Ad Widget .

ಇಂದಿನಿಂದ ಮೂರು ದಿನ‌ ರಾಜ್ಯ ವಿಧಾನಮಂಡಲ ವಿಶೇಷ ಅಧಿವೇಶನ

ಸಮಗ್ರ ನ್ಯೂಸ್: ಇಂದಿನಿಂದ (ಮೇ.22ರಿಂದ 24) ಮೂರು ದಿನ ವಿಧಾನಸಭಾ ಅಧಿವೇಶನ ನಡೆಯಲಿದ್ದು, ಮೊದಲ ಎರಡು ದಿನ ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೊನೆ ದಿನ ವಿಧಾನಸಭಾ ಸ್ಪೀಕರ್​​​ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

Ad Widget . Ad Widget .

ಸೋಮವಾರ ಬೆಳಿಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗಲಿದೆ. ನೂತನ ಸದಸ್ಯರಿಗೆ ಹಂಗಾಮಿ ಸ್ಪೀಕರ್​ ಆಗಿ ಆಯ್ಕೆಯಾಗಿರುವ ಆರ್​.ವಿ ದೇಶಪಾಂಡೆಯವರು ಪ್ರಮಾಣ ವಚನ ಬೋಧನೆ ಮಾಡಲಿದ್ದಾರೆ. ವಿಧಾನಸಭೆಯ ಅವಧಿ ಮೇ 23ಕ್ಕೆ ಅಂತ್ಯವಾಗಿದ್ದು, ಈ ತಿಂಗಳು 23ರರೊಳಗೆ ಶಾಸಕರ ಪ್ರಮಾಣವಚನ ಸ್ವೀಕಾರ ಪೂರ್ಣಗೊಳ್ಳಬೇಕು. ಜುಲೈ ತಿಂಗಳಿನಲ್ಲಿ ಬಜೆಟ್ ಮಂಡಿಸಲಾಗುವುದು.‌ ಐದು ಗ್ಯಾರಂಟಿಗಳ ಅನುಷ್ಠಾನ ಸೇರಿದಂತೆ ಸರ್ಕಾರದ ಹೊಸ ಕಾರ್ಯಕ್ರಮಗಳಿಗೆ ಅಗತ್ಯ ಅನುದಾನ ಒದಗಿಸಲಾಗುವುದು.

Ad Widget . Ad Widget .

ಸ್ಪೀಕರ್ ಸ್ಥಾನಕ್ಕೆ ಹಿರಿಯ ನಾಯಕರಾದ ಆರ್​.ವಿ ದೇಶಪಾಂಡೆ, ಹೆಚ್​.ಕೆ ಪಾಟೀಲ್​​ ಹಾಗೂ ಟಿ.ಬಿ ಜಯಚಂದ್ರ ಹೆಸರು ಕೇಳಿ ಬಂದಿದೆ.

Leave a Comment

Your email address will not be published. Required fields are marked *