ಸಮಗ್ರ ನ್ಯೂಸ್: ಸ್ಕೂಟಿ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾಣಿ-ಮೈಸೂರು ರಾ.ಹೆದ್ದಾರಿಯ ಅರಂತೋಡು ಮರ್ಕಂಜ ಕ್ರಾಸ್ ಬಳಿ ನಡೆದಿದೆ.

ಮೃತಪಟ್ಟ ಸ್ಕೂಟಿ ಸವಾರನನ್ನು ಸುಳ್ಯದ ಕುಕ್ಕುಜಡ್ಕ ಮೂಲದ ನವೀನ್(30) ಎಂದು ಹೇಳಲಾಗಿದೆ. ಕಾರು ಮಂಡ್ಯ ಮೂಲದ್ದಾಗಿದ್ದು ಮಡಿಕೇರಿಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿತ್ತು.
ಈ ವೇಳೆ ಅರಂತೋಡು ಮರ್ಕಂಜ ಕ್ರಾಸ್ ಬಳಿ ಕಲ್ಲುಗುಂಡಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ.

ಘಟನೆ ಪರಿಣಾಮ ಸ್ಕೂಟಿ ನಜ್ಜುಗುಜ್ಜಾಗಿದ್ದು ಸವಾರ ಸ್ಥಳದಲ್ಲಿ ಸಾವನಪ್ಪಿದ್ದಾನೆ.