ಚಿಕ್ಕಮಗಳೂರು : ಕಾಲುವೆಯಲ್ಲಿ ಮುಳುಗಿ ಮೂವರ ಸಾವು

ಸಮಗ್ರ ನ್ಯೂಸ್: ಕಾಲುವೆಯಲ್ಲಿ ಮುಳುಗಿ ಮೂವರ ಸಾವನಪ್ಪಿದ ಘಟನೆ ತರೀಕೆರೆ ತಾಲೂಕಿನ ಭದ್ರಾ ಡ್ಯಾಂ ಪತಪ್ಪಿ ಕಾಲುವೆಯಲ್ಲಿ ಸಂಭವಿಸಿದೆ.

Ad Widget ... ..

ರವಿ (31), ಅನನ್ಯ (17), ಶಾಮವೇಣಿ (16) ಮೃತ ದುರ್ದೈವಿಗಳು.ರವಿ ಮೂಲತಃ ಲಕ್ಕವಳ್ಳಿ ನಿವಾಸಿ, ಅನನ್ಯ, ಶಾಮವೇಣಿ ರವಿಯ ಸಹೋದರಿಯರ ಮಕ್ಕಳು ಮತ್ತು ಅನನ್ಯ ಮೂಲತಃ ಶಿವಮೊಗ್ಗ, ಶಾಮವೇಣಿ ನಂಜನಗೂಡಿನವರಾಗಿದ್ದಾರೆ. ಇವರು ಸಂಬಂಧಿ ಮನೆ ಲಕ್ಕವಳ್ಳಿಗೆ ಬಂದಿದ್ದರು. ಈ ವೇಳೆ ನೀರಿನಲ್ಲಿ ಆಟವಾಡುವಾಗ ಆಯಾ ತಪ್ಪಿ ಬಿದ್ದು ಸಾವನಪ್ಪಿದ್ದಾರೆ.

Ad Widget

ಘಟನೆಯಾದಗ ಒಬ್ಬರ ರಕ್ಷಣೆಗೆ ಮತ್ತೊಬ್ಬರು ತೆರಳಿದಾಗ ಮೂವರು ಸಾವನಪ್ಪಿದ್ದಾರೆ.

ಇನ್ನೂ ರವಿ ಮೃತದೇಹ ಪತ್ತೆಯಾಗಿದ್ದು ಮತ್ತಿಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.

ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *