ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯಾದ್ಯಂತ “ಸ್ನೇಕ್ ನರೇಶ್” ಎಂದೇ ಖ್ಯಾತಿ ಪಡೆದಿದ್ದ ಉರಗ ತಜ್ಞ ನರೇಶ್(51) ಸೆರೆ ಹಿಡಿದಿದ್ದ ಹಾವಿನಿಂದಲೇ ಜೀವಾಂತ್ಯ ಕಂಡಿದ್ದಾರೆ.
ಬೆಳಗ್ಗೆ ನಾಗರಹಾವು ಹಿಡಿದುಕೊಂಡು ಬಂದಿದ್ದ ನರೇಶ್ ಮಧ್ಯಾಹ್ನ ಮತ್ತೊಂದು ಹಾವು ಹಿಡಿಯಲು ಕರೆ ಬಂತೆಂದು ಸ್ಕೂಟಿಯಲ್ಲಿದ್ದ ಹಾವಿನ ಚೀಲದ ಗಂಟು ಬಿಗಿ ಮಾಡಲು ಡಿಕ್ಕಿ ಓಪನ್ ಮಾಡಿದ್ದರು. ಈ ಸಂದರ್ಭದಲ್ಲಿ ಡಿಕ್ಕಿ ಓಪನ್ ಆದ ಕೂಡಲೇ ನಾಗರಹಾವು ಕಚ್ವಿರುವುದಾಗಿ ತಿಳಿದುಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆತರಲಾದರು ದಾರಿ ಮಧ್ಯದಲ್ಲೇ ಸಾವನ್ನಪ್ಪಿದರು.
ಇನ್ನು ಇವರು ಸೆರೆ ಹಿಡಿದ ಹಾವುಗಳನ್ನು ಕಾರಿನ ಡಿಕ್ಕಿಯಲ್ಲಿ ಶೇಖರಿಸಿಡುತ್ತಿದ್ದರು. ಈ ಹಾವುಗಳನ್ನು 15 ದಿನಕ್ಕೊಮ್ಮೆ ಚಾರ್ಮಾಡಿಗೆ ಹೋಗಿ ಬಿಟ್ಟು ಬರುತ್ತಿದ್ದರು. ಕಾರಿನ ಸೀಟ್, ಡಿಕ್ಕಿಯಲ್ಲಿ 20ಕ್ಕೂ ಹೆಚ್ಚು ಚೀಲಗಳು ಮತ್ತು ಆ ಚೀಲದ ತುಂಬೆಲ್ಲಾ ಹಾವುಗಳಿರುತ್ತಿದ್ದವು. ಇವರು ಸಾವನ್ನಪ್ಪುವ ಸಮಯದಲ್ಲಿ ಸ್ಕೂಟರ್ ಡಿಕ್ಕಿಯಲ್ಲಿ ಎರಡು ಹಾವು, ಮತ್ತು ಕಾರಿನ ಡಿಕ್ಕಿಯಲ್ಲಿ 30ಕ್ಕೂ ಹೆಚ್ಚು ಹಾವುಗಳು ಇದ್ದವು ಎಂದು ತಿಳಿದುಬಂದಿದೆ. ಇವರು ಶಾಲಾ ಮಕ್ಕಳಿಗೆ ಹಾವುಗಳ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದರು.
ಸಾವಿರಾರು ಹಾವುಗಳನ್ನ ಸೆರೆ ಹಿಡಿದಿದ್ದ ಸ್ನೇಕ್ ನರೇಶ್ 2013ರಲ್ಲಿ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು.