Ad Widget .

ರಾಜ್ಯದಲ್ಲಿ ಪೂರ್ವ ಮುಂಗಾರು ಅಬ್ಬರ; ಸಿಡಿಲಿಗೆ ಇಬ್ಬರು ಬಲಿ

ಸಮಗ್ರ ನ್ಯೂಸ್: ರಾಜ್ಯದಲ್ಲಿ ‌ಮುಂಗಾರು ಪೂರ್ವ ಮಳೆ ಆರ್ಭಟ‌ ಮುಂದುವರೆದಿದ್ದು ಮಡಿಕೇರಿ, ಮೈಸೂರು, ಹಾಸನ, ಕೊಪ್ಪಳ, ಬೆಳಗಾವಿ, ಬೆಂಗಳೂರು ನಗರ, ಉಡುಪಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಹಲವೆಡೆ ಮಂಗಳವಾರವೂ ಧಾರಾಕಾರ ಮಳೆಯಾಗಿದೆ.

Ad Widget . Ad Widget .

ರಾಜ್ಯದಲ್ಲಿ ಸಿಡಿಲಿಗೆ ಮಹಿಳೆ ಸೇರಿದಂತೆ ಇಬ್ಬರು ಮೃತಪಟ್ಟಿದ್ದು, ಹಲವೆಡೆ ಜಾನುವಾರುಗಳೂ ಸಾವನ್ನಪ್ಪಿವೆ. ಮಳೆ‌ ಅವಾಂತರಕ್ಕೆ ಕೃಷಿ ಆಸ್ತಿಪಾಸ್ತಿ ಹಾನಿ ಸಂಭವಿಸಿದೆ.

Ad Widget . Ad Widget .

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕಕಮರಿಯ ಗ್ರಾಮದ ಅಮೂಲ್‌ ಜೈಸಿಂಗ್‌ (24) ಹಾಗೂ ದೇಸರಹಟ್ಟಿಯ ವಿಠ್ಠಾಬಾಯಿ ಕಮಕಾರ (50) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಅಮೂಲ್ ಅವರು ಎಂದಿನಂತೆ ಕುರಿ ಕಾಯುತ್ತಿದ್ದರು. ಏಕಾಏಕಿ ಬಿರುಗಾಳಿ ಸಹಿತ ಮಳೆ ಆರಂಭವಾಯಿತು. ರಕ್ಷಣೆಗಾಗಿ ಅವರು ಮರದಡಿ ಹೋಗಿ ನಿಂತಾಗ ಸಿಡಿಲು ಬಡಿದಿದೆ. ವಿಠ್ಠಾಬಾಯಿ ಕೂಡ ತಮ್ಮ ಹೊಲದಲ್ಲಿ ಅರಿಸಿನ ಫಸಲು ಸಂಸ್ಕರಣೆ ಮಾಡುತ್ತಿದ್ದ ವೇಳೆ ಸಿಡಿಲಿಗೆ ತುತ್ತಾಗಿದ್ದಾರೆ.

ರಾಜ್ಯದಲ್ಲಿ ಬುಧವಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆಯಾಗಲಿದೆ. ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Leave a Comment

Your email address will not be published. Required fields are marked *