Ad Widget .

ಬಿಜೆಪಿ ಶಾಸಕರ ಕಚೇರಿ ಉದ್ಘಾಟನೆ ಬ್ಯಾನರ್ ನಲ್ಲಿ ಸಿಎಂ ಸಿದ್ದರಾಮಯ್ಯ ಫೋಟೋ!

ಸಮಗ್ರ ನ್ಯೂಸ್: ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎನ್. ಚನ್ನಬಸಪ್ಪ ಅವರ ಕಚೇರಿ ಉದ್ಘಾಟನೆ ಬ್ಯಾನರ್ ನಲ್ಲಿ ಸಿದ್ದರಾಮಯ್ಯ ಅವರ ಫೋಟೋ ಹಾಕಲಾಗಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.

Ad Widget . Ad Widget .

ಶಿವಮೊಗ್ಗದ ಶಿವಪ್ಪ ನಾಯಕ ಸಿಟಿ ಸೆಂಟರ್ ಮಾಲ್ ಪಕ್ಕದ ಕಟ್ಟಡದಲ್ಲಿ ನಗರ ಕ್ಷೇತ್ರದ ಶಾಸಕರ ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮ ಭಾನುವಾರ ನಡೆಯಿತು.‌‌

Ad Widget . Ad Widget .

ಬಿಜೆಪಿಯ ಬಲಪಂಥಿಯ ಸಿದ್ದಾಂತವನ್ನು ವಿರೋಧಿಸುತ್ತಾ ಬಂದಿರುವ ಸಿದ್ದರಾಮಯ್ಯನವರು ಬಿಜೆಪಿಯ ಶಾಸಕರ ಕಚೇರಿ ಉದ್ಘಾಟನೆಯ ವೇದಿಕೆ ಕಾರ್ಯಕ್ರಮದಲ್ಲಿ ರಾರಾಜಿಸಿದ್ದು ವಿಶೇಷ ಜೊತೆಗೆ ಕುತೂಹಲಕ್ಕೂ ಕಾರಣವಾಗಿದೆ.

ಶಾಸಕರಾಗುವ ಮುನ್ನ ಸಿದ್ದರಾಮಯ್ಯನವರ ವಿರುದ್ಧ ಹಲವು ಬಾರಿ ಹರಿಹಾಯ್ದಿದ್ದ ಚನ್ನಬಸಪ್ಪನವರು, ಕಚೇರಿ ಉದ್ಘಾಟನೆಯ ವೇಳೆಯಲ್ಲಿ ಸಿದ್ದರಾಮಯ್ಯನವರ ಫೊಟೊ ಹಾಕಿಕೊಂಡಿರುವುದು ಗಮನಸೆಳೆದಿದೆ.

ಸಿದ್ದರಾಮಯ್ಯ ಸಿಎಂ ಎನ್ನುವ ಕಾರಣಕ್ಕೆ ಫೋಟೊ ಹಾಕಿಕೊಂಡರೋ ಅಥವಾ ಕಣ್ಣುತಪ್ಪಿನಿಂದ ಸಿದ್ದರಾಮಯ್ಯನವರ ಫೊಟೊ ಹಾಕಿಕೊಳ್ಳಲಾಯಿತೋ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯನವರ ಫೋಟೊ ಬಿಜೆಪಿಯ ಸ್ಥಳೀಯ, ರಾಜ್ಯ, ರಾಷ್ಟ್ರ ನಾಯಕರ ನಡುವೆ ರಾರಾಜಿಸಿರುವುದು ವಿಶೇಷವಾಗಿದೆ.

Leave a Comment

Your email address will not be published. Required fields are marked *