Ad Widget .

ಐಪಿಎಲ್ -2023| ಐದನೇ ಬಾರಿ ಚಾಂಪಿಯನ್ ಪಟ್ಟ‌ ಮುಡಿಗೇರಿಸಿಕೊಂಡ ಚೆನ್ನೈ ಸೂಪರ್ ಕಿಂಗ್ಸ್

ಸಮಗ್ರ ನ್ಯೂಸ್: ಐಪಿಎಲ್-2023ರ ರೋಚಕ ಫೈನಲ್ ಹಣಾಹಣಿಯಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಅಮೋಘ ಗೆಲುವು ಪಡೆಯುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

Ad Widget . Ad Widget .

ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ ಫೈನಲ್ ಪಂದ್ಯದಲ್ಲಿ ಕೊನೆಯ ಎರಡು ಎಸೆತಗಳಲ್ಲಿ 10 ರನ್’ಗಳ ಅವಶ್ಯಕತೆ ಇದ್ದಾಗ ಸಿಕ್ಸರ್ ಮತ್ತು ಬೌಂಡರಿ ಸಿಡಿಸುವ ಮೂಲಕ ರವೀಂದ್ರ ಜಡೇಜಾ ಸಿಎಸ್’ಕೆ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು.

Ad Widget . Ad Widget .

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ ನಿಗದಿತ 20 ಓವರ್’ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತು. 215 ರನ್’ಗಳ ಗುರಿ ಪಡೆದ ಚೆನ್ನೈ ತಂಡ ಇನ್ನಿಂಗ್ಸ್ ಆರಂಭಿಸುತ್ತಿದ್ದಂತೆ ಮಳೆ ಅಡ್ಡಿಪಡಿಸಿತು. ಡಕ್’ವರ್ತ್ ಲೂಯಿಸ್ ನಿಯಮದ ಪ್ರಕಾರ ಸಿಎಸ್’ಕೆ ತಂಡಕ್ಕೆ 15 ಓವರ್’ಗಳಲ್ಲಿ 171 ರನ್’ಗಳ ಟಾರ್ಗೆಟ್ ನೀಡಲಾಗಿತ್ತು.

ಉತ್ತಮ ಆರಂಭ ಪಡೆದ ಚೆನ್ನೈ ತಂಡ ನಂತರ ಹಠಾತ್ ಮುಗ್ಗರಿಸಿ ಸೋಲಿನತ್ತ ಮುಖ ಮಾಡಿತ್ತು. ಅಂತಿಮ ಹಂತದಲ್ಲಿ ಪಂದ್ಯ ಚೆನ್ನೈ ಕೈಜಾರುತ್ತಿದ್ದಂತೆ ಅಂಬಟಿ ರಾಯಡು ಅಬ್ಬರಿಸಿ ಪಂದ್ಯವನ್ನು ಸಿಎಸ್’ಕೆ ಕಡೆ ಎಳೆದು ತಂದರು. ಕೊನೆಯ ಓವರ್’ನಲ್ಲಿ ಕೊನೆಯ ಎರಡು ಎಸೆತಗಳಲ್ಲಿ ಸಿಎಸ್’ಕೆ ಗೆಲುವಿಗೆ 10 ರನ್’ಗಳ ಅವಶ್ಯಕತೆ ಇತ್ತು. ಈ ವೇಳೆ ಸ್ಟ್ರೈಕ್’ನಲ್ಲಿದ್ದ ರವೀಂದ್ರ ಜಡೇಜಾ, ಮೋಹಿತ್ ಶರ್ಮಾ ಅವರ ಕೊನೆಯ ಓವರಿನ ಕೊನೆಯ ಎರಡು ಎಸೆತಗಳನ್ನು ಸಿಕ್ಸರ್ ಮತ್ತು ಬೌಂಡರಿಗೆ ಅಟ್ಟುವ ಮೂಲಕ ಸಿಎಸ್’ಕೆ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟರು.

Leave a Comment

Your email address will not be published. Required fields are marked *