Ad Widget .

ನಿಮ್ಮನ್ನು ಕಾಡುವ ತಲೆಹೊಟ್ಟು ಸಮಸ್ಯೆಗೆ ಮುಕ್ತಿ ಕಾಣುವುದು ಹೇಗೆ? ಇಲ್ಲಿದೆ ಮಾಹಿತಿ

ಸಮಗ್ರ ನ್ಯೂಸ್: ತೆಂಗಿನ ಎಣ್ಣೆಯ ಬಳಕೆಯು ಕೂದಲಿಗೆ ಪ್ರಯೋಜನಕಾರಿಯಾಗಿದೆ. ಕೂದಲಿನ ಬೆಳವಣಿಗೆಗೆ ಅನೇಕ ಜನರು ಬಳಸುವ ತೆಂಗಿನ ಎಣ್ಣೆಯನ್ನು ಕರ್ಪೂರದ ಜೊತೆಗೆ ಕೂದಲಿಗೆ ಹಚ್ಚುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ?

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ತಲೆಹೊಟ್ಟ ನಿವಾರಣೆ : ತೆಂಗಿನ ಎಣ್ಣೆ ಮತ್ತು ಕರ್ಪೂರವನ್ನು ಒಟ್ಟಿಗೆ ಬೆರೆಸಿ ತಲೆಗೆ ಹಾಕುವುದರಿಂದ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಂದ ಮುಕ್ತಿ ನೀಡುತ್ತದೆ. ಇದು ತಲೆಹೊಟ್ಟಿಗೆ ಕಾರಣವಾಗುವ ತಲೆಯ ನೆತ್ತಿಯ ಶಿಲೀಂಧ್ರ, ಬ್ಯಾಕ್ಟೀರಿಯಾ, ತುರಿಕೆ, ಅಲರ್ಜಿಗಳನ್ನು ತೆಗೆದುಹಾಕುತ್ತದೆ.

Ad Widget . Ad Widget . Ad Widget .

ಹೇನಿನ ಸಮಸ್ಯೆಗೆ ಪರಿಹಾರ : ತೆಂಗಿನೆಣ್ಣೆ ಮತ್ತು ಕರ್ಪೂರದ ಸಂಯೋಜನೆಯು ತಲೆಯಲ್ಲಿರುವ ಹೇನುಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಕರ್ಪೂರದ ಆಂಟಿಪಾರಸಿಟಿಕ್ ಗುಣಲಕ್ಷಣಗಳು ಹೇನುಗಳನ್ನು ಕೊಲ್ಲುತ್ತವೆ. ಎರಡು ಚಮಚ ತೆಂಗಿನೆಣ್ಣೆ ಮತ್ತು ಒಂದು ಚಮಚ ಕರ್ಪೂರದ ಪುಡಿಯನ್ನು ಬೆರೆಸಿ ಪೇಸ್ಟ್ ಮಾಡಿ ತಲೆಗೆ ಹಚ್ಚಿ ರಾತ್ರಿಯಿಡೀ ಬಿಟ್ಟು ಮರುದಿನ ತೊಳೆಯುವುದು ಉತ್ತಮ ಪರಿಹಾರ ನೀಡುತ್ತದೆ.

ಕೂದಲು ಉದುರುವಿಕೆ ನಿವಾರಣೆ :ಕೂದಲು ಉದುರುವಿಕೆಗೆ ತಲೆಹೊಟ್ಟು ಒಂದು ಪ್ರಮುಖ ಕಾರಣವಾಗಿದೆ. ತೆಂಗಿನೆಣ್ಣೆ ಮತ್ತು ಕರ್ಪೂರದ ಮಿಶ್ರಣವು ತಲೆಹೊಟ್ಟಿನಿಂದ ಬಳಲುತ್ತಿರುವವರಿಗೆ ತುಂಬಾ ಒಳ್ಳೆಯದು. ಇದು ತಲೆಹೊಟ್ಟನ್ನು ತೆಗೆದುಹಾಕುವುದಲ್ಲದೆ ಕೂದಲನ್ನು ಬಲಪಡಿಸುತ್ತದೆ.

ಕೂದಲಿನ ಬೆಳವಣಿ: ಕರ್ಪೂರ ಮತ್ತು ತೆಂಗಿನೆಣ್ಣೆ ಕೂದಲಿನ ಬೆಳವಣಿಗೆಯನ್ನು ಉತ್ತಮಗೊಳಿಸಿ ಉದ್ದವಾದ ಮತ್ತು ದಪ್ಪ ಕೂದಲನ್ನು ಪಡೆಯಲು ಸಹಾಯ ಮಾಡುತ್ತದೆ. ಕರ್ಪೂರ ಮತ್ತು ತೆಂಗಿನೆಣ್ಣೆ ಬಿಳಿ ಕೂದಲನ್ನು ತಡೆಗಟ್ಟಲು ಮತ್ತು ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ.

ಕೂದಲಿಗೆ ಹೊಳಪು ನೀಡುತ್ತದೆ: ಈ ಸಂಯೋಜನೆಯು ಕೂದಲಿನ ಹೊಳಪನ್ನು ಹೆಚ್ಚಿಸಲು ಮತ್ತು ಒಣಗಿದ ಕೂದಲಿನ ಸಮಸ್ಯೆಯನ್ನು ನಿವಾರಿಸಲು ಬಹಳ ಉಪಯುಕ್ತವಾಗಿದೆ. ಇದು ನೈಸರ್ಗಿಕವಾಗಿ ಮೃದುವಾದ, ಹೊಳೆಯುವ ಕೂದಲನ್ನು ನೀಡುತ್ತದೆ.

ಕೂದಲಿಗೆ ಕರ್ಪೂರ ಮತ್ತು ತೆಂಗಿನ ಎಣ್ಣೆಯನ್ನು ಬಳಸುವುದು ತುಂಬಾ ಸುಲಭ. ಅಗತ್ಯಕ್ಕೆ ಅನುಗುಣವಾಗಿ ತೆಂಗಿನ ಎಣ್ಣೆಯನ್ನು ಬಟ್ಟಲಿನಲ್ಲಿ ತೆಗೆದುಕೊಳ್ಳುವುದು. ನಂತರ 1-2 ಕರ್ಪೂರದ ಪುಡಿಯನ್ನು ಸೇರಿಸಿ ಸ್ವಲ್ಪ ಬಿಸಿ ಮಾಡಿ, ಆ ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಟ್ಟು ನಂತರ ಅದನ್ನು ತಲೆಗೆ ಮಸಾಜ್ ಮಾಡಿ ಮತ್ತು ಕೂದಲಿಗೆ ಚೆನ್ನಾಗಿ ಹಚ್ಚಿ ಕನಿಷ್ಠ 4 ಗಂಟೆಗಳ ಕಾಲ ಬಿಡಬೇಕು. ಇದನ್ನು ವಾರಕ್ಕೆ 2 ರಿಂದ 3 ಬಾರಿ ಕೂದಲಿಗೆ ಹಚ್ಚುವುದರಿಂದ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು.

Leave a Comment

Your email address will not be published. Required fields are marked *