May 2023

₹700 ಕ್ಕೆ ಅನ್ಲಿಮಿಟೆಡ್ ಕರೆ ಇರುವಾಗ 20 ಸಾವಿರ ದೂರವಾಣಿ ಭತ್ಯೆ ಯಾಕೆ? ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸಿಎಂ ಸಾಹೇಬ್ರೇ..!

ಸಮಗ್ರ ನ್ಯೂಸ್: ಕರ್ನಾಟಕದ ಶಾಸಕರಿಗೆ ಪ್ರತಿ ತಿಂಗಳು ದೂರವಾಣಿ ಭತ್ಯೆ ಎಂದು 20 ಸಾವಿರ ರುಪಾಯಿ ಕೊಡುತ್ತಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಅಶೋಕ್ ಕೆ ಎನ್ನುವರು ಟ್ವೀಟ್ ಮಾಡಿದ್ದು, “ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ, 700 ರೂಪಾಯಿ ರಿಚಾರ್ಜ್ ಮಾಡಿಸಿದರೆ ಎರಡು ತಿಂಗಳು ಪ್ರತಿದಿನ 3 ಜಿಬಿ ಡಾಟಾ ದೊಂದಿಗೆ ಹಗಲು ರಾತ್ರಿ ಮಾತನಾಡಿದರು ಖಾಲಿಯಾಗದ ಔಟ್ ಗೋಯಿಂಗ್ ಇರುವಾಗ ಈ ಶಾಸಕರಿಗ್ಯಾಕೆ ದೂರವಾಣಿ ವೆಚ್ಚ ತಿಂಗಳಿಗೆ 20000? ಅಂಚೆ ವೆಚ್ಚ […]

₹700 ಕ್ಕೆ ಅನ್ಲಿಮಿಟೆಡ್ ಕರೆ ಇರುವಾಗ 20 ಸಾವಿರ ದೂರವಾಣಿ ಭತ್ಯೆ ಯಾಕೆ? ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸಿಎಂ ಸಾಹೇಬ್ರೇ..! Read More »

ಮಂಗಳೂರು: ಡಾ| ರಾಜೇಂದ್ರ ಕುಮಾರ್‌ರಿಗೆ ‘ಮದರ್ ತೆರೇಸಾ ಮೆಮೋರಿಯಲ್ ನ್ಯಾಶನಲ್ ಅವಾರ್ಡ್’

ಸಮಗ್ರ ನ್ಯೂಸ್: ನ್ಯಾಶನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ದಿ. ನ್ಯೂಸ್ ಪೇಪರ್ಸ್ ಅಸೋಸಿಯೇಶನ್ ಆಫ್ ಕರ್ನಾಟಕ ಬೆಂಗಳೂರು ಇದರ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಮದ‌ ತೆರೇಸಾ ಮೆಮೋರಿಯಲ್ ನ್ಯಾಶನಲ್ ಅವಾರ್ಡ್‌’ಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಸಹಕಾರ ರತ್ನ ಡಾ|ಎಂ.ಎನ್. ರಾಜೇಂದ್ರ ಕುಮಾರ್‌ ಆಯ್ಕೆಯಾಗಿದ್ದಾರೆ. ಸಂಘಟಕರ ವತಿಯಿಂದ ಜೂ. 6ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಜರಗಲಿರುವ ಅಂತರ್ ರಾಷ್ಟ್ರೀಯ ದಾದಿಯರ ದಿನಾಚರಣೆ ಸಮಾರಂಭದಲ್ಲಿ

ಮಂಗಳೂರು: ಡಾ| ರಾಜೇಂದ್ರ ಕುಮಾರ್‌ರಿಗೆ ‘ಮದರ್ ತೆರೇಸಾ ಮೆಮೋರಿಯಲ್ ನ್ಯಾಶನಲ್ ಅವಾರ್ಡ್’ Read More »

ಮಂಗಳೂರು: ಹೊಸತಾಗಿ ಆಯ್ಕೆಯಾದ ಶಾಸಕರಿಗೆ ಮೂರು ದಿನಗಳ ಕಾಲ ತರಬೇತಿ – ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್

ಸಮಗ್ರನ್ಯೂಸ್: ಹೊಸತಾಗಿ ಶಾಸಕರಾಗಿ ಆಯ್ಕೆಯಾದ ಯುವಕರಿಗೆ ಮತ್ತು ಹೊಸ ಮುಖಗಳಿಗೆ ಸಭೆಯಲ್ಲಿ ಹೆಚ್ಚು ಅವಕಾಶ ನೀಡಲು ಪ್ರಯತ್ನ ಮಾಡುತ್ತೇನೆ ಎಂದು ನೂತನವಾಗಿ ಆಯ್ಕೆಯಾದ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದರು. ವಿಧಾನಸಭಾ ಸ್ಪೀಕರ್ ಆಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ವಿಧಾನಸಭೆಗೆ ಆಯ್ಕೆಯಾದ ಹೊಸ ಶಾಸಕರಿಗೆ ಮೂರು ದಿನಗಳ ಕಾಲ ತರಬೇತಿ ಆಯೋಜಿಸಲಾಗುವುದು. ಹಲವು ಮಂದಿ ಹೊಸ ಶಾಸಕರು ಈ ಬಾರಿಯ ಸದನದಲ್ಲಿದ್ದಾರೆ. ಸಂಸದೀಯ ವ್ಯವಸ್ಥೆಯಲ್ಲಿನ ನಿಯಮಗಳು, ಅದನ್ನು

ಮಂಗಳೂರು: ಹೊಸತಾಗಿ ಆಯ್ಕೆಯಾದ ಶಾಸಕರಿಗೆ ಮೂರು ದಿನಗಳ ಕಾಲ ತರಬೇತಿ – ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ Read More »

ಮಂಗಳೂರು: ರಾಜ್ಯ ವಿಧಾನಸಭೆ ಸ್ಪೀಕರ್ ಆಗಿ ಕಾಂಗ್ರೆಸ್ ನ ಯು.ಟಿ. ಖಾದರ್

ಸಮಗ್ರನ್ಯೂಸ್: ರಾಜ್ಯ ವಿಧಾನಸಭೆ ಸ್ಪೀಕರ್ ಆಗಿ ಕಾಂಗ್ರೆಸ್ ನ ಯು.ಟಿ. ಖಾದರ್ ಅವರು ಮೇ.24ರಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಖಾದರ್ ಅವರು ಸ್ಪೀಕರ್ ಸ್ಥಾನಕ್ಕೆ ಮೇ.24ರಂದು ನಾಮಪತ್ರ ಸಲ್ಲಿಸಿದ್ದರು. ಪ್ರತಿಪಕ್ಷದಿಂದ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಸ್ಪೀಕರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಖಾದರ್ ಅವರು ರಾಜ್ಯದ ಮೊದಲ ಮುಸ್ಲಿಂ ಸ್ಪೀಕರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಂಗಳೂರು: ರಾಜ್ಯ ವಿಧಾನಸಭೆ ಸ್ಪೀಕರ್ ಆಗಿ ಕಾಂಗ್ರೆಸ್ ನ ಯು.ಟಿ. ಖಾದರ್ Read More »

‘ಕನ್ನಡಿಗರ ಏಟಿಗೆ ಬಿಜೆಪಿ ಚಿಕಿತ್ಸೆ ಪಡೆಯುವುದು ಒಳಿತು’ | ‘ಸೋಲಿನ ಹೊಣೆ ಹೊತ್ತು ರಾಜೀನಾಮೆ ಕೊಡುವವರು ಬಿಜೆಪಿಯಲ್ಲಿಲ್ಲ’| ಕಮಲ ಪಾಳಯವನ್ನು ಕಿಂಡಲ್ ಮಾಡಿದ ‘ಕೈ’ ಟ್ವೀಟ್

ಸಮಗ್ರ ನ್ಯೂಸ್: ”ನಾವು ಘೋಷಿಸಿದ 5 ಗ್ಯಾರಂಟಿಗಳನ್ನು ಜಾರಿಗೊಳಿಸುವುದು ಗ್ಯಾರಂಟಿ. ನಾವು ನಮ್ಮ ಜನರ ಹಿತ ಕಾಪಾಡುವ ಬದ್ಧತೆ ಹೊಂದಿದ್ದೇವೆ. ಬಿಜೆಪಿ ನಾಯಕರು ಕನ್ನಡಿಗರು ನೀಡಿದ ಏಟಿಗೆ ಚಿಕಿತ್ಸೆ ಪಡೆದು ರೆಸ್ಟ್ ಮಾಡಲಿ, ಹಾಗೆಯೇ ‘ವಿರೋಧಪಕ್ಷದ ನಾಯಕ’ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಹುಡುಕಿಕೊಳ್ಳಲಿ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಗಾಯದ ಮೇಲೆ ಬರೆ ಎಳೆದಿದೆ. ”ಚುನಾವಣೆಯಲ್ಲಿ ಹೀನಾಯ ಸೋಲಿನ ಹೊಣೆ ಹೊರುವವರು, ಹೊಣೆ ಹೊತ್ತು ರಾಜೀನಾಮೆ ಕೊಡುವವರು ಯಾರೂ ಇಲ್ಲವೇ ಬಿಜೆಪಿಯಲ್ಲಿ!? ಸೋಲಿನ ಹೊಣೆ ಯಾರದ್ದು ಬಿಜೆಪಿಯವರೇ?

‘ಕನ್ನಡಿಗರ ಏಟಿಗೆ ಬಿಜೆಪಿ ಚಿಕಿತ್ಸೆ ಪಡೆಯುವುದು ಒಳಿತು’ | ‘ಸೋಲಿನ ಹೊಣೆ ಹೊತ್ತು ರಾಜೀನಾಮೆ ಕೊಡುವವರು ಬಿಜೆಪಿಯಲ್ಲಿಲ್ಲ’| ಕಮಲ ಪಾಳಯವನ್ನು ಕಿಂಡಲ್ ಮಾಡಿದ ‘ಕೈ’ ಟ್ವೀಟ್ Read More »

ರಾಜ್ಯ ಸಚಿವ ಸಂಪುಟ ವಿಸ್ತರಣೆ| ಶನಿವಾರ(ಮೇ.27) 24 ಮಂದಿ ನೂತನ ಸಚಿವರಾಗಿ ಪದಗ್ರಹಣ

ಸಮಗ್ರ ನ್ಯೂಸ್: ಬೆಂಗಳೂರು ಶನಿವಾರ (ಮೇ.27) ಬೆಳಗ್ಗೆ 11.45ಕ್ಕೆ ನೂತನ 24 ಸಚಿವರ ಪದಗ್ರಹಣ ಸಮಾರಂಭ ನಡೆಯಲಿದೆ. ಸರ್ಕಾರದ ಮನವಿಗೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದು, ಸಂಪುಟ ವಿಸ್ತರಣೆಗೆ ಶನಿವಾರ ಮುಹೂರ್ತ ಫಿಕ್ಸ್ ಆಗಿದೆ. ನವದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಕ್ಷದ ಹೈಕಮಾಂಡ್ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಸಮಾಲೋಚನೆಯ ಬಳಿಕ ಸಂಪುಟಕ್ಕೆ 24 ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಶನಿವಾರ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ. ನೂತನ ಸಚಿವರು ಯಾರು?ಈಶ್ವರ ಖಂಡ್ರೆ, ಲಕ್ಷ್ಮೀ

ರಾಜ್ಯ ಸಚಿವ ಸಂಪುಟ ವಿಸ್ತರಣೆ| ಶನಿವಾರ(ಮೇ.27) 24 ಮಂದಿ ನೂತನ ಸಚಿವರಾಗಿ ಪದಗ್ರಹಣ Read More »

ಅಸ್ವಸ್ಥಗೊಂಡಿದ್ದ ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು| ವ್ಯಕ್ತಿಯ ಪತ್ತೆಗೆ ಕೋರಿಕೆ

ಸಮಗ್ರ ನ್ಯೂಸ್: ಇಲ್ಲಿನ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ ಬಸ್ ನಿಲ್ದಾಣದ ಸಮೀಪ ಅಸ್ವಸ್ಥಗೊಂಡಿದ್ದ ಅಪರಿಚಿತ ವ್ಯಕ್ತಿಯನ್ನು ಮೇ.10 ರಂದು ನಗರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಒಳರೋಗಿಯಾಗಿ ದಾಖಲಿಸಲಾಗಿದ್ದು ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯಕ್ತಿಯು ಸುಮಾರು 70 ರಿಂದ 75 ವರ್ಷದವವರಾಗಿದ್ದು ಎತ್ತರ 6.2 ಅಡಿ, ಸಾಧರಣ ಮೈಕಟ್ಟು, ಕೋಲು ಮುಖ, ಗೋಧಿ ಮೈ ಬಣ್ಣ ಹೊಂದಿದ್ದು, ನೀಲಿ ಬಣ್ಣದ ಅರ್ಧ ತುಂಡರಿಸಿದ ಪ್ಯಾಂಟ್ ಧರಿಸಿದ್ದಾರೆ.

ಅಸ್ವಸ್ಥಗೊಂಡಿದ್ದ ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು| ವ್ಯಕ್ತಿಯ ಪತ್ತೆಗೆ ಕೋರಿಕೆ Read More »

ಸರಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅರ್ಜಿಗೆ ಆಹ್ವಾನ

ಸಮಗ್ರ ನ್ಯೂಸ್: ಇಲ್ಲಿನ ಸರಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2023ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿಗೆ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಜೂನ್ 7ರೊಳಗೆ ಇಲಾಖೆಯ ವೆಬ್‍ಸೈಟ್ www.cite.karnataka.gov.in ಮೂಲಕ ಅಥವಾ ಈ ಸಂಸ್ಥೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಸಂಸ್ಥೆಯಲ್ಲಿ ನಿಗದಿತ ಪ್ರಮಾಣದಲ್ಲಿ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸದೆ ಇದ್ದಲ್ಲಿ ಪುರುಷ ಅಭ್ಯರ್ಥಿಗಳಿಗೆ ಪ್ರವೇಶ ಪಡೆಯಲು ಅಕಾಶವಿರುತ್ತದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0824-2216360, 9880119147

ಸರಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅರ್ಜಿಗೆ ಆಹ್ವಾನ Read More »

ರಾಜ್ಯ ಪರಿಸರ ಪ್ರಶಸ್ತಿಗೆ ಅರ್ಜಿ ಆಹ್ವಾನ

ಸಮಗ್ರ ನ್ಯೂಸ್: 2022-23ನೇ ಸಾಲಿನ ರಾಜ್ಯ ಪರಿಸರ ಪ್ರಶಸ್ತಿಗೆ ಕರ್ನಾಟಕ ಸರ್ಕಾರದ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖಾ ವತಿಯಿಂದ ಪರಿಸರ ಸಂರಕ್ಷಣೆ ಮತ್ತು ಪರಿಸರ ವ್ಯವಸ್ಥಾಪನೆಗಾಗಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿ, ಸಂಸ್ಥೆಗಳನ್ನು ಗುರುತಿಸಲು ಅರ್ಜಿ, ನಾಮ ನಿರ್ದೇಶನಗಳನ್ನು ಆಹ್ವಾನಿಸಲಾಗಿದೆ. ಈ ಪ್ರಶಸ್ತಿಗಳನ್ನು ಮಲೆನಾಡು ಮತ್ತು ಕರಾವಳಿ ವಲಯ, ದಕ್ಷಿಣ ವಲಯ ಮತ್ತು ಉತ್ತರ ವಲಯಗಳಲ್ಲಿ ತಲಾ ಒಬ್ಬರು ವ್ಯಕ್ತಿ ಮತ್ತು ಒಂದು ಸಂಸ್ಥೆಗೆ ನೀಡಲಾಗುವುದು. ವ್ಯಕ್ತಿ/ಸಂಸ್ಥೆಯ ಹೆಸರು ವ್ಯವಹರಿಸಬೇಕಾದ ವಿಳಾಸ, ನಿರ್ವಹಿಸಲಾದ ಕಾರ್ಯ ಕುರಿತಾಗಿ

ರಾಜ್ಯ ಪರಿಸರ ಪ್ರಶಸ್ತಿಗೆ ಅರ್ಜಿ ಆಹ್ವಾನ Read More »

ಪಿಲಿಕುಳ ಮೇ. 29ರಂದು ವೀಕ್ಷಣೆಗೆ ಲಭ್ಯ

ಸಮಗ್ರ ನ್ಯೂಸ್: ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ಇರುವುದರಿಂದ ಮೇ.29ರ ಸೋಮವಾರ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಎಲ್ಲಾ ವಿಭಾಗಗಳನ್ನು ತೆರೆಯಲಾಗುವುದು. ಅಂದು ಮೃಗಾಲಯ, ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯ, ಲೇಕ್ ಗಾರ್ಡನ್, ಬೊಟಾನಿಕಲ್ ಮ್ಯೂಸಿಯಂ ಮತ್ತು ಸಂಸ್ಕøತಿ ಗ್ರಾಮ (ಕುಶಲಕರ್ಮಿ ಗ್ರಾಮ ಹೊರತುಪಡಿಸಿ) ಸಾರ್ವಜನಿಕರ ವೀಕ್ಷಣೆಗೆ ಇತರೆ ಎಲ್ಲಾ ದಿನಗಳಂತೆ ತೆರೆದಿರುತ್ತದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಿಲಿಕುಳ ಮೇ. 29ರಂದು ವೀಕ್ಷಣೆಗೆ ಲಭ್ಯ Read More »