Ad Widget .

ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್ ಜೆಡಿ| ಬಿಜೆಪಿಯ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ಸಮಗ್ರ ನ್ಯೂಸ್: ಹೊಸ ಸಂಸತ್‌ ಭವನವನ್ನು ಶವಪೆಟ್ಟಿಗೆಗೆ ಹೋಲಿಸುವ ಮೂಲಕ ವಿಪಕ್ಷಗಳು ವಿರೋಧವನ್ನು ಹೀನ ಮಟ್ಟಕ್ಕೆ ಎಳೆದೊಯ್ದಿವೆ. ಪ್ರಧಾನಿ ಸಂಸತ್‌ ಉದ್ಘಾಟಿಸುವುದನ್ನು ವಿರೋಧಿಸುತ್ತಿರುವ ವಿಪಕ್ಷದ ಪಾಳಯದಲ್ಲಿರುವ ಲಾಲೂ ಪ್ರಸಾದ್‌ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಹೊಸ ಸಂಸತ್‌ ಭವನದ ವಿನ್ಯಾಸ ಶವಪೆಟ್ಟಿಗೆಯಂತಿದೆ ಎಂದು ಲೇವಡಿ ಮಾಡಿದೆ.

Ad Widget . Ad Widget .

ಆರ್‌ಜೆಡಿ ಇಂದು ಶವಪಟ್ಟಿಗೆ ಮತ್ತು ಸಂಸತ್‌ ಭವನದ ಚಿತ್ರಗಳನ್ನು ಅಕ್ಕಪಕ್ಕದಲ್ಲಿಟ್ಟು ಟ್ವೀಟ್‌ ಮಾಡಿ ಹೊಸ ಸಂಸತ್‌ ಭವನ ಯಾವ ರೀತಿ ಇದೆ ನೋಡಿ ಎಂದು ಲೇವಡಿ ಮಾಡಿದೆ. ದೇಶ ಈ ಸಂಸತ್‌ ಭವನವನ್ನು ಒಪ್ಪಿಕೊಳ್ಳುವುದಿಲ್ಲ. ಪ್ರಜಾಪ್ರಭುತ್ವವನ್ನು ದಫನ ಮಾಡಲಾಗಿದೆ ಎಂದು ಹೇಳಲು ನಾವು ಶವಪೆಟ್ಟಿಗೆಯ ಹೋಲಿಕೆ ನೀಡಿದ್ದೇವೆ ಎಂದು ಆರ್‌ಜೆಡಿ ನಾಯಕ ಶಕ್ತಿ ಸಿಂಗ್‌ ಯಾದವ್‌ ಟ್ವೀಟ್‌ ಅನ್ನು ಸಮರ್ಥಿಸಿಕೊಂಡಿದ್ದಾರೆ.

Ad Widget . Ad Widget .

ಆರ್‌ಜೆಡಿ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ನೂತನ ಸಂಸತ್‌ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿರುವವರ ವಿರುದ್ಧ ದೇಶದ್ರೋಹದ ಕೇಸು ದಾಖಲಿಸಬೇಕೆಂದು ಹೇಳಿದೆ.
2024ರಲ್ಲಿ ದೇಶದ ಜನರು ಇದೇ ಶವಪೆಟ್ಟಿಗೆಯಲ್ಲಿ ನಿಮ್ಮನ್ನು ದಫನ ಮಾಡಲಿದ್ದಾರೆ ಎಂದು ಬಿಜೆಪಿ ವಕ್ತಾರ ಗೌರವ್‌ ಭಾಟಿಯ ತಿರುಗೇಟು ನೀಡಿದ್ದಾರೆ.

Leave a Comment

Your email address will not be published. Required fields are marked *