ಸಮಗ್ರ ನ್ಯೂಸ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಜ್ವಾಲಾದ ಮೊದಲ ಮರಿ ಸತ್ತ ಕೆಲವು ದಿನಗಳ ನಂತರ ಗುರುವಾರ ಮತ್ತೆರಡು ಮರಿಗಳು ಸಾವನ್ನಪ್ಪಿವೆ. ಜ್ವಾಲಾ ಈ ವರ್ಷ ಮಾರ್ಚ್ 24 ರಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು.
ಉದ್ಯಾನವನದಲ್ಲಿ ಹುಟ್ಟಿದ ಮೂರು ಮರಿಗಳು ಸಾವನ್ನಪ್ಪಿದ್ದರೆ, ನಾಲ್ಕನೆಯ ಮರಿಯ ಆರೋಗ್ಯವು ಗಂಭೀರವಾಗಿರುವುದರಿಂದ ನಿಗಾದಲ್ಲಿ ಇರಿಸಲಾಗಿದೆ ಎಂದು ಕುನೋ ರಾಷ್ಟ್ರೀಯ ಉದ್ಯಾನವನ ತಿಳಿಸಿದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ ಮೊದಲ ಮರಿ ದೌರ್ಬಲ್ಯದಿಂದ ಸಾವನ್ನಪ್ಪಿದೆ. ಇತ್ತೀಚಿನ ಸಾವಿನಿಂದಾಗಿ ಕುನೋದಲ್ಲಿ ಕಳೆದ ಎರಡು ತಿಂಗಳುಗಳಲ್ಲಿ ಚೀತಾಗಳ ಸಾವಿನ ಸಂಖ್ಯೆಯನ್ನು ಆರಕ್ಕೇರಿದೆ. ಇದರಲ್ಲಿ ಆಫ್ರಿಕನ್ ರಾಷ್ಟ್ರಗಳಿಂದ ಮೂರು ಚೀತಾಗಳ ಸಾವಿನ ನಂತರ, ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಕೇವಲ ಒಂದು ಮರಿಯೊಂದಿಗೆ ಉಳಿದಿದೆ.
ನಮೀಬಿಯಾದಿಂದ ತರಲಾಗಿದ್ದ ಚೀತಾಗಳಲ್ಲಿ ಒಂದಾದ ಸಶಾ ಮಾರ್ಚ್ 27 ರಂದು ಕಿಡ್ನಿ ಸಂಬಂಧಿತ ಕಾಯಿಲೆಗೆ ಬಲಿಯಾಗಿತ್ತು. ದಕ್ಷಿಣ ಆಫ್ರಿಕಾದ ಉದಯ್ ಎಂಬ ಮತ್ತೊಂದು ಚೀತಾ ಏಪ್ರಿಲ್ 13 ರಂದು ಸಾವನ್ನಪ್ಪಿತ್ತು. ದಕ್ಷಾ ಎಂಬ ಹೆಣ್ಣು ಚೀತಾ ಮೇ 9 ರಂದು ಸಂಯೋಗದ ಪ್ರಯತ್ನದ ಸಮಯದಲ್ಲಿ ಗಂಡು ಜತೆಗಿನ ಹಿಂಸಾತ್ಮಕ ಘರ್ಷಣೆಯಲ್ಲಿ ಗಾಯಗೊಂಡು ಸಾವನ್ನಪ್ಪಿತ್ತು.