Ad Widget .

ಬೆಂಗಳೂರು – ಚಿಕ್ಕಮಗಳೂರು ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭ

ಸಮಗ್ರ ನ್ಯೂಸ್: ಪರಿಸರ ಸ್ನೇಹಿ ಸಾರಿಗೆ ಸೇವೆಗೆ ಆದ್ಯತೆ ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಹೊಸದಾಗಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ 6 ಇವಿ ಪವರ್‌ ಪ್ಲಸ್‌ ಎಂಬ ಎಲೆಕ್ಟ್ರಿಕ್‌ ಬಸ್‌ ಸೇವೆಯನ್ನು ಮೇ 19 ರಿಂದ ಆರಂಭಿಸಿದೆ.

Ad Widget . Ad Widget .

ಈ ಮೂಲಕ ಬೆಂಗಳೂರು- ಚಿಕ್ಕಮಗಳೂರು ಸಂಪರ್ಕದ ನಡುವೆ ಬರುವ ಹಾಸನ-ಬೇಲೂರು ಪ್ರಯಾಣಿಕರಿಗೂ ಸುಖಾಸೀನ ಎಲೆಕ್ಟ್ರಿಕ್‌ ಬಸ್‌ ಪ್ರಯಾಣದ ಅನುಕೂಲ ಸಿಕ್ಕಂತಾಗಿದೆ.

Ad Widget . Ad Widget .

ಬೆಂಗಳೂರಿನಿಂದ ನಿತ್ಯ ಬೆಳಿಗ್ಗೆ 5 ಗಂಟೆಯಿಂದ ಸಂಚಾರ ಆರಂಭವಾಗಲಿದ್ದು, ಬೆಳಿಗ್ಗೆ 6 ಗಂಟೆ, 8 ಗಂಟೆ ಮಧ್ಯಾಹ್ನ 2.30ಕ್ಕೆ, ಸಂಜೆ 6 ಗಂಟೆ ಮತ್ತು ಮಧ್ಯರಾತ್ರಿ 12 ಗಂಟೆ ಈ ಬಸ್‌ಗಳು ಹೊರಡುತ್ತವೆ.

ಡೀಸೆಲ್ ಎಂಜಿನ್ ವಾಹನವಾದ ಐರಾವತ ಬಸ್ ಮಾದರಿಯಲ್ಲಿಯೇ ಎಸಿ, ಪುಶ್ ಬ್ಯಾಕ್ ಸೀಟರ್‌ನೊಂದಿಗೆ ಆರಾಮದಾಯಕ ಪ್ರಯಾಣದ ಅನುಭವ ಸಿಗಲಿದೆ. ಎಲೆಕ್ಟ್ರಿಕ್ ಬಸ್‌ನಲ್ಲಿ ಶಬ್ದ ಮಾಲಿನ್ಯ ಕಡಿಮೆ ಹಾಗೂ ಡೀಸೆಲ್ ವಾಹನಕ್ಕೆ ಹೋಲಿಸಿದರೆ ಹೆಚ್ಚು ಉತ್ತಮವಾಗಿದೆ ಎನ್ನುವುದು ಪ್ರಯಾಣಿಕರ ಮಾತು.

ಸಾರಿಗೆ ಇಲಾಖೆಯ ವೇಗ ನಿಯಂತ್ರಣ ನಿಯಮದಂತೆ ಗಂಟೆಗೆ 90 ಕಿ.ಮೀ. ವೇಗದಲ್ಲಿ ಸಂಚರಿಸಲಿದ್ದು, ಸುರಕ್ಷಿತ ಪ್ರಯಾಣಕ್ಕೆ ಎಂದಿನಂತೆ ಸಾರಿಗೆ ಸೇವೆ ಉಪಯುಕ್ತವಾಗಿದೆ ಎನ್ನುತ್ತಾರೆ ಸಾರಿಗೆ ಇಲಾಖೆ ಅಧಿಕಾರಿಗಳು.

ಬೆಂಗಳೂರಿನಿಂದ – ಚಿಕ್ಕಮಗಳೂರು ಟಿಕೆಟ್ ದರ ₹ 540 ಇದ್ದು, ವಾರಾಂತ್ಯದಲ್ಲಿ ₹ 600 ನಿಗದಿ ಮಾಡಲಾಗಿದೆ. ಈ‌ ಮಾರ್ಗದಲ್ಲಿ ಸಂಚಾರ ಮಾಡುವ ಬಸ್ ಕಡಿಮೆ ನಿಲುಗಡೆ ಇರುವ ಕಾರಣ ತಡೆರಹಿತ ಪ್ರಯಾಣಕ್ಕೆ ಹೆಚ್ಚು ಸೂಕ್ತ. ಒಂದು ಬಾರಿ ಈ ವಾಹನಗಳನ್ನು ಚಾರ್ಜ್ ಮಾಡಿದರೆ 300 ಕಿ.ಮೀ. ಕ್ರಮಿಸಲಿದ್ದು, ರಿಚಾರ್ಜ್ ಮಾಡಲು 2 ಗಂಟೆ ತಗುಲುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Comment

Your email address will not be published. Required fields are marked *