Ad Widget .

ಪ್ಲೇಆಪ್ ನಲ್ಲೇ ಹೊರಗುಳಿದ ಆರ್ ಸಿಬಿ| ಈ ಸಲವೂ ಕಫ್ ನಮ್ದಲ್ಲ!!

ಸಮಗ್ರ ನ್ಯೂಸ್: 16ನೇ ಆವೃತ್ತಿಯ ಐಪಿಎಲ್ ನಲ್ಲಿ ಕಪ್ ಗೆಲ್ಲುವ ಆರ್‌ಸಿಬಿ ಕನಸು ಈಡೇರಿಲ್ಲ. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್‌ಸಿಬಿ ಆರು ವಿಕೆಟ್ ಗಳಿಂದ ಸೋತು ಪ್ಲೇ ಆಫ್ ಎಂಟ್ರಿಯಿಂದ ಹೊರಗುಳಿದಿದೆ. ಈ ಮೂಲಕ ಐಪಿಎಲ್ ನ ಈ ಆವೃತ್ತಿಯಲ್ಲೂ ಕಪ್ ವಂಚಿತವಾಗಿದೆ.

Ad Widget . Ad Widget .

ಆದರೆ ಆರ್.ಸಿ.ಬಿ. ಆಟಗಾರ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. 61 ಎಸೆತಗಳಲ್ಲಿ ಅಜೇಯ 101 ರನ್ ಗಳಿಸಿದ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

Ad Widget . Ad Widget .

ಅವರು ಐಪಿಎಲ್ ನಲ್ಲಿ 7ನೇ ಶತಕ ಪೂರೈಸಿದ್ದು, ಕ್ರಿಸ್ ಗೇಲ್ ಅವರ ಆರು ಶತಕದ ದಾಖಲೆಯನ್ನು ಹಿಂದಿಕ್ಕಿದ್ದಾರೆ. 2016ರಲ್ಲಿ ವಿರಾಟ್ ಕೊಹ್ಲಿ 4 ಶತಕ ಸಿಡಿಸಿದ್ದರು. 2019ರಲ್ಲಿ ಮತ್ತೊಂದು ಶತಕ ಬಾರಿಸಿದ್ದ ಅವರು ಈ ವರ್ಷ ಎರಡು ಶತಕ ಬಾರಿಸಿ ಕ್ರಿಸ್ ಗೇಲ್ ಹೆಸರಿನಲ್ಲಿದ್ದ 6 ಶತಕದ ದಾಖಲೆಯನ್ನು ಹಿಂದಿದ್ದಾರೆ.

ಜೋಸ್ ಬಟ್ಲರ್ 5, ವಾರ್ನರ್, ಶೇನ್ ವಾಟ್ಸನ್, ಕೆ.ಎಲ್. ರಾಹುಲ್ ತಲಾ 4 ಶತಕ ಬಾರಿಸಿದ್ದಾರೆ. ವಿರಾಟ್ ಕೊಹ್ಲಿ 4 ಶತಕಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಡಿಸಿರುವುದು ವಿಶೇಷವಾಗಿದೆ.

2023ರ ಐಪಿಎಲ್ ಹಲವು ಹೊಸ ದಾಖಲೆಗಳಿಗೆ ಸಾಕ್ಷಿಯಾಗಿದ್ದು, ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದು ಆವೃತ್ತಿಯಲ್ಲಿ 11 ಶತಕಗಳು ದಾಖಲಾಗಿವೆ. 2018ರ ಆವೃತ್ತಿಯಲ್ಲಿ 8 ಶತಕ ದಾಖಲಾಗಿದ್ದವು.

Leave a Comment

Your email address will not be published. Required fields are marked *