Ad Widget .

ಸಿದ್ದಾಪುರ: ಕೋಳಿ ಗೂಡಿನೊಳಗೆ ನುಗ್ಗಿದ್ದ ನಾಗರಹಾವು ಸೆರೆ

ಸಮಗ್ರ ನ್ಯೂಸ್: ಕೋಳಿಗೂಡಿನೊಳಗೆ ನುಗ್ಗಿದ್ದ ನಾಗರಹಾವನ್ನು ಸೆರೆಹಿಡಿದು ರಕ್ಷಿಸಿದ ಘಟನೆ ಸಿದ್ದಾಪುರ ಗ್ರಾಮದ ಬೀಟಿಕಾಡು ಎಸ್ಟೇಟ್ ನಲ್ಲಿ ನಡೆದಿದೆ.

Ad Widget . Ad Widget .

ಇಲ್ಲಿನ ಶರತ್ ಕುಮಾರ್ ಅವರ ಮನೆಯ ಕೋಳಿ ಗೂಡಿನೊಳಗೆ ಹಾವು ಇರುವುದು ಕಂಡು ಬಂದಿದ್ದು, ತಕ್ಷಣ ಗುಹ್ಯ ಗ್ರಾಮದ ಉರಗ ಪ್ರೇಮಿ ಸುರೇಶ್ ಪೂಜಾರಿಯವರಿಗೆ ಮಾಹಿತಿ ನೀಡಲಾಯಿತು.

Ad Widget . Ad Widget .

ಸುರೇಶ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಕೋಳಿಗೂಡಿನ ಒಳಗೆ ಬೃಹತ್ ಗಾತ್ರದ ನಾಗರಹಾವು ನಾಲ್ಕು ಮೊಟ್ಟೆಯನ್ನು ನುಂಗಿ ಮಲಗಿರುವ ದೃಶ್ಯ ಕಂಡುಬಂದಿದ್ದು ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಹಾವನ್ನು ಹಿಡಿಯಲಾಯಿತು. ಸುರೇಶ್ ಪೂಜಾರಿ ಸೆರೆಹಿಡಿದ ಹಾವನ್ನು ಮಾಲ್ದಾರೆ ಅರಣ್ಯಕ್ಕೆ ಬಿಡಲಾಗಿದೆ.

Leave a Comment

Your email address will not be published. Required fields are marked *