Ad Widget .

ಗೂನಡ್ಕ: ಸಾರಿಗೆ ಬಸ್ ನ ಹಿಂಭಾಗಕ್ಕೆ ಗುದ್ದಿದ ಆಲ್ಟೊ ಕಾರು

ಸಮಗ್ರ ನ್ಯೂಸ್: ಮೇ 28, ಸಾರಿಗೆ ಬಸ್ ಹಿಂಭಾಗಕ್ಕೆ ಎಲ್‌ ಬೋರ್ಡ್‌ ಕಾರು ಡಿಕ್ಕಿ ಆದ ಘಟನೆ ಮಾಣಿ ಮೈಸೂರು ಹೆದ್ದಾರಿಯ ಸಂಪಾಜೆಯ ಗೂನಡ್ಕ ಸಮೀಪದಲ್ಲಿ ಸಂಭವಿಸಿದೆ. ಗುದ್ದಿದ ರಭಸಕ್ಕೆ ಆಲ್ಟೋ ಕಾರು ಬಸ್ಸಿನ ಹಿಂಭಾಗದಡಿಗೆ ನುಗ್ಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ.

Ad Widget . Ad Widget .

ಸುಳ್ಯದಿಂದ ಕೊಯನಾಡಿಗೆ ಸಂಚರಿಸುತ್ತಿದ್ದ ಬಸ್‌ ನ ಹಿಂಭಾಗಕ್ಕೆ ಆಲ್ಟೋ ಕಾರು ಚಾಲಕನ ನಿಯಂತ್ರಣ ತಪ್ಪಿ ಬಸ್‌ಗೆ ಡಿಕ್ಕಿಯಾಗಿ,ಕಾರಿನ ಮುಂಭಾಗ ಬಸ್ಸಿನಡಿಗೆ ಸಿಲುಕಿಕೊಂಡಿದೆ.

Ad Widget . Ad Widget .

ಅದೃಷ್ಟವಶಾತ್ ಈ ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *