ಮಂಗಳೂರು: ಟೇಕಾಪ್ ಅಗ್ತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ| ಕೂದಲೆಳೆಯಲ್ಲಿ ತಪ್ಪಿದ ಭಾರೀ ಅನಾಹುತ

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ವಿಮಾನ ಜಸ್ಟ್​ ಎಸ್ಕೇಪ್​​​ ಆಗಿದ್ದು, ಟೇಕಾಫ್​ ಮಾಡ್ತಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿದೆ. ಭಾರೀ ಅವಘಡದಿಂದ ಇಂಡಿಗೋ ವಿಮಾನ ಪಾರಾಗಿದೆ. ಈ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

Ad Widget ... ..

ಇಂಡಿಗೋ ವಿಮಾನ ಮಂಗಳೂರಿನಿಂದ ದುಬೈಗೆ ಹೊರಟಿತ್ತು, ವಿಮಾನ ಪ್ರಯಾಣಿಕರ ಸಹಿತ ಬೆಳಗ್ಗೆ 8.30ಕ್ಕೆ ದುಬೈಗೆ ಹೊರಟಿದ್ದು, ಇಂಡಿಗೋ ವಿಮಾನ ಟ್ಯಾಕ್ಸಿ ವೇ ದಾಟಿ ರನ್ ವೇನಲ್ಲಿ ಸಾಗುತ್ತಿದ್ದು, ಈ ವೇಳೆ ಏಕಾಏಕಿಯಾಗಿ ವಿಮಾನದ ರೆಕ್ಕೆಯ ಭಾಗಕ್ಕೆ ಹಕ್ಕಿ ಬಡಿದಿದೆ. ಪೈಲಟ್ ತಕ್ಷಣ ಅಪಾಯದ ಸೂಚನೆ ಅರಿತು ಎಟಿಸಿಗೆ ಮಾಹಿತಿ ನೀಡಿದ್ದಾರೆ.ವಿಮಾನ ಟೇಕಾಫ್ ಕ್ಯಾನ್ಸಲ್ ಮಾಡಿ ರನ್ ವೇನಿಂದ ವಾಪಾಸ್ ಬಂದಿದೆ. ಸಿಬ್ಬಂದಿ ಪ್ರಯಾಣಿಕರನ್ನ ಇಳಿಸಿ ವಿಮಾನ ತಪಾಸಣೆ ಮಾಡುತ್ತಿದೆ.

Ad Widget

ಬೆಂಗಳೂರಿನಿಂದ ಬಂದಿದ್ದ ಮತ್ತೊಂದು ವಿಮಾನದ ಮೂಲಕ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳು ದುಬೈಗೆ ತೆರಳಲು ಮತ್ತೊಂದು ವಿಮಾನದ ವ್ಯವಸ್ಥೆ ಮಾಡಿದ್ದು, ಕೆಲ ಕಾಲ ಮಂಗಳೂರು ಏರ್​ಪೋರ್ಟ್​ನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು.

Leave a Comment

Your email address will not be published. Required fields are marked *