ರಾಜಕಾರಣ ಬದಿಗೊತ್ತಿ ಸಿಎಂ ಭೇಟಿ ಮಾಡಿ ಮಗನ ಮದುವೆ ಆಮಂತ್ರಣ ನೀಡಿದ ಸುಮಲತಾ

ಸಮಗ್ರ ನ್ಯೂಸ್: ರಾಜಕೀಯ ಕೆಸರೆರಚಾಟಗಳನ್ನು ಬದಿಗೊತ್ತಿದ ಸುಮಲತಾ ಅಂಬರೀಷ್ ಅವರು, ಮುಖ್ಯಮಂತ್ರಿ ಸಿದ್ದರಾಯ್ಯ ಅವರನ್ನು ಸೋಮವಾರ ಭೇಟಿ ಮಾಡಿದ್ದು, ಪುತ್ರ ಅಭಿಷೇಕ್ ಅಂಬರೀಷ್ ಮದುವೆಗೆ ಆಹ್ವಾನಿಸಿದರು.

Ad Widget ... ..

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಆಮಂತ್ರಣ ಪತ್ರಿಕೆ ನೀಡಿದ ಫೋಟೋಗಳನ್ನ ಸ್ವತಃ ಸುಮಲತಾ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Ad Widget

ಅಭಿಷೇಕ್ ಅಂಬರೀಶ್ ಅವರ ವಿವಾಹ ಮಾಡೆಲ್ ಅವಿವಾ ಬಿದ್ದಪ್ ಜೊತೆಗೆ ಫಿಕ್ಸ್ ಆಗಿದ್ದು, ಜೂನ್ 5ರಂದು ಅದ್ದೂರಿಯಾಗಿ ವಿವಾಹ ಕಾರ್ಯಕ್ರಮ ಜರುಗಲಿದೆ. ಜೂನ್ 7ರಂದು ಭರ್ಜರಿಯಾಗಿ ಆರತಕ್ಷತೆ ಸಮಾರಂಭ ನಡೆಯಲಿದ್ದು, ಅಭಿಷೇಕ್- ಅವಿವಾ ವಿವಾಹದ ಆಮಂತ್ರಣ ಪತ್ರ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Leave a Comment

Your email address will not be published. Required fields are marked *