ಕಡಬ: ಕಾಡಾನೆ ದಾಳಿ ವ್ಯಕ್ತಿಯೋರ್ವ ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಮತ್ತೆ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೇ 28 ಕಡಬ ತಾಲೂಕಿನಲ್ಲಿ ನಡೆದಿದೆ.

Ad Widget ... ..

ಗಾಯಗೊಂಡವರನ್ನು ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ತಲಮತ್ತಡ್ಕ ಮನೆಯ ವಿಜಯ ಕುಮಾರ್ ಎಂದು ಗುರುತಿಸಲಾಗಿದೆ .

Ad Widget

ನಡುಮನೆ ಗೇರು ನಡುತೋಪು ಸಮೀಪದ ನಡುಮನೆ ಕ್ರಾಸ್ ಬಳಿ ಮರಿಯಾನೆ ಹೊಂದಿರುವ ಹೆಣ್ಣು ಆನೆಯು ಇಂದು ಅಪರಾಹ್ನ ದಾಳಿ ನಡೆಸಿ ವ್ಯಕ್ತಿಯೋರ್ವರನ್ನು ಎತ್ತಿ ಎಸೆದಿರುವುದಾಗಿ ತಿಳಿದು ಬಂದಿದೆ.

ಗಾಯಗೊಂಡ ವ್ಯಕ್ತಿ ಬಿಜು ಕುಮಾರ್ ಅವರನ್ನು ಕಡಬ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಗಾಗಿ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ.

ಈ ಪರಿಸರದಲ್ಲಿ ಎರಡು ಆನೆಗಳು ಇರುವ ಮಾಹಿತಿ ಸಾರ್ವಜನಿಕರಿಂದ ಲಭ್ಯವಾಗದ್ದು ಗ್ರಾಮಸ್ಥರು, ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಹೋಗುವ ಪ್ರವಾಸಿಗರು ಎಚ್ಚರಿಕೆ ವಹಿಸಬೇಕಾಗಿ ಮನವಿ ಮಾಡಲಾಗಿದೆ.

Leave a Comment

Your email address will not be published. Required fields are marked *