Ad Widget .

ಪ್ರತಿಭಟನಾ ನಿರತ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರಿಂದ ದೌರ್ಜನ್ಯ| ಹಾಡುಹಗಲೇ ನಡೆಯಿತು ‘ಪ್ರಜಾಪ್ರಭುತ್ವದ ಕಗ್ಗೊಲೆ!’

ಸಮಗ್ರ ನ್ಯೂಸ್: ರಾಷ್ಟ್ರರಾಜಧಾನಿಯಲ್ಲಿ ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನವನ್ನು ಉದ್ಘಾಟನಿಸಿದರೆ, ಮತ್ತೊಂದೆಡೆ ಜಂತರ್‌-ಮಂತರ್‌ನಲ್ಲಿ ಒಂದು ರೀತಿಯಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ದೇಶಕ್ಕೆ ಪದಕ ಜಯಿಸಿದ ಭಜರಂಗ್ ಫೂನಿಯಾ, ವಿನೇಶ್ ಫೋಗಾಟ್, ಸಾಕ್ಷಿ ಮಲಿಕ್ ಸೇರಿದಂತೆ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Ad Widget . Ad Widget .

ಭಾರತೀಯ ಜನತಾ ಪಕ್ಷ(ಬಿಜೆಪಿ) ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರ ಮೇಲೆ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕಳೆದ ಒಂದು ತಿಂಗಳಿನಿಂದ ಒಲಿಂಪಿಕ್ ಪದಕ ವಿಜೇತರು ಸೇರಿದಂತೆ ಹಲವಾರು ಕುಸ್ತಿಪಟುಗಳು ನಿರಂತರವಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

Ad Widget . Ad Widget .

ನೂತನ ಸಂಸತ್‌ ಭವನದ ಎದುರು ‘ಮಹಾ ಪಂಚಾಯತ್‌’ ಹೆಸ​ರಿ​ನಲ್ಲಿ ಬೃಹತ್‌ ಪ್ರತಿ​ಭ​ಟನೆ ನಡೆ​ಸಲು ಸಿದ್ದತೆ ನಡೆಸಿದ್ದರು ಪ್ರಧಾನಿ ನರೇಂದ್ರ ಮೋದಿ ಸಂಸತ್‌ ಭವನದ ಉದ್ಘಾ​ಟಿ​ಸುವ ಸಮ​ಯ​ದಲ್ಲೇ ಕುಸ್ತಿ​ಪ​ಟು​ಗಳು ಸಂಸತ್‌ ಭವನಕ್ಕೆ ಮುತ್ತಿಗೆ ಹಾಕಲು ಯೋಜನೆ ರೂಪಿಸಿದ್ದರು. ಆದರೆ ಇದಕ್ಕೆ ಡೆಲ್ಲಿ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ.

ಪೊಲೀಸರ ವರ್ತನೆಯ ಬಗ್ಗೆ ಕಿಡಿಕಾರಿರುವ ವಿನೇಶ್ ಫೋಗಾಟ್, “ಹಾಡುಹಗಲೇ ಜಂತರ್‌-ಮಂತರ್‌ನಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಒಂದು ಕಡೆ ಪ್ರಧಾನಮಂತ್ರಿಗಳು ನೂತನ ಸಂಸತ್ ಭವನವನ್ನು ಉದ್ಘಾಟಿಸುತ್ತಿದ್ದಾರೆ, ಇನ್ನೊಂದೆಡೆ ನಮ್ಮವರನ್ನೇ ಬಂಧಿಸಲಾಗುತ್ತಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಎಲ್ಲಾ ಕುಸ್ತಿಪಟುಗಳನ್ನು , ಹೋರಾಟ ನಿರತರನ್ನು ವಶಕ್ಕೆ ಪಡೆದ ಬಳಿಕ ಪೊಲೀಸರು ಇದೀಗ ತಾವು ಜಂತರ್-ಮಂತರ್‌ನಲ್ಲಿ ವಾಸ್ತವ್ಯ ಹೂಡಲು ಮಾಡಿಕೊಂಡಿದ್ದ ಸಾಮಾನುಗಳನ್ನು ಕಿತ್ತೊಗೆಯುತ್ತಿದ್ದಾರೆ. ಇದು ಯಾವ ರೀತಿಯ ಗೂಂಡಾಗಿರಿ ಎಂದು ರಿಯೊ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಕುಸ್ತಿಪಟುಗಳು ನೂತನ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲಿದ್ದಾರೆ ಎನ್ನುವ ಸುಳಿವು ಸಿಗುತ್ತಿದ್ದಂತೆಯೇ, ನೂತನ ಪಾರ್ಲಿಮೆಂಟ್ ಸುತ್ತಾಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ದೆಹಲಿಯ ಬಾರ್ಡರ್‌ಗಳಾದ ಸಿಂಘು, ಟಿಕ್ರಿ ಹಾಗೂ ಘಾಜಿಪುರ್ ಬಾರ್ಡರ್‌ಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ದೆಹಲಿಯ ಗಡಿ ಭಾಗಗಳ ಸೂಕ್ಷ್ಮ ಪ್ರದೇಶಗಳಲ್ಲಿ ಪೆಟ್ರೋಲಿಂಗ್ ವಾಹನಗಳು ಹದ್ದಿನಗಣ್ಣಿಟ್ಟಿವೆ.

Leave a Comment

Your email address will not be published. Required fields are marked *