ಸಮಗ್ರ ನ್ಯೈಸ್: ‘ಕಾಂಗ್ರೆಸ್ ಪರ ಪ್ರಚಾರ ನಡೆಸುವ ಯಾವ ಅಗತ್ಯ ನನಗಿಲ್ಲ. ಹಾಗಿದ್ದಲ್ಲಿ ನಾನು ಕಾಂಗ್ರೆಸ್ ಪಕ್ಷದಿಂದಲೇ ಚುನಾವಣೆಗೆ ಸ್ಪರ್ಧಿಸುತ್ತಿದ್ದೆ’ ಎಂದು ಹಿಂದು ಮುಖಂಡ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.
ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾರೆ ಎಂದಿದ್ದಾರೆ.
ನನ್ನನ್ನ ‘ಅಣ್ಣಾ’ ಎಂದು ಪೂಂಜ ಸಂಬೋಧನೆ ಮಾಡಿದ್ದಾರೆ. ಆ ರೀತಿಯ ಸಂಬಂಧ ಹರೀಶ್ ಪೂಂಜ ನನ್ನ ಜೊತೆ ಇಟ್ಟು ಕೊಂಡಿದ್ದಾರಾ?. 2018ರಲ್ಲಿ ಬಿಜೆಪಿ ಟಿಕೆಟ್ ಸಿಗುವ ಮೊದಲು ಸೀಟ್ ನನಗೆ ಸಿಗಬಹುದಾ ಯಾರ ಹತ್ತಿರ ಮಾತನಾಡಬಹುದು ಅಂತ ದಿನಕ್ಕೆರಡು ಬಾರಿ ಕೇಳುತ್ತಿದ್ದರು. ಸೀಟ್ ದೊರೆತ ಬಳಿಕ ಒಂದೇ ಒಂದೇ ಫೋನ್ ನನಗೆ ಮಾಡ್ಲಿಲ್ಲ. ಆ ಸಂಬಂಧವನ್ನೇ ಕಳೆದುಕೊಂಡ ವ್ಯಕ್ತಿ ಅವರು. ಅಂತಹ ತಮ್ಮನ ಅವಶ್ಯಕತೆ ನನಗೆ ಬೇಕೂ ಇಲ್ಲ ಎಂದು ಅವರು ಕಿಡಿಕಾರಿದ್ದಾರೆ.
ನಾನೇನು ಹಿಂದುತ್ವಕ್ಕೆ ಅನ್ಯಾಯ ಮಾಡಿದ್ದೇನೆ ಸತ್ಯಣ್ಣ ಎಂದು ನನಗೆ ಪ್ರಶ್ನೆ ಮಾಡಿದ್ದಾರೆ. ಅಧಿಕಾರದ ಅಮಲಿನಲ್ಲಿ ಎಲ್ಲಿಲ್ಲಿ ಹಿಂದುತ್ವವನ್ನ ಮರೆತು ಹೋದರೆ ಎಂದು ಕೇಳಿದರು. ಕಾಂಗ್ರೆಸ್ ಪರ ಮತಯಾಚನೆ ಮಾಡುವುದಾದರೆ ಒಂದು ಕ್ಷೇತ್ರ ಅಲ್ಲ ಅನೇಕ ಕ್ಷೇತ್ರ ಇತ್ತು ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ ವೇದಿಕೆ ಹತ್ತಲ್ಲ. ಹರೀಶ್ ಪೂಂಜರಿಂದ ಹಿಂದೂ ಸಮಾಜಕ್ಕೆ ಅವಮಾನವಾಗಿದೆ. ಇವರು ಮುಸಲ್ಮಾನ್ ರೊಂದಿಗೆ ವ್ಯವಹಾರ ಮಾಡಬೇಡಿ ಅಂತಾರೆ. ಮುಸಲ್ಮಾನರ ವೋಟ್ ಬೇಡ ಅಂತಾರೆ . ಇದೆ ಹರೀಶ್ ಪೂಂಜ ತಮ್ಮ ಮಾಲೀಕತ್ವದ ಗ್ಯಾಸ್ ಏಜನ್ಸಿಯನ್ನು ಮುಸಲ್ಮಾನ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ. 17 ಎಕರೆ ಗೋಮಾಳದ ಜಾಗವನ್ನು ಮಸೀದಿ ಕಟ್ಟಲು ವ್ಯವಸ್ಥೆ ಮಾಡಿದ್ದಾರೆ. 1.50 ಕೋಟಿ ರೂಪಾಯಿ ಅನುದಾನವನ್ನು ಕಾಜೂರು ಮಸೀದಿ ನಿರ್ಮಾಣಕ್ಕೆ ನೀಡಿದ್ದಾರೆ. ಆದರೆ ಅಲ್ಲಿನ ದೇವಸ್ಥಾನವೊಂದಕ್ಕೆ ಕೇವಲ 25 ಲಕ್ಷ ರೂ. ಅನುದಾನ ಕೊಟ್ಟಿದ್ದಾರೆ. ಅಸಮಾಧಾನಗೊಂಡ ದೇವಸ್ಥಾನದವರು ಅನುದಾನವನ್ನು ವಾಪಸ್ ಕೊಟ್ಟಿದ್ದರು.
ಮತಾಂತರ ನಿಷೇಧ ಕಾನೂನು ಜಾರಿ ಮಾಡಿದ್ದರು. ಆದರೆ ಶಾಲೆಯೊಂದರಲ್ಲಿ ಬೈಬಲ್ ಹಂಚಿದವರನ್ನು ಪೊಲೀಸರಿಂದ ಬಿಡಿಸಿದ್ದು ಯಾರು ಎಂದು ಪ್ರಶ್ನಿಸಿದರು. ಚುನಾವಣೆ ನಿಮಿತ್ತ ಕೊಚ್ಚಿ ಕ್ರಿಶ್ಚಿಯನ್ ಸಮುದಾಯದೊಂದಿಗೆ ಪ್ರತ್ಯೇಕ ಸಭೆ ಮಾಡಿದರು. ಇದು ಹಿಂದುತ್ವವೇ?. ಮರಳುಗಾರಿಕೆಯ ಟೆಂಡರ್ ಯಾರಿಗೆ ಕೊಟ್ಟಿದ್ದರು. ಮುಸಲ್ಮಾನರಿಗೆ ಉಚಿತ ವಾಗಿ ಅಜ್ಮಿರ್ ಪ್ರವಾಸಕ್ಕೆ ವ್ಯವಸ್ಥೆ ಮಾಡಿದ್ದು ಯಾರು. ಶಾಸಕನೆಂದರೆ ಎಲ್ಲರ ಹಿತ ಕಾಪಾಡಬೇಕು. ಆದರೆ ವೇದಿಕೆಯಲ್ಲಿ ಮುಸಲ್ಮಾನರ ಮತ ಬೇಡ ಎಂದು ಹೇಳುವುದೇಕೆ? ವೇದಿಕೆಯಲ್ಲಿ ಹೇಳೋದು ಬೇರೆ. ಹಿಂಬದಿಯಿಂದ ಮಾಡುವ ರಾಜಕಾರಣ ಬೇರೆ. ಇದು ಹರೀಶ್ ಪೂಂಜ ಅವರ ಹಿಂದುತ್ವವನಾ ಎಂದು ಪ್ರಶ್ನಿಸಿದರು.
16ರ ವಯಸ್ಸಿನಲ್ಲಿ ಹಿಂದುತ್ವಕ್ಕೋಸ್ಕರ ಹೋರಾಡಿದವನು ನಾನು. ಅಯೋಧ್ಯೆ ಹೋರಾಟ, ಲವ್ ಜಿಹಾದ್ ವಿರುದ್ಧದ ಹೋರಾಟ ಮಾಡಿದ್ದೇನೆ. ಎಷ್ಟು ಹಿಂದುತ್ವದ ಹೋರಾಟದಲ್ಲಿ ಹರೀಶ್ ಪೂಂಜ ಭಾಗವಹಿಸಿದ್ದಾರೆ. ಬೆಳ್ತಂಗಡಿಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಜೈಲು ಪಾಲದವರ ಮನೆಗೆ ಪೂಂಜ ಭೇಟಿ ನೀಡಿದ್ದಾರಾ? 1995 ರವರೆಗೂ ಬೆಳ್ತಂಗಡಿಯ ಅನೇಕ ಹೋರಾಟಗಳಲ್ಲಿ ಭಾಗಿಯಾದವರು ನಾವು. ಹಿಂದೂ ಕಾರ್ಯಕರ್ತರ ಹತ್ಯೆ ಆದ ವಿರುದ್ಧದ ಹೋರಾಟ ಪೂಂಜರವರಿಗೆ ತಿಳಿದಿದ್ಯಾ..? ಶಾಸಕರಾದ ಬಳಿಕ ಒಂದು ದಿವಸ ಸ್ಟೇಷನ್ ನಲ್ಲಿ ಕಳೆದಿದನ್ನು ಶಾಸಕರು ಹೋರಾಟ ಎನ್ನುತ್ತಾರೆ. ಪ್ರವೀಣ್ ನೆಟ್ಟಾರ್ ಶರತ್ ಮಡಿವಾಳ ಮನೆ ಬಿಟ್ಟರೆ ಬೇರೆ ಯಾವುದಾದರೂ ಕಾರ್ಯಕರ್ತರ ಮನೆಗೆ ಪೂಂಜ ಭೇಟಿ ನೀಡಿದ್ದೀರಾ..? ಪವಿತ್ರ ಹಿಂದುತ್ವದ ಹೋರಾಟವನ್ನು ನಿಮ್ಮ ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಂಡಿದ್ದೀರಾ. ಬಿಜೆಪಿ ಪಕ್ಷದಲ್ಲಿ ಇರುವ ಎಲ್ಲರೂ ಹಿಂದುವಾದಿಗಳು ಅಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇರುವ ಎಲ್ಲರೂ ಹಿಂದೂ ವಿರೋಧಿಗಳು ಅಲ್ಲ.
ನಮಗೆ ಹಿಂದೂಗಳಲ್ಲಿ ಯಾವುದೇ ಭೇದ ಭಾವ ಇಲ್ಲ. ಬಿಲ್ಲವ ಸಮಾಜಕ್ಕೆ ಎಷ್ಟು ಅಪಮಾನ ಮಾಡಿದ್ರು. ಮುಸಲ್ಮಾನರು ಆದರೂ ಆಗಬಹುದು ಬಿಲ್ಲವರಲ್ಲ ಅಂತ ನಿಮ್ಮ ಪಕ್ಷದವರೇ ಹೇಳಿದ್ರು.
ಕೋಟಿ ಚೆನ್ನಯರ ಬಗ್ಗೆ ಅವಹೇಳನ ಮಾಡಿದ ವ್ಯಕ್ತಿಯನ್ನು ನಿಮ್ಮದೇ ವಾಹನದಲ್ಲಿ ಕರೆದುಕೊಂಡು ಬರುತ್ತೀರಾ. ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯ ತಿರಸ್ಕರಿಸಿದ ಚಕ್ರತೀರ್ಥನನ್ನ ಮೆರವಣಿಗೆ ಮೂಲಕ ಕರೆದು ತರುತ್ತೀರಾ? ರಾಜ್ಯದ ಯಾವುದಾದರು ಶಾಸಕ ರೋಹಿತ್ ಚಕ್ರತೀರ್ಥನಿಗೆ ಸನ್ಮಾನ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು. ಈಗ ಎಲ್ಲಿ ಹೋದರೂ ಬಿಲ್ಲವರು ಎಂದು ಅಪಹಾಸ್ಯ ಮಾಡುತ್ತಿರಾ? ಬೆಳ್ತಂಗಡಿಯಲ್ಲಿ ಬಿಲ್ಲವ ಸಮಾಜವನ್ನೇ ವಿಭಜನೆ ಮಾಡಿದ್ದಾರೆ. ಇದರಿಂದ ಹಿಂದೂ ಸಮಾಜಕ್ಕೆ ಅಪಮಾನ ಮಾಡಿದ್ದೀರಾ. ಮರ ಕದ್ದ ವ್ಯಕ್ತಿಯನ್ನು ಬಂಧಿಸಿದ ಮಹಿಳಾ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದೀರಿ. ಇದು ಹರೀಶ್ ಪೂಂಜರವರ ಹಿಂದುತ್ವನಾ ಸತ್ಯಜಿತ್ ಸುರತ್ಕಲ್ ವಾಗ್ದಾಳಿ ನಡೆಸಿದರು.