Ad Widget .

ಸಾರ್ವಜನಿಕರೇ ಗಮನಿಸಿ‌‌‌…ಉಚಿತ ಆಧಾರ್ ಅಪ್ಡೇಟ್ ಗೆ ಜೂ.14ರವರೆಗೆ ಅವಕಾಶ

ಸಮಗ್ರ ನ್ಯೂಸ್: ಜೂನ್ 14 ರವರೆಗೆ ಉಚಿತ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಲು ಅವಕಾಶ ನೀಡಲಾಗಿದೆ. ಆಧಾರ್ ನಲ್ಲಿನ ಹೆಸರು, , ಫೋಟೋ, ಮೊಬೈಲ್ ಸಂಖ್ಯೆಯಂತಹ ಯಾವುದೇ ಮಾಹಿತಿಯನ್ನು ಅಪ್ಡೇಟ್ ಮಾಡಲು 50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Ad Widget . Ad Widget .

ಆದರೆ, ಪ್ರಸ್ತುತ UIDAI ಈ ಎಲ್ಲ ತಿದ್ದುಪಡಿ ಸೇವೆಗಳನ್ನು ಜೂನ್ 14ರವರೆಗೆ ಉಚಿತವಾಗಿ ನೀಡಲಿದೆ. myAadhaar ಪೋರ್ಟಲ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅಪ್ಡೇಟ್ ಮಾಡಿದರೆ ಯಾವುದೇ ಶುಲ್ಕ ಇರುವುದಿಲ್ಲ.

Ad Widget . Ad Widget .

https://myaadhaar.uidai.gov.in/ ಗೆ ಭೇಟಿ ನೀಡಿ ವಿಳಾಸ ಇನ್ನಿತರ ಮಾಹಿತಿಗಳನ್ನು ನವೀಕರಿಸಬಹುದಾಗಿದೆ. ನವೀಕರಣಕ್ಕೆ ಜಾಲತಾಣದಲ್ಲಿ ಭೇಟಿ ನೀಡಿ ಆಧಾರ್ ನಂಬರ್ ಹಾಕಿದಾಗ ನಿಮ್ಮ ರಿಜಿಸ್ಟರ್ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಅದನ್ನು ನಮೂದಿಸಿ. ಬಳಿಕ , ಡಾಕ್ಯುಮೆಂಟ್ ಅಪ್ಡೇಟ್ ಆಯ್ಕೆಯನ್ನು ಆಯ್ಕೆ ಮಾಡಿ ಮತ್ತು ಅದರ ನಂತರ ಸ್ಕ್ರೀನ್ನಲ್ಲಿ ವಿಳಾಸ ಕಾಣಿಸಿಕೊಳ್ಳುತ್ತದೆ. ಇದರ ನಂತರ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ವಿವರಗಳನ್ನು ಪರಿಶೀಲಿಸಿ. ಇದು ಸರಿಯಾಗಿದ್ದರೆ, ನೀವು ಮುಂದಿನ ಲಿಂಕ್ ಅನ್ನು ಒತ್ತಿ. ನಂತರ, ನೀವು ವಿಳಾಸ ಹಾಗೂ ನಿಮ್ಮ ಹೆಸರು, ದಾಖಲೆಯನ್ನು ಸಲ್ಲಿಸಬೇಕು.

ಎಲ್ಲಾ ಮಾಹಿತಿಯನ್ನು ನೀಡಿದ ನಂತರ, ಸಲ್ಲಿಸು(Submit) ಬಟನ್ ಮೇಲೆ ದರೆ ಆಯ್ತು. 2023 ಜೂನ್ 14 ರವರೆಗೆ ಉಚಿತ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಲು ಅವಕಾಶ ನೀಡಲಾಗಿದೆ.

Leave a Comment

Your email address will not be published. Required fields are marked *