Ad Widget .

ಸುಬ್ರಹ್ಮಣ್ಯ: ಕಾಂಗ್ರೆಸ್ ಕಾರ್ಯಕರ್ತನಿಗೆ ಹಲ್ಲೆ ಪ್ರಕರಣ| ‘ ಸ್ಥಳದಲ್ಲಿರದ ನನ್ನ ತಂದೆ ವಿರುದ್ಧ ಷಡ್ಯಂತ್ರ ಮಾಡಲಾಗಿದೆ’| ಸುಂದರ ಗುಡ್ಡನಮನೆ ಪುತ್ರನಿಂದ ಸ್ಪಷ್ಟನೆ

ಸಮಗ್ರ ನ್ಯೂಸ್: ಮೇ.27 ರಂದು ಕೊಲ್ಲಮೊಗ್ರುವಿನ ಕಟ್ಟದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ನಡೆದಾಗ ಸ್ಥಳದಲ್ಲಿ ನನ್ನ ತಂದೆ ಸುಂದರ ಅವರು ಸ್ಥಳದಲ್ಲಿ ಇಲ್ಲದಿದ್ದರೂ ದುರುದ್ದೇಶದಿಂದ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಸುಂದರ ಗುಡ್ಡನಮನೆ ಅವರ ಮಗ ಪವನ್ ಸ್ಪಷ್ಟನೆ ನೀಡಿದ್ದಾರೆ.

Ad Widget . Ad Widget .

ಘಟನೆ ನಡೆದ ದಿನ ನನ್ನ ತಂದೆ ಗುತ್ತಿಗಾರಿಗೆ ಪೆಟ್ರೋಲ್ ತರಲೆಂದು ಮನೆಯಿಂದ ಹೊರಟಿದ್ದು ಕಲ್ಮಕಾರಿ ಗೆ ಬಂದಾಗ ಸತೀಶ್ ಟಿ.ಎನ್ ರವರು ಸಿಕ್ಕಿದ್ದು ಇವರೊಂದಿಗೆ ತಂದೆಯವರು ಹರಿಹರ ತನಕ ಬರುತ್ತೇನೆಂದು ಸ್ಕೂಟರ್ ಹತ್ತಿರುತ್ತಾರೆ. ದಾರಿ ಮಧ್ಯೆ ಮಣಿಕಂಠ ಕಟ್ಟ ಇವರು ಸತೀಶ್ ಅವರಿಗೆ ಫೋನ್ ಮಾಡಿ ತನ್ನ ಮನೆಗೆ ಬರಹೇಳಿದ್ದು ಸತೀಶ್ ರೊಂದಿಗೆ ನನ್ನ ತಂದೆಯೂ ಮಣಿಕಂಠ ಕಟ್ಟ ರವರ ಮನೆಗೆ ತೆರಳಿ ಸ್ವಲ್ಪದರಲ್ಲೇ ನನ್ನ ತಂದೆಯನ್ನು ಸತೀಶ್ ಅವರು ಹರಿಹರ ಪಲ್ಲತ್ತಡ್ಕ ಕ್ಕೆ ಕರೆದುಕೊಂಡು ಬಂದು ಅವರನ್ನು ಬಿಟ್ಟಿರುತ್ತಾರೆ. ನನ್ನ ತಂದೆ ಅಲ್ಲಿರುವ ಸಮಯದಲ್ಲಿ ಮಣಿಕಂಠ ಹಾಗೂ ಕುಮಾರ ಇವರೊಂದಿಗೆ ಯಾವುದೇ ಹಲ್ಲೆ ನದೆದಿರುವುದಿಲ್ಲ ಹಾಗೂ ನನ್ನ ತಂದೆ ಕುಮಾರ್ ರವರಿಗೆ ಎದುರಾಗಿರುವುದಿಲ್ಲ ಎಂದು ಪವನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Ad Widget . Ad Widget .

ಘಟನೆ ನಡೆದ ವೇಳೆ ನನ್ನ ತಂದೆ ಹರಿಹರಪಲ್ಲತ್ತಡ್ಕದಲ್ಲಿದ್ದು ಅದಕ್ಕೆ ಸಂಬಂಧಿಸಿದ ಸಿ.ಸಿ ಟಿ.ವಿ ಚಿತ್ರದ ದಾಖಲೆಯು ಇದೆ. ತಂದೆಯ ಮೇಲೆ ಈಗಾಗಲೇ ಪೊಲೀಸ್ ಇಲಾಖೆಯವರು FIR ದಾಖಲು ಮಾಡಿರುವುದು ಗೊತ್ತಾಗಿದ್ದು ವೃಥಾ ಆರೋಪ ಹೊರಿಸಿದ ಕುಮಾರ್ ಅವರಿಗೆ ಹಾಗೂ ನನ್ನ ತಂದೆಯ ಹೆಸರನ್ನು ಉಲ್ಲೇಖ ಮಾಡುವಂತೆ ಹೇಳಿ ಕೊಟ್ಟವರಿಗೆ ಕಾರಣಿಕ ದೈವಕ್ಕೆ ಹರಕೆ ಹೇಳುವುದಾಗಿ ಸುಂದರ ಗುಡ್ಡನ ಮನೆ ಅವರ ಮಗ ಪವನ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *