Ad Widget .

‘ಕನ್ನಡಿಗರ ಏಟಿಗೆ ಬಿಜೆಪಿ ಚಿಕಿತ್ಸೆ ಪಡೆಯುವುದು ಒಳಿತು’ | ‘ಸೋಲಿನ ಹೊಣೆ ಹೊತ್ತು ರಾಜೀನಾಮೆ ಕೊಡುವವರು ಬಿಜೆಪಿಯಲ್ಲಿಲ್ಲ’| ಕಮಲ ಪಾಳಯವನ್ನು ಕಿಂಡಲ್ ಮಾಡಿದ ‘ಕೈ’ ಟ್ವೀಟ್

ಸಮಗ್ರ ನ್ಯೂಸ್: ”ನಾವು ಘೋಷಿಸಿದ 5 ಗ್ಯಾರಂಟಿಗಳನ್ನು ಜಾರಿಗೊಳಿಸುವುದು ಗ್ಯಾರಂಟಿ. ನಾವು ನಮ್ಮ ಜನರ ಹಿತ ಕಾಪಾಡುವ ಬದ್ಧತೆ ಹೊಂದಿದ್ದೇವೆ. ಬಿಜೆಪಿ ನಾಯಕರು ಕನ್ನಡಿಗರು ನೀಡಿದ ಏಟಿಗೆ ಚಿಕಿತ್ಸೆ ಪಡೆದು ರೆಸ್ಟ್ ಮಾಡಲಿ, ಹಾಗೆಯೇ ‘ವಿರೋಧಪಕ್ಷದ ನಾಯಕ’ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಹುಡುಕಿಕೊಳ್ಳಲಿ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಗಾಯದ ಮೇಲೆ ಬರೆ ಎಳೆದಿದೆ.

Ad Widget . Ad Widget .

”ಚುನಾವಣೆಯಲ್ಲಿ ಹೀನಾಯ ಸೋಲಿನ ಹೊಣೆ ಹೊರುವವರು, ಹೊಣೆ ಹೊತ್ತು ರಾಜೀನಾಮೆ ಕೊಡುವವರು ಯಾರೂ ಇಲ್ಲವೇ ಬಿಜೆಪಿಯಲ್ಲಿ!? ಸೋಲಿನ ಹೊಣೆ ಯಾರದ್ದು ಬಿಜೆಪಿಯವರೇ? ಅಮಿತ್ ಶಾ ಅವರದ್ದೋ? ಬೊಮ್ಮಾಯಿಯವರದ್ದೋ? ಮೋದಿಯವರದ್ದೋ ? ನಳಿನ್ ಕಟೀಲರದ್ದೋ?ಸೋಲಿನ ಹೊಣೆ ಹೊತ್ತು ರಾಜೀನಾಮೆ ಕೊಡುವವರು ಯಾರು?!” ಎಂದು ಟ್ವೀಟ್ ಮೂಲಕ ಪ್ರಶ್ನೆ ಮಾಡಿದೆ.

Ad Widget . Ad Widget .

ಚುನಾವಣೆಯ ಆಘಾತಕಾರಿ ಸೋಲಿನ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಬದಲಾವಣೆಯಾಗಿಲ್ಲ, ವಿಪಕ್ಷ ನಾಯಕನ ಆಯ್ಕೆಯೂ ನಡೆದಿಲ್ಲ ಎನ್ನುವುದು ಗಮನಾರ್ಹ ವಿಚಾರವಾಗಿದೆ.

Leave a Comment

Your email address will not be published. Required fields are marked *