ಸಮಗ್ರ ನ್ಯೂಸ್: ಯಾತ್ರಾಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಆನೆ ಯಶಸ್ವಿ ಇದೀಗ ಕಾಲುನೋವಿನಿಂದ ಬಳಲುತ್ತಿದೆ.
ತುಂಟಾಟದಿಂದಲೇ ಗಮನ ಸೆಳೆಯುವ ಈ ಆನೆ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಯಶಸ್ವಿ ಈಗ ನಡೆದಾಡಲು ಪರದಾಡುತ್ತಿದೆ.
ಸೋಮವಾರ ಮಧ್ಯಾಹ್ನ ಆದಿ ಸುಬ್ರಮಣ್ಯ ಬಳಿ ಸಾಗುತ್ತಿದ್ದಾಗ ಯಶಸ್ವಿ ಡ್ರೈನೇಜ್ ಗಾಗಿ ಹಾಕಿದ್ದ ಕಲ್ಲಿನ ಮೇಲೆ ಕಾಲಿಟ್ಟಿದೆ. ಈ ವೇಳೆ ಕಲ್ಲು ತುಂಡಾಗಿ ಬಿದ್ದು ಅದರ ಕೈಗೆ ಗಾಯವಾಗಿದ್ದು ನಡೆದಾಡಲು ಕಷ್ಟಪಡುತ್ತಿದೆ. ಈಗಾಗಲೇ ಮೈಸೂರಿನ ತಜ್ಞ ವೈದ್ಯರು ಬಂದು ಆನೆಗೆ ಚಿಕಿತ್ಸೆ ನೀಡಿದ್ದು ಸದ್ಯ ಯಶಸ್ವಿ ಚಿಕಿತ್ಸೆಗೆ ಸ್ಪಂದಿಸುತ್ತಿದೆ ಎನ್ನಲಾಗಿದೆ. ಯಶಸ್ವಿಯ ಸ್ಥಿತಿ ಅದರ ಅಭಿಮಾನಿಗಳಲ್ಲಿ ಬೇಸರ ತರಿಸಿದ್ದು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.