Ad Widget .

Health Tips| ಮೂಗಿನೊಳಗಿನ ಕೂದಲು ತೆಗೆಯೋ ಮೊದ್ಲು ಈ ಸಲಹೆ ತಿಳ್ಕೊಳ್ಳಿ…

ಸಮಗ್ರ ನ್ಯೂಸ್: ಮುಖದ ಸೌಂದರ್ಯಕ್ಕೆ ಜನರು ಹೆಚ್ಚಿನ ಮಹತ್ವ ನೀಡ್ತಾರೆ. ಮುಖದ ಮೇಲಿರುವ ಅನಗತ್ಯ ಕೂದಲನ್ನು ಕತ್ತರಿಸುತ್ತೇವೆ. ಹಾಗೆ ಮೂಗಿನ ಒಳಗಿರುವ ಕೂದಲನ್ನು ಕೆಲವರು ತೆಗೆಯುತ್ತಾರೆ. ಆದರೆ ಈ ಕೂದಲು ತೆಗೆಯೋದ್ರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ.

Ad Widget . Ad Widget .

ಮೂಗಿನೊಳಗಡೆ ಎರಡು ರೀತಿಯ ಕೂದಲಿದ್ದು, ಒಂದು ಚಿಕ್ಕ ಕೂದಲಾದರೆ ಇನ್ನೊಂದು ದಪ್ಪ ಕೂದಲು. ಮೂಗಿನಲ್ಲಿರುವ ಕೂದಲು ದೇಹದ ರಕ್ಷಣೆ ಕೆಲಸ ಮಾಡುತ್ತದೆ. ಉಸಿರಾಡುವಾಗ ಆಮ್ಲಜನಕವನ್ನು ಶುದ್ಧಗೊಳಿಸುವ ಜೊತೆಗೆ ಬ್ಯಾಕ್ಟೀರಿಯಾ, ಧೂಳು ಒಳ ಹೋಗದಂತೆ ರಕ್ಷಿಸುತ್ತದೆ. ಒಂದು ವೇಳೆ ಮೂಗಿನಲ್ಲಿರುವ ಕೂದಲನ್ನು ಕತ್ತರಿಸಿದ್ರೆ ಬ್ಯಾಕ್ಟೀರಿಯಾ ಕೂಡ ದೇಹ ಸೇರುತ್ತದೆ.

Ad Widget . Ad Widget .

ಮೂಗಿನಲ್ಲಿ ರಕ್ತನಾಳವಿದೆ. ಮೆದುಳಿನ ಜೊತೆ ಇದು ಸಂಪರ್ಕ ಹೊಂದಿದೆ. ಮೂಗಿನ ಕೂದಲನ್ನು ಎಳೆಯುವುದ್ರಿಂದ ರಕ್ತನಾಳದಲ್ಲಿ ರಂಧ್ರವುಂಟಾಗುತ್ತದೆ.ಇದ್ರಿಂದ ರಕ್ತ ಹೊರ ಬರುತ್ತದೆ. ಇದು ಸೋಂಕಿಗೆ ಕಾರಣವಾಗಿ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಇದೆ.

ಮೂಗಿನ ಕೂದಲು ದೇಹಕ್ಕೆ ಒಳ್ಳೆಯದಾಗಿರುವ ಕಾರಣ ಯಾವುದೇ ಕಾರಣಕ್ಕೂ ಮೂಗಿನ ಕೂದಲನ್ನು ಕತ್ತರಿಸಬೇಡಿ. ಕೂದಲನ್ನು ಕತ್ತರಿಸುವುದು ಅತ್ಯಗತ್ಯವೆಂದರೆ ಸಣ್ಣ ಕತ್ತರಿಯಿಂದ ಮೂಗಿನ ಕೂದಲನ್ನು ಕತ್ತರಿಸಿ. ನೋಸ್ ಹೇರ್ ಟ್ರಿಮ್ಮರ್ ಬಳಕೆ ಮಾಡಿ. ಯಾವುದೇ ಕಾರಣಕ್ಕೂ ಮುಂಜಾಗ್ರತೆಯಿಲ್ಲದೆ ಕೂದಲನ್ನು ಕತ್ತರಿಸಿ ಆಪತ್ತು ತಂದುಕೊಳ್ಳಬೇಡಿ.

Leave a Comment

Your email address will not be published. Required fields are marked *