ಕಡಬ: ಚಲಿಸುತ್ತಿರುವ ಬಸ್ ನಿಂದ ಬಿದ್ದು ಮಹಿಳೆ ಜಖಂ

ಸಮಗ್ರ ನ್ಯೂಸ್: ಚಲಿಸುತ್ತಿದ್ದ ಬಸ್ಸಿನಿಂದ ಮಹಿಳೆಯೊಬ್ಬರು ರಸ್ತೆಗೆ ಬಿದ್ದು ಜಖಂಗೊಂಡಿರುವ ಘಟನೆ ಕಡಬ ತಾಲೂಕಿನ ಆಲಂಕಾರು ಎಂಬಲ್ಲಿ ನಡೆದಿದೆ. ಮಹಿಳೆಯನ್ನು ಇಲ್ಲಿನ ಶಾರದಾ ನಗರದ ಗುಲಾಬಿ ಎಂದು ಗುರುತಿಸಲಾಗಿದೆ.

Ad Widget ... ..

ಬಸ್ ಮಂಗಳೂರು ಕೇಂದ್ರ ನಿಲ್ದಾಣದಿಂದ ಹೊರಟಿದ್ದು, ಉಪ್ಪಿನಂಗಡಿ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ಗೋಳಿತ್ತಡಿ ಎಂಬಲ್ಲಿಂದ ಬಸ್ಸ್ ಗೆ ಹತ್ತಿದ ಮಹಿಳೆ ಆಲಂಕಾರಿನ ಮುಖ್ಯ ಪೇಟೆ ಸಮೀಪಿಸುತ್ತಿದಂತೆ ಬಸ್ಸಿನಿಂದ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.

Ad Widget

ತಕ್ಷಣ ಅವರಿಗೆ ಹತ್ತಿರದ ಕ್ಲಿನಿಕ್ ನಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಸ್ಸಿನ ಚಾಲಕ ಶಿವಕುಮಾರ್‌ 108 ಆಂಬ್ಯುಲೆನ್ಸ್‌ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *