರೆಯಲ್ಲಿ ವ್ಯವಹಾರ ಕುದುರಿಸುತ್ತಾರೆ, ಇದೇನಾ ಹಿಂದುತ್ವ?’ | ಶಾಸಕ ಹರೀಶ್ ಪೂಂಜಾರ ವಿರುದ್ದ ಕಿಡಿಕಾರಿದ ಸತ್ಯಜಿತ್ ಸುರತ್ಕಲ್

ಸಮಗ್ರ ನ್ಯೈಸ್: ‘ಕಾಂಗ್ರೆಸ್ ಪರ ಪ್ರಚಾರ ನಡೆಸುವ ಯಾವ ಅಗತ್ಯ ನನಗಿಲ್ಲ. ಹಾಗಿದ್ದಲ್ಲಿ ನಾನು ಕಾಂಗ್ರೆಸ್ ಪಕ್ಷದಿಂದಲೇ ಚುನಾವಣೆಗೆ ಸ್ಪರ್ಧಿಸುತ್ತಿದ್ದೆ’ ಎಂದು ಹಿಂದು ಮುಖಂಡ ಸತ್ಯಜಿತ್‌ ಸುರತ್ಕಲ್‌ ಹೇಳಿದ್ದಾರೆ.ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾರೆ ಎಂದಿದ್ದಾರೆ. ನನ್ನನ್ನ ‘ಅಣ್ಣಾ’ ಎಂದು ಪೂಂಜ ಸಂಬೋಧನೆ ಮಾಡಿದ್ದಾರೆ. ಆ ರೀತಿಯ ಸಂಬಂಧ ಹರೀಶ್ ಪೂಂಜ ನನ್ನ ಜೊತೆ ಇಟ್ಟು ಕೊಂಡಿದ್ದಾರಾ?. 2018ರಲ್ಲಿ ಬಿಜೆಪಿ ಟಿಕೆಟ್ ಸಿಗುವ ಮೊದಲು ಸೀಟ್ ನನಗೆ ಸಿಗಬಹುದಾ ಯಾರ ಹತ್ತಿರ ಮಾತನಾಡಬಹುದು ಅಂತ ದಿನಕ್ಕೆರಡು ಬಾರಿ ಕೇಳುತ್ತಿದ್ದರು. […]

‘ಮುಸ್ಲಿಂ ಓಟು ಬೇಡ ಎನ್ನುವವರೇ ಅವರ ಜೊತೆ ತೆರೆಮರೆಯಲ್ಲಿ ವ್ಯವಹಾರ ಕುದುರಿಸುತ್ತಾರೆ, ಇದೇನಾ ಹಿಂದುತ್ವ?’ | ಶಾಸಕ ಹರೀಶ್ ಪೂಂಜಾರ ವಿರುದ್ದ ಕಿಡಿಕಾರಿದ ಸತ್ಯಜಿತ್ ಸುರತ್ಕಲ್ Read More »

ಬೆಳ್ತಂಗಡಿಯ ಗಡಾಯಿಕಲ್ಲಿಗೆ ಸಿಡಿಲಾಘಾತ| ಸ್ಥಳ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಐತಿಹಾಸಿಕ ಪ್ರೇಕ್ಷಣೀಯ ಸ್ಥಳವಾದ ಗಡಾಯಿಕಲ್ಲಿನಲ್ಲಿ ಸಿಡಿಲು ಬಡಿದು ಬೆಂಕಿ ಉಂಟಾದ ಘಟನೆ ಮಂಗಳವಾರ ನಡೆದಿದ್ದು ಈ ಬಗ್ಗೆ ಬೆಳ್ತಂಗಡಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದಿಂದ ಬುಧವಾರ ಪರಿಶೀಲನೆ ನಡೆಸಲಾಯಿತು. ಆರ್‌ ಎಫ್‌ ಒ ಸ್ವಾತಿ, ಅವರ ನಿರ್ದೇಶನದಂತೆ ಡಿ ಆರ್ ಎಫ್ ಓ ಕಿರಣ್ ಪಾಟೀಲ್, ಗಸ್ತು ಪಾಲಕರಾದ ಹೇಮಂತ್ ಹಾಗೂ ರಾಘವೇಂದ್ರ ಗಡಾಯಿಕಲ್ಲಿಗೆ ತೆರಳಿ ಪರಿಶೀಲನೆ ನಡೆಸಿದರು. ಮಂಗಳವಾರ ಬೆಂಕಿ ಉಂಟಾದ ತಕ್ಷಣ ಪರಿಶೀಲನೆ ನಡೆಸಲಾಗಿದ್ದರು ಕತ್ತಲು

ಬೆಳ್ತಂಗಡಿಯ ಗಡಾಯಿಕಲ್ಲಿಗೆ ಸಿಡಿಲಾಘಾತ| ಸ್ಥಳ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ Read More »

ಇಂದಿರಾ ಕ್ಯಾಂಟೀನ್ ಗೆ ಮರುಜೀವ| ಊಟ-ಉಪಹಾರಕ್ಕೆ ಕೊಂಚ ದರ ಏರಿಸಲು ನಿರ್ಧಾರ

ಸಮಗ್ರ ನ್ಯೂಸ್: ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಬಡ ಜನರಿಗೆ ಹಸಿವು ನೀಗಿಸುವ ಕಡಿಮೆ ದರದಲ್ಲಿ ಊಟ, ತಿಂಡಿ ಒದಗಿಸುವಂತ ಇಂದಿರಾ ಕ್ಯಾಂಟೀನ್ ಗಳಿಗೆ ಅನುದಾನ ಒದಗಿಸದೇ ಅಲ್ಲಲ್ಲಿ ಮುಚ್ಚುವಂತೆ ಆಗಿತ್ತು. ಈಗ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತ್ರ, ಮತ್ತೆ ಇಂದಿರಾ ಕ್ಯಾಂಟೀನ್ ಗಳಿಗೆ ಜೀವ ತುಂಬುವ ಕೆಲಸವನ್ನು ಮಾಡಲಾಗಿದೆ. ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಟ್ವಿಟ್ ಮಾಡಿ ಮಾಹಿತಿ ನೀಡಿದ್ದರು. ನಗರ-ಪಟ್ಟಣಗಳಲ್ಲಿರುವ ಮತ್ತು ಕಾರ್ಯನಿಮಿತ್ತ ನಗರಗಳಿಗೆ ಬರುವ ಬಡವರ ಹಸಿವು ತಣಿಸುವ

ಇಂದಿರಾ ಕ್ಯಾಂಟೀನ್ ಗೆ ಮರುಜೀವ| ಊಟ-ಉಪಹಾರಕ್ಕೆ ಕೊಂಚ ದರ ಏರಿಸಲು ನಿರ್ಧಾರ Read More »

ಉಚಿತ ಭರವಸೆ ಕೊಟ್ಟು ಅಧಿಕಾರ ಹಿಡಿದ ಕಾಂಗ್ರೆಸ್ ನ ನಿಜಬಣ್ಣ ಬಯಲಾಗ್ತಿದೆ – ಹೆಚ್.ಡಿ. ಕುಮಾರಸ್ವಾಮಿ

ಸಮಗ್ರ ನ್ಯೂಸ್: ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ನೈಜಬಣ್ಣ ಒಂದು ವಾರದಲ್ಲಿಯೇ ಬಯಲಿಗೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದರು. ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮೊದಲ ಸಂಪುಟ ಸಭೆಯಲ್ಲಿಯೇ ಗ್ಯಾರಂಟಿಗಳನ್ನು ಜಾರಿಗೆ ತಂದೇ ತರುತ್ತೇವೆ ಎಂದು ಹೇಳಿದ್ದ ಈಗಿನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಈಗ ವರಸೆ ಬದಲಿಸಿ, ಷರತ್ತುಗಳು ಅನ್ವಯ ಆಗುತ್ತವೆ ಎನ್ನುತ್ತಿದ್ದಾರೆ! ಇದ್ಯಾವ ನ್ಯಾಯ? ಎಂದು ಪ್ರಶ್ನಿಸಿದರು. ಗ್ಯಾರಂಟಿಗಳ ಭರವಸೆ ನೀಡಿದ್ದೀರಿ. ಜಾರಿ ಮಾಡಿ ಎಂದು ಜನರು

ಉಚಿತ ಭರವಸೆ ಕೊಟ್ಟು ಅಧಿಕಾರ ಹಿಡಿದ ಕಾಂಗ್ರೆಸ್ ನ ನಿಜಬಣ್ಣ ಬಯಲಾಗ್ತಿದೆ – ಹೆಚ್.ಡಿ. ಕುಮಾರಸ್ವಾಮಿ Read More »

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ.ಎಂ ಇಬ್ರಾಹಿಂ ರಾಜೀನಾಮೆ

ಸಮಗ್ರ ನ್ಯೂಸ್: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಎಂ ಇಬ್ರಾಹಿಂ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಬಳಿಕ ದೇವೇಗೌಡರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸೋಲಿನ ಹೊಣೆ ನಾನು ಹೊರುತ್ತೇನೆ. ಹೀಗಾಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೇನೆ. ದೇವೇಗೌಡರಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ.ಎಂ ಇಬ್ರಾಹಿಂ ರಾಜೀನಾಮೆ Read More »

ಬಂಟ್ವಾಳದ ಮಾಣಿಯಲ್ಲಿ ಝಳಪಿಸಿದ್ದು ತಲವಾರಲ್ಲ ಕಟ್ಟಿಗೆ| ಪೊಲೀಸರು ಹೇಳಿದ್ದಿಷ್ಟು…

ಸಮಗ್ರ ನ್ಯೂಸ್: ಭಜರಂಗದಳ, ಬಿಜೆಪಿ ಕಾರ್ಯಕರ್ತರ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾಣಿಯಲ್ಲಿ ಜಗಳ ನಡೆದಿದ್ದು, ಈ ಘಟನೆಯಲ್ಲಿ ತಲವಾರು ದಾಳಿಯಾಗಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ. ಮಾಣಿಯಲ್ಲಿ ನಡೆದ ಪ್ರಕರಣದಲ್ಲಿ ತಲವಾರಿನಿಂದ ಹಲ್ಲೆ ನಡೆಸಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದು, ಸದರಿ ಗಲಾಟೆಯಲ್ಲಿ ಕಟ್ಟಿಗೆಯಿಂದ ಹಲ್ಲೆ ನಡೆಸಿರುವುದಾಗಿದೆ. ಪ್ರಸ್ತುತ ತನಿಖೆ ಪ್ರಗತಿಯಲ್ಲಿದ್ದು, ಹೆಚ್ಚಿನ ಮಾಹಿತಿ ನೀಡಲಾಗುವುದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಲ್ವಾರ್ ನಿಂದ ಹಲ್ಲೆ ಅಂತ ಸುದ್ದಿ ಹಾಕಲಾಗಿದೆ. ದಯವಿಟ್ಟು ಅದನ್ನು ಸರಿಪಡಿಸಿ, ಕಟ್ಟಿಗೆಯಿಂದ ಹಲ್ಲೆ

ಬಂಟ್ವಾಳದ ಮಾಣಿಯಲ್ಲಿ ಝಳಪಿಸಿದ್ದು ತಲವಾರಲ್ಲ ಕಟ್ಟಿಗೆ| ಪೊಲೀಸರು ಹೇಳಿದ್ದಿಷ್ಟು… Read More »

ಕರಾವಳಿಯಲ್ಲಿ ಮತ್ತೆ ಝಳಪಿಸಿದ ತಲವಾರ್| ಬಂಟ್ವಾಳದ ಮಾಣಿ ಬಳಿ ಭಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಅಪರಿಚಿತ ಗುಂಪೊಂದರಿಂದ ತಲಾವಾರು ದಾಳಿ ನಡೆದಿದೆ. ಭಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಭಯಾನಕ ತಲ್ವಾರ್ ದಾಳಿ ನಡೆದಿದ್ದು ಕರಾವಳಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಬಜರಂಗದಳ ಪೆರಾಜೆ ಸಂಚಾಲಕ ಮಹೇಂದ್ರ ಮೇಲೆ ಮತ್ತು ಪ್ರಶಾಂತ್ ನಾಯಕ್ ಎಂಬವರ ಹಲ್ಲೆ ನಡೆದಿದೆ. ಈ ಹುಡುಗರು ಕೆಲಸ ಮುಗಿಸಿ ಮನೆಗೆ ಹೋಗುತ್ತಾ ಇರುವಾಗ ಅಟ್ಯಾಕ್ ನಡೆದಿದೆ. ಮೊದಲು ಇವರು ಸಾಗುತ್ತಿದ್ದ ವಾಹನಕ್ಕೆ ಓಮ್ನಿ ಗಾಡಿಯಲ್ಲಿ ಡಿಕ್ಕಿ

ಕರಾವಳಿಯಲ್ಲಿ ಮತ್ತೆ ಝಳಪಿಸಿದ ತಲವಾರ್| ಬಂಟ್ವಾಳದ ಮಾಣಿ ಬಳಿ ಭಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ Read More »

ಕರಾವಳಿಯಲ್ಲಿ ಖಾಸಗಿ ಬಸ್ ಸೇವೆಗೆ ನಿಷೇಧದ ತೂಗುಗತ್ತಿ| ಕೋಮು ಸಾಮರಸ್ಯ ಕದಡಲು ಖಾಸಗಿ ಬಸ್ ಸಿಬ್ಬಂದಿ ಕಾರಣವಂತೆ!! ಹಿಂದುತ್ವದ ಪ್ಯಾಕ್ಟರಿಗೆ ‘ಕೈ’ ಹಾಕಿದ ಸರ್ಕಾರ?

ಸಮಗ್ರ ನ್ಯೂಸ್: ಮಂಗಳೂರು ನಗರ ಸೇರಿದಂತೆ ದಕ್ಷಿಣ ಜಿಲ್ಲೆಯಲ್ಲಿ ಖಾಸಗಿ ಬಸ್ ಸೇವೆ ಬಂದ್ ಮಾಡಿ ಸರಕಾರಿ ಬಸ್ ಸೇವೆಗೆ ಮಾತ್ರ ಅವಕಾಶ ನೀಡುವ ಕುರಿತು ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್ ಸರಕಾರದಲ್ಲಿ ಚಿಂತನೆ ನಡೆದಿದೆ. ಕರಾವಳಿಯಲ್ಲಿ ಹರಡುತ್ತಿರುವ ಕೋಮುವಾದವನ್ನು ಮಟ್ಟಹಾಕುವ ಉದ್ದೇಶದಿಂದಲೇ ಖಾಸಗಿ ಬಸ್ ಸೇವೆ ರದ್ದು ಮಾಡಲು ಸರಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಕರಾವಳಿಯಲ್ಲಿ ಕೋಮುವಾದ ಬೆಳೆಯುವಲ್ಲಿ ಖಾಸಗಿ ಬಸ್ ವಲಯದ ಪಾತ್ರ ಇರುವುದು ಮತ್ತು ಕರಾವಳಿಯ ಖಾಸಗಿ ಬಸ್ ಮಾಫಿಯಾದ ಕಪಿಮುಷ್ಠಿ ದಿನದಿಂದ ದಿನಕ್ಕೆ

ಕರಾವಳಿಯಲ್ಲಿ ಖಾಸಗಿ ಬಸ್ ಸೇವೆಗೆ ನಿಷೇಧದ ತೂಗುಗತ್ತಿ| ಕೋಮು ಸಾಮರಸ್ಯ ಕದಡಲು ಖಾಸಗಿ ಬಸ್ ಸಿಬ್ಬಂದಿ ಕಾರಣವಂತೆ!! ಹಿಂದುತ್ವದ ಪ್ಯಾಕ್ಟರಿಗೆ ‘ಕೈ’ ಹಾಕಿದ ಸರ್ಕಾರ? Read More »

ಧರ್ಮಸ್ಥಳ: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕೆಎಸ್ಆರ್ ಟಸಿ ಚಾಲಕ ಚಿಕಿತ್ಸೆ ಫಲಿಸದೇ ಸಾವು

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಸೇತುವೆ ಸಮೀಪ ಬೈಕ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಡಬ ತಾಲೂಕಿನ ಕೊಣಾಲು ಗ್ರಾಮದ ಕೋಲ್ಪೆ ನಿವಾಸಿ, ಅಶೋಕ್ (38ವ.) ಅವರು ಮೇ 24ರಂದು ಮೃತ ಪಟ್ಟಿದ್ದಾರೆ. ಮೃತ ಬೈಕ್ ಸವಾರ ಅಶೋಕ್ ಅವರು ಕೆಎಸ್ ಆರ್ ಟಿಸಿ ಬಸ್ಸಿನ ಚಾಲಕನಾಗಿದ್ದು ಕರ್ತವ್ಯ ಮುಗಿಸಿ ಬೈಕ್ ನಲ್ಲಿ ಧರ್ಮಸ್ಥಳದಿಂದ ಉಪ್ಪಾರಪಳಿಕೆ ಮಾರ್ಗವಾಗಿ ಮನೆಗೆ ಬರುತ್ತಿದ್ದ ವೇಳೆ

ಧರ್ಮಸ್ಥಳ: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕೆಎಸ್ಆರ್ ಟಸಿ ಚಾಲಕ ಚಿಕಿತ್ಸೆ ಫಲಿಸದೇ ಸಾವು Read More »

ಸಿದ್ದರಾಮಯ್ಯ ವಿರುದ್ದ ವಿವಾದಾತ್ಮಕ ಹೇಳಿಕೆ| ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ದ ದೂರು ದಾಖಲು

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು ದಾಖಲಾಗಿದೆ. ಈ ಸಂಬಂಧ ಪುತ್ತೂರು ನಗರಸಭಾ ಸದಸ್ಯ ಮೊಹಮ್ಮದ್ ರಿಯಾಝ್ ಅವರು ಪುತ್ತೂರು ನಗರ ಠಾಣೆಯಲ್ಲಿ ಹರೀಶ್ ಪೂಂಜಾ ವಿರುದ್ಧ ದೂರು ದಾಖಲಿಸಿದ್ದಾರೆ. ಸಿದ್ದರಾಮಯ್ಯ 24 ಹಿಂದೂ ಕಾರ್ಯಕರ್ತರನ್ನ ಹತ್ಯೆ ಮಾಡಿದ್ದಾರೆ ಎಂದು ಹರೀಶ್ ಪೂಂಜಾ ಅವರು ಸುಳ್ಳು ಆರೋಪ ಮಾಡಿದ್ದು,

ಸಿದ್ದರಾಮಯ್ಯ ವಿರುದ್ದ ವಿವಾದಾತ್ಮಕ ಹೇಳಿಕೆ| ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ದ ದೂರು ದಾಖಲು Read More »