ಸಮಗ್ರ ನ್ಯೂಸ್:ಅಥಣಿ ತಾಲೂಕಿನ ಪೂರ್ವ ಹಾಗು ಪಶ್ಚಿಮ ಭಾಗದ ಗ್ರಾಮಗಳಲ್ಲಿ ಮಂಗಳವಾರ ಮಧ್ಯಾಹ್ನ ಬಿರುಗಾಳಿಯೊಂದಿಗೆ ಸುರಿದ ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ದ್ರಾಕ್ಷಿ ಬೆಳೆ ಹಾಗೂ ಮನೆಗಳಿಗೆ ಹಾನಿಯಾಗಿದೆ.
ಅಥಣಿ ತಾಲೂಕಿನ ತಾವಂಶಿ ಗ್ರಾಮದಲ್ಲಿ ಗುಡುಗು ಗಾಳಿ ಸಮೇತವಾಗಿ ಆಲಿಕಲ್ಲು ಮಳೆಯಾಗಿ ಮ ಅವಾಂತರವನ್ನ ಸೃಷ್ಟಿಮಾಡಿದೆ ,ತಾಂವಶಿ ಗ್ರಾಮದ ಮುರುಗೆಪ್ಪ ಇಮಗೌಡರ್ ಇವರಿಗೆ ಸೇರಿದ್ದ ದನಗಳ ಕೊಠಡಿಯ ಮೇಲ್ಚಾವಣಿ ಹಾರಿ ಹೋಗಿ ಆಹಾರ ಧಾನ್ಯ ಹಾಗೂ ಗೃಹೋಪಯೋಗಿ ಸಲಕರಣೆಗಳು ಸಂಪೂರ್ಣವಾಗಿ ಹಾಳಾಗಿವೆ.
ಕೋಹಳ್ಳಿ ಗ್ರಾಮದ ನೀವಾಸಿಗಳಾದ ಗಂಗವ್ವ ಮಲ್ಲಪ್ಪ ತಳವಾರ,ಮಾಹಾಂತೇಶ ಗುಡ್ಡಾಪೂರ ಸೆರಿದಂತೆ ಹಲವರಮನೆಯ ಮೇಲ್ಚಾವಣಿ ಗಾಳಿ ರಭಸಕ್ಕೆ ಹಾರಿ ಹೋಗಿವೆ. ದ್ರಾಕ್ಷೀ ಬೆಳೆಗೆ ಆಸೆರೆಯಾಗಿದ್ದ ಕಂಬಗಳು ನೆಲಕ್ಕುರುಳಿದ ಪರಿಣಾಮ ದ್ರಾಕ್ಷೀ ಬೆಳೆ ಹಾನಿಯಾಗಿದ್ದು ರೈತರು ಕಂಗಾಲಾಗಿದ್ದಾರೆ.