Ad Widget .

ಮಂಗಳೂರು: ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಉದ್ಯಮಿ ಕಳತ್ತೂರು ವಿಶ್ವನಾಥ್ ಶೆಟ್ಟಿ ಬಂಧನ‌

ಸಮಗ್ರನ್ಯೂಸ್: ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಉದ್ಯಮಿ ಕಳತ್ತೂರು ವಿಶ್ವನಾಥ ಶೆಟ್ಟಿ ಎಂಬವರನ್ನು ಮಂಗಳೂರು ಸೈಬರ್ ಕ್ರೈಂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಮುಂಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Ad Widget . Ad Widget .

ಮಂಗಳೂರಿನ ಹೆಸರಾಂತ ಕಟ್ಟಡ ನಿರ್ಮಾಣ ಸಂಸ್ಥೆ ʼರೋಹನ್ ಕಾರ್ಪೊರೇಷನ್ʼ ಆಡಳಿತ ನಿರ್ದೇಶಕ ರೋಹನ್ ಮುಂತೇರು ಮತ್ತು ತೊಕ್ಕೊಟ್ಟಿನ ಹರ್ಷ ಫೈನಾನ್ಸ್ ಮಾಲಕ ಹರೀಶ್ ಎಂಬವರಿಗೆ, 1. 75 ಕೋಟಿ ರೂಗಳನ್ನು ವಿಶ್ವನಾಥ್ ಶೆಟ್ಟಿ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಟ್ಟಡ ನಿರ್ಮಾಣ ಸಂಸ್ಥೆಗೆ 300 ಕೋಟಿ ಸಾಲ ತೆಗೆಸಿ ಕೊಡುವುದಾಗಿ ನಂಬಿಸಿ ವಿಶ್ವನಾಥ್ ಶೆಟ್ಟಿ ಮತ್ತು ಮುಂಬೈನ ಕದಂ ಎಂಬವರು ಸೇರಿ ರೋಹನ್ ಮತ್ತು ಹರೀಶ್ ರವರಿಂದ 1.75 ಕೋಟಿ ರೂಗಳನ್ನು ಅಡ್ವಾನ್ಸ್ ಮುಕ್ತವಾಗಿ ಪಡೆದಿದ್ದರು. ನಂತರ ಹಣಕಾಸು ನೆರವು ಒದಗಿಸದೆ ವಂಚನೆ ನಡೆಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *