Ad Widget .

ನರನನ್ನೇ ಕೊಂದು ನರಭಕ್ಷಕನಾದ ಯುವಕ

ಸಮಗ್ರ ನ್ಯೂಸ್: ಯುವಕನೋರ್ವ ವೃದ್ಧೆಯನ್ನು ಕೊಂದು ಮಾಂಸವನ್ನಾಗಿ ತಿಂದಿರುವ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯ ಸೆಂದ್ರಾ ಅರಣ್ಯದಲ್ಲಿ ನಡೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈತ ವೃದ್ಧೆಯನ್ನು ಕೊಂದು ಮುಖವನ್ನು ಪರಚಿದ್ದ, ಬಳಿಕ ತೋಳ, ನಾಯಿಯಂತೆ ಮುಖವನ್ನು ಮೇಲಕ್ಕೆ ಮಾಡಿ ಪ್ರಾಣಿಗಳಂತೆ ಕೂಗಾಡುತ್ತಿದ್ದ. ಆರೋಪಿ ಯುವಕನನ್ನು ಪಾಲಿಯ ಬಂಗಾರ್ ಆಸ್ಪತ್ರೆಯಿಂದ ಜೋಧಪುರದ ಎಂಡಿಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರೇಬಿಸ್ ಮತ್ತು ಹೈಡ್ರೋಫೋಬಿಯಾಕ್ಕೆ ಸುರೇಂದ್ರ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆತನಿಗೆ ಆಗಾಗ ವಿಪರೀತ ಕೋಪ ಬರುವುದರಿಂದ ಅದು ಆತನನ್ನು ಹಿಂಸಾತ್ಮಕವಾಗಿ ವರ್ತಿಸುವಂತೆ ಮಾಡುತ್ತಿದೆ. ತಮಗೂ ಏನಾದರು ತೊಂದರೆ ಮಾಡಿದರೆ ಎಂಬ ಭಯದಲ್ಲಿ ವೈದ್ಯಕೀಯ ಸಿಬ್ಬಂದಿಗಳಿದ್ದಾರೆ.

Ad Widget . Ad Widget . Ad Widget .

ಆತನ ಬಾಯಲ್ಲಿ ಜೊಲ್ಲು ಸುರಿಸುತ್ತಿರುವುದರ ಪರಿಣಾಮ ಬೇರೆಯವರಿಗೂ ಈ ಕಾಯಿಲೆ ಹರಡಬಹುದು ಎಂದು ಭಯಗೊಂಡಿದ್ದಾರೆ. ಯುವಕನ ಜೇಬಿನಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ದೊರೆತಿದ್ದು, ರೇಬಿಸ್ ಬಗ್ಗೆಯೂ ಇದರಲ್ಲಿ ಮಾಹಿತಿ ಸಿಕ್ಕಿದೆ. ಈ ಕಾಯಿಲೆಯಿಂದಾಗಿ ಆತ ಅತ್ಯಂತ ಹಿಂಸಾತ್ಮಕವಾಗಿ ವರ್ತಿಸುತಿದ್ದಾನೆ.

ರೇಬೀಸ್‌ನಲ್ಲಿ ಎರಡು ರೀತಿಯ ಲಕ್ಷಣಗಳಿದ್ದು ಮೊದಲ ವಿಧದ ರೇಬಿಸ್ ನಲ್ಲಿ ಮಂದತೆಯ ಲಕ್ಷಣಗಳು ಬರುತ್ತವೆ. ಇದರಲ್ಲಿ ವ್ಯಕ್ತಿಯು ಏನನ್ನೂ ಮಾಡಲು ಸಾಧ್ಯವಿಲ್ಲ ಹಾಗೆಯೇ ಸಾವನ್ನಪ್ಪುತ್ತಾರೆ. ಆದರೆ ಮತ್ತೊಂದರಲ್ಲಿ ಅವರು ತುಂಬಾ ಆಕ್ರಮಣಕಾರಿಯಾಗಿ ವರ್ತಿಸುತ್ತಾರೆ. ಅದೇ ರೀತಿಯ ಲಕ್ಷಣಗಳು ಈ ವ್ಯಕ್ತಿಯಲ್ಲಿ ಕಂಡು ಬಂದಿದೆ. ಈ ಯುವಕನಿಗೆ ಹುಚ್ಚುನಾಯಿ ಕಚ್ಚಿರಬಹುದು, ಅದಕ್ಕೆ ಲಸಿಕೆ ಹಾಕಿಸಲಿಲ್ಲ. ನಾಯಿಯ ಹೊರತಾಗಿ, ತೋಳ, ನರಿ, ಕತ್ತೆಕಿರುಬ, ನರಿ, ಮಂಗ ಅಥವಾ ಇತರ ಪ್ರಾಣಿಗಳ ಕಡಿತದಿಂದಲೂ ರೇಬೀಸ್ ಬರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳುತ್ತಾರೆ.

ಯುವಕನ ಕೈಕಾಲು ಕಟ್ಟಿ ಆಸ್ಪತ್ರೆಗೆ ಕರೆತಂದಿದ್ದು, ಆತನನ್ನು ಸಮಾಧಾನಪಡಿಸಲು ಚಚ್ಚುಮದ್ದು ನೀಡಲಾಗಿದೆ. ಈತ ಹೈಡ್ರೋಫೋಬಿಯಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಸ್ಥಿತಿ ಹದಗೆಡುತ್ತಿದ್ದಂತೆ, ವೈದ್ಯಕೀಯ ಮಂಡಳಿಯ ತಂಡವು ಆತನನ್ನು ಮಥುರಾದಾಸ್ ಮಾಥುರ್ ಆಸ್ಪತ್ರೆಗೆ ಶಿಫ್ಟ್ ಮಾಡಲು ನಿರ್ಧರಿಸಿತು. ಈಗ ಆತನ ಚಿಕಿತ್ಸೆಗಾಗಿ ಜೋಧಪುರಕ್ಕೆ ಕಳುಹಿಸಲಾಗಿದೆ.

Leave a Comment

Your email address will not be published. Required fields are marked *