Ad Widget .

ಸುರತ್ಕಲ್: ಫ್ಲೆಕ್ಸ್ ನಲ್ಲಿದ್ದ ಬಿಜೆಪಿ ಯುವಮೋರ್ಚಾ ಮುಖಂಡನ ಭಾವಚಿತ್ರಕ್ಕೆ ಮತಾಂಧರಿಂದ ಹಾನಿ!

ಸಮಗ್ರ ನ್ಯೂಸ್: ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ ಆರನೇ ಬ್ಲಾಕ್ ಶ್ರೀ ಕೃಷ್ಣ ಭಜನಾ ಮಂದಿರ ಮುಂಭಾಗ ಮಂಗಳೂರು ಉತ್ತರ ಶಾಸಕ ಡಾ.ಭರತ್ ವೈ. ಶೆಟ್ಟಿಯವರಿಗೆ ಶುಭಾಶಯ ಕೋರಿ ಹಾಕಲಾಗಿದ್ದ ಬ್ಯಾನರ್ ನಲ್ಲಿ ಯುವಮೋರ್ಚಾ ಮುಖಂಡ ಭರತ್ ರಾಜ್ ಕೃಷ್ಣಾಪುರ ಅವರ ಭಾವಚಿತ್ರಕ್ಕೆ ಚೂರಿಯಿಂದ ಹಾನಿ ಮಾಡಲಾದ ಘಟನೆ ಇಂದು ಬೆಳಕಿಗೆ ಬಂದಿದೆ.

Ad Widget . Ad Widget .

ಭರತ್ ರಾಜ್ ಕೃಷ್ಣಾಪುರ ಬಿಜೆಪಿ ಯುವಮೋರ್ಚಾ ಮಂಗಳೂರು ಉತ್ತರ ಮಂಡಲದ ಅಧ್ಯಕ್ಷರಾಗಿದ್ದು ಕೆಲವು ತಿಂಗಳ ಹಿಂದೆ ಇದೇ ರೀತಿ ಬ್ಯಾನರ್ ನಲ್ಲಿದ್ದ ಅವರ ಭಾವಚಿತ್ರಕ್ಕೆ ಚೂರಿಯಿಂದ “×” ಮಾರ್ಕ್ ಮಾಡಲಾಗಿತ್ತು. ಈಗ ಮತ್ತೆ ಅಂತದ್ದೇ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭರತ್ ರಾಜ್ ಕೃಷ್ಣಾಪುರ ಅವರು, “ಮತಾಂಧರ ಕೃತ್ಯ ಇದಾಗಿದೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿಯ ಜನಮೆಚ್ಚಿದ ಶಾಸಕ ಭರತ್ ಶೆಟ್ಟಿ ಅವರು ಆಯ್ಕೆಯಾಗಿರುವುದು ನೋಡಿ ಇಂತಹ ಕೃತ್ಯಕ್ಕೆ ಇಳಿದಿದ್ದಾರೆ.

Ad Widget . Ad Widget .

ಇಂತಹ ಘಟನೆಗಳಿಂದ ಎದೆಗುಂದುವುದಿಲ್ಲ. ಪೊಲೀಸ್ ಇಲಾಖೆ ಇಂತಹ ಕಡೆಗಳಲ್ಲಿ ಸಿಸಿಟಿವಿ ಅಳವಡಿಸಿ ಆರೋಪಿಗಳನ್ನು ಪಟ್ಟಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

Leave a Comment

Your email address will not be published. Required fields are marked *