Ad Widget .

ಮರಗಳನ್ನು ಕಡಿಯುವುದು ಮಹಾ ಪಾಪ:-ನಾರಾಯಣ ಆರ್

ಸಮಗ್ರ ನ್ಯೂಸ್: ‘ಮರಗಳನ್ನು ಕಡಿಯುವುದು ಮಹಾ ಪಾಪ ಕಾಡು ಮನುಷ್ಯನಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಾ ಬಂದಿದೆ ಕಾಡು ಮನುಷ್ಯನ ಮೂಲಭೂತ ಸೌಕರ್ಯಗಳನ್ನು ಪೂರೈಸಲು ಸಹಾಯಕವಾಗಿದೆ’ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದೊಡ್ಡಬೈರನಕುಪ್ಪೆ ವಲಯದ ಉಪವಲಯ ಅಧಿಕಾರಿ ನಾರಾಯಣ ಆರ್ ಹೇಳಿದರು.

Ad Widget . Ad Widget .

ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಸಮಾಜಕಾರ್ಯ ಸಂಶೋಧನಾ ಮತ್ತು ಅಧ್ಯಯನ ವಿಭಾಗದಿಂದ ಆಯೋಜಿಸಲಾದ ಸಮಾಜಕಾರ್ಯ ಗ್ರಾಮೀಣ ಶಿಬಿರದ ನಾಲ್ಕನೇ ದಿನದ ಮಾಹಿತಿ ಕಾರ್ಯಾಗಾರದಲ್ಲಿ ಮಂಗಳವಾರ ಮಾತನಾಡಿದರು.

Ad Widget . Ad Widget .

ಕಾಡು ಹಲವು ಜೀವಿಗಳಿಗೆ ವಾಸಸ್ಥಾನ. ಮಾನವನ ಮೂಲಸೌಕರ್ಯಗಳನ್ನು ಒದಗಿಸುವ ಮೂಲ. ಕಾಡುಗಳು ಇರುವುದರಿಂದ ಈಗಲೂ ನಮಗೆ ಶುದ್ಧವಾದ ಗಾಳಿ ನೀರು ಸಿಗುತ್ತಿದೆ ಆದರೆ ಮನುಷ್ಯ ಕಾಡುಗಳನ್ನು ಕಡಿದು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾನೆ ಹಿಂದಿನ ಕಾಲದಲ್ಲಿ ಬಾವಿಗಳಿದ್ದರೆ ಈಗ ಆ ಸ್ಥಾನಕ್ಕೆ ವಾಟರ್ ಬಾಟಲ್ ಗಳು ಬಂದಿದೆ. ಹೀಗೆ ಮನುಷ್ಯ ಕಾಡನ್ನು ನಾಶ ಮಾಡುತ್ತಾ ಹೋದರೆ ಆಕ್ಸಿಜನ್ ಮಾಸ್ಕ್ ಗಳನ್ನು ಪ್ರತಿದಿನ ಬಳಸುವ ಅವಶ್ಯಕತೆ ಬರುವುದು ಎಂದು ಹೇಳುತ್ತಾ ಕಾಡಿನ ಪ್ರಾಮುಖ್ಯತೆ ಹಾಗೂ ಅದರ ವಿಶೇಷತೆಗಳನ್ನು ತಮ್ಮ ಅನುಭವದ ಮೂಲಕ ಹಂಚಿಕೊಡರು.

ವಿದ್ಯಾರ್ಥಿಗಳು ಶಿಬಿರದ ಅಂಗವಾಗಿ ಧೂಮಪಾನ ಮತ್ತು ಮಧ್ಯಪಾನ ಜಾಗೃತಿ ಜಾಗೃತಿ ಬೀದಿ ನಾಟಕವನ್ನು ಹೊಸೂರು ಗ್ರಾಮದಲ್ಲಿ ಪ್ರದರ್ಶಿಸಿದರು. ಆ ದಿನದ ಶಿಬಿರದ ಕೊನೆಯ ಕಾರ್ಯಕ್ರಮ ಅಂಗವಾಗಿ ಅಣಕು ಗ್ರಾಮ ಸಭೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದೊಡ್ಡಬೈರನಕುಪ್ಪೆ ಪಂಚಾಯತ್ ನ ಮಾಜಿ ಅಧ್ಯಕ್ಷ ತಿರುಪತಿ ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಕ್ಷೀಯ ಅನುಭವಗಳನ್ನು ಹಂಚಿಕೊಳ್ಳುತ್ತಾ ವ್ಯಾಪ್ತಿಯಲ್ಲಿ ಎದುರಿಸುವ ಸವಾಲುಗಳನ್ನು ತಿಳಿಸುತ್ತಾ ಅಣುಕು ಗ್ರಾಮ ಸಭೆಯನ್ನು ಯಶಸ್ವಿಗೊಳಿಸಲು ಸಹಕರಿಸಿದರು.

ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಸಮಾಜಕಾರ್ಯ ಸಂಶೋಧನಾ ಮತ್ತು ಅಧ್ಯಯನ ವಿಭಾಗದ ಉಪನ್ಯಾಸಕರು ಶ್ರೀಮತಿ ವಿನುತಾ ಹಾಗೂ ದೀಪಕ್. ಬಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಂಜಿತ್. ಡಿ ನಿರ್ವಹಿಸಿದರು

Leave a Comment

Your email address will not be published. Required fields are marked *