Ad Widget .

ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆ ನೀವು ನೋಡಿದ್ದೀರಾ?

ಸಮಗ್ರ ನ್ಯೂಸ್: ಕೆಲವರು ಚಿಪ್ಪು ಮತ್ತು ಮಾಂಸಕ್ಕಾಗಿ ಆಮೆಯನ್ನು ಕಳ್ಳ ಬೇಟೆಯಾಡುತ್ತಾರೆ. ಇದರಿಂದಾಗಿ ಈ ಪ್ರಾಣಿಯು ಅಳಿವಿನಂಚಿನಲ್ಲಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.

Ad Widget . Ad Widget .

ಪ್ರಖ್ಯಾತ ವನ್ಯಜೀವಿಧಾಮ ಕಪ್ಪತಗುಡ್ಡದ ಅಂಚಿನಲ್ಲಿರುವ ಶೆಟ್ಟಿಕೆರೆಯಲ್ಲಿ ಅಪರೂಪದ ಆಮೆಯೊಂದು ಕಾಣಿಸಿಕೊಂಡಿದೆ. ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆ ಶೆಟ್ಟಿಕೆರೆಯಲ್ಲಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಕುತೂಹಲ ಹುಟ್ಟಿಸಿದೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೆರಿ ಗ್ರಾಮದಲ್ಲಿರುವ ಕಾಣಿಸಿಕೊಂಡಿರುವ ನಕ್ಷತ್ರ ಆಮೆ “ಟೆಸ್ಟುಡಿನಿಡೆ” ಕುಟುಂಬಕ್ಕೆ ಸೇರಿದೆ ಎಂದು ಹೇಳಲಾಗಿದೆ.

Ad Widget . Ad Widget .

ಇದರ ವೈಜ್ಞಾನಿಕ ಹೆಸರು “ಜಿಯೋಚಲೋನ್ ಎಲಗನ್ಸ್” ಎಂದಾಗಿದ್ದು ಇದರ ಆವಾಸ ಸ್ಥಾನದ ನಾಶ ಮತ್ತು ಕಳ್ಳಬೇಟೆಯಿಂದಾಗಿ ಅಳಿವಿನಂಚನ್ನು ತಲುಪಿದೆ. 10ಇಂಚಿನಷ್ಟು ಉದ್ದ ಬೆಳೆಯುವ ಈ ನಕ್ಷತ್ರ ಆಮೆಯು ದೇಹದ ಮೇಲೆ ನಕ್ಷತ್ರದ ಆಕಾರವು ಗಾಢವಾದ ಬಣ್ಣದ ವಿನ್ಯಾಸದಲ್ಲಿದೆ. ಈ ಆಮೆಯನ್ನು ಮನೆಯಲ್ಲಿ ಸಾಕಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಇವುಗಳನ್ನು ಮನೆಯಲ್ಲಿ ಸಾಕುವುದರಿಂದ ಹೆಚ್ಚು ದಿನ ಬದುಕುಳಿಯುವುದಿಲ್ಲ.

Leave a Comment

Your email address will not be published. Required fields are marked *