Ad Widget .

ಮಂಗಳೂರು: ಪತ್ರಕರ್ತರ ರಾಷ್ಟ್ರೀಯ ಸಮ್ಮೇಳನದಲ್ಲಿ ಕರ್ನಾಟಕ ಪ್ರತಿನಿಧಿಯಾಗಿ ಪಿ.ಬಿ.ಹರೀಶ್ ರೈ

ಸಮಗ್ರನ್ಯೂಸ್: ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘ, ಆಲ್ ಇಂಡಿಯಾ ನ್ಯೂಸ್ ಪೇಪರ್ ಎಂಪ್ಲಾಯಿಸ್ ಫೆಡರೇಶನ್, ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ಸಹಿತ ರಾಷ್ಟ್ರ ಮಟ್ಟದ 8 ಪತ್ರಕರ್ತರ ಸಂಘಟನೆಗಳ ವತಿಯಿಂದ ನವದೆಹಲಿಯ ಹೋಟೆಲ್ ಸಾಮ್ರಾಟ್ ನಲ್ಲಿ ಮೇ.28ರಂದು ನಡೆದ ಪತ್ರಕರ್ತರ ಮಹಾ ಸಮ್ಮೇಳನದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ನಿವಾಸಿ ಪಿ.ಬಿ.ಹರೀಶ್ ರೈ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.

Ad Widget . Ad Widget .

ವಿಜಯವಾಣಿಯ ಹಿರಿಯ ವರದಿಗಾರರಾದ ಇವರು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿದ್ದು, ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *